ಎಸ್.ಎಮ್. ಜಾವಿದ್ ಬಾತಿನ್ ಸಂತಾಪ ಸೂಚಕ ಸಭೆ. ಗಣ್ಯರಿಂದ ಗುಣಗಾನ
ಎಸ್.ಎಮ್. ಜಾವಿದ್ ಬಾತಿನ್ ಸಂತಾಪ ಸೂಚಕ ಸಭೆ. ಗಣ್ಯರಿಂದ ಗುಣಗಾನ
ಭಟ್ಕಳ:೫, ಇಲ್ಲಿನ ಸಾಮಾಜಿಕ ಕಾರ್ಯಕರ್ತ ಅಂಜುಮನ್ ಹಾಗೂ ತಂಝೀಮ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಎಸ್.ಎಮ್. ಸೈಯ್ಯದ್ ಆಹ್ಮದ್ ಜಾವಿದ್ ಬಾತಿನ್ ಇತ್ತಿಚೆಗೆ ನಡೆದ ಅಪಘಾತವೊಂದರಲ್ಲಿ ಸಾವಪ್ಪಿದ್ದು ಇಲ್ಲಿನ ಎಲ್ಲರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ ಎಂದು ಶಾಸಕ ಜೆ.ಡಿ. ನಾಯ್ಕ ಅಭಪ್ರಯಾಪಟ್ಟರು. ಅವರು ರವಿವಾರ ರಾತ್ರಿ ೯-೦೦ ಗಂಟೆಗೆ ಫಾರೂಖಿ ಸ್ಟ್ರೀಟ್ ನ ಬರ್ನಿ ಮೈದಾನದಲ್ಲಿ ಅಸದುಲ್ಲಾ ಸ್ಪೋರ್ಟ್ಸ್ ಅಸೋಸೊಯೇಶನ್ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಿದ್ದರು.
ಜಾವೀದ್ ಓರ್ವ ನ್ಯಾಯವಾದಿ ಸಮಾಜದ ಎಲ್ಲರೊಂದಿಗೆ ಹೊಂದಾಣಿಕೆಯಿಂದ ಇದ್ದರು ಯಾವುದೇ ಕೆಲಸವಾಗಲಿ ಹಿಂಜರಿಯದೆ ದೈರ್ಯದಿಂದ ಸಾಧಿಸುವಂತಹ ಛಲಗಾರಿಕೆಯನ್ನು ಹೊಂದಿದ್ದರು ಅವರ ಅಗಲಿಕೆಯಿಂದಾಗಿ ಭಟ್ಕಳದ ಮುಸ್ಲಿಮ್ ಸಮುದಾಯಕ್ಕಷ್ಟೆಯಲ್ಲದೆ ಇಡಿ ಭಟ್ಕಳಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಕಾಂಗೈ ಮುಖಂಡ ರಾಮ ಮೊಗೆರ್ ಮಾತನಾಡಿ ಸದಾ ಭಟ್ಕಳದ ಅಭಿವೃದ್ಧಿಯ ಕನಸ್ಸು ಕಾಣುವ ಯುವ ನ್ಯಾಯವಾದಿ ಇಲ್ಲಿನ ಹಿಂದು-ಮುಸ್ಲಿಮ್ ಸೌಹಾರ್ಧತೆಯ ಕುರಿತು ಸದಾ ಚಿಂತಿಸುತ್ತದ್ದರು ನೇರ ನುಡಿಯ ಪ್ರಾಮಾಣಿಕ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಇದು ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದರು.
ನ್ಯಾಯವಾದಿ ನಾಗರಾಜ್ ಇ.ಎಚ್. ಜಾವಿದ್ ಬಾತಿನ್ ತಮ್ಮೊಂದಿಗೆ ಎರಡು ವರ್ಷಗಳ ಕಾಲ ಒಂದೇ ಕೋಣೆಯಲ್ಲಿ ಸಹವಾಸಿಯಾಗಿದ್ದು ಅವರನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರಲ್ಲಿ ಜಾತ್ಯಾತೀತ ಮನೋಭಾವನೆಯ ಸಾಮಾಜಿಕ ಕಳಕಳಿಗಾಗಿ ಮಿಡಿಯುವಂತಹ ಹೃದಯವಿತ್ತು ಅವರು ನನ್ನ ಹಿರಿಯ ಸಹೋದರನಂತೆ ಪ್ರತಿಯೊಂದು ವಿಷಯದಲ್ಲಿ ಮಾರ್ಗದರ್ಶನವನ್ನು ಮಾಡಿದ್ದು ಅವರನ್ನು ನಾನೆಂದಿಗು ಮರೆಯಲು ಸಾಧ್ಯವಿಲ್ಲ ಎಂದರು. ತಂಝೀಮ್ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಎಮ್.ಎಮ್. ಹನೀಫ್ ಶಬಾಬ್ ಮಾತನಾಡಿ ಜಾವಿದ್ ಬಾತಿನ್ ತಮ್ಮೊಂದಿಗಿದ್ದ ಒಡನಾಡಿತನವನ್ನು ವಿವರಿಸಿ ಅವರು ಪ್ರತಿಭೆಗಳ ಮಾಲಿಕರಾಗಿದ್ದರು ಆದರೆ ಯಾವುದೆ ಕ್ಷೇತ್ರದಲ್ಲಿ ಮುನ್ನೆಡೆಯಲಿಲ್ಲ. ಅಂತಹ ಅವಕಾಶ ಬರುವುದಕ್ಕೆ ಮುಂಚೆ ಇಹಲೋಕವನ್ನು ತ್ಯಜಿಸಬೇಕಾಗಿ ಬಂತು ದೇವರು ಅವರನ್ನು ಪರಲೋಕದಲ್ಲಿ ಸತ್ಕರಿಸಲಿ ಎಂದರು. ಅಂಜುಮನ್ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥ ಡಾ. ಷಾಹ ರಿಷಾದ್ ಉಸ್ಮಾನಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಂಝೀಮ್ ಕಾರ್ಯದರ್ಶಿ ಎಮ್. ಜೆ. ಅಬ್ದುಲ್ ರಖೀಬ್, ಸುಭ್ರಮಣ್ಯ ಹೊನ್ನಾವರ, ಹೊನ್ನಾವರ ತಾಲೂಕಾ ಜೆ.ಡಿ.ಎಸ್. ಮುಖಂಡ ಜಿ.ಎನ್.ಗೌಡ, ನ್ಯಾಯವಾದಿ ವಿಕ್ಟರ್ ಗೋಮ್ಸ್, ಭಟ್ಕಳ ತಾಲೂಕಾ ಕಾರ್ಯನಿರತ ಸಂಘದ ಪ್ರಧಾನ ಕಾರ್ಯದರ್ಶಿ ಎಮ್.ಆರ್.ಮಾನ್ವಿ, ಮೌಲಾನ ಜಾಫರ್ ನದ್ವಿ, ರಾಬಿತಾ ಸೂಸೈಟಿ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಕ್ವಾಜಾ ಅವೇಸ್ ರುಕ್ನುದ್ದೀನ್ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸದುಲ್ಲಾ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಜೆ.ಡಿ.ಎಸ್. ಕಾರ್ಯಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ವಹಿಸಿದ್ದರು. ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ, ಎಸ್.ಜೆ. ಹಾಶಿಮ್, ತಂಝೀಮ್ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಖಾಲಿದ್, ಜಮಾತುಲ್ ಮುಸ್ಲಿಮೀನ್ ಭಟ್ಕಳ ಖಾಝಿ ಮೌಲಾನ ಮುಲ್ಲಾ ಇಖ್ಬಾಲ್ ನದ್ವಿ, ನ್ಯಾಯವಾದಿ ಸಲೀಮ್ ಆಹ್ಮದ್ ಖಾನ್, ಫಾರೂಖ್ ಶಾಬಂದ್ರಿ, ಮತ್ತಿರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ