‘ಮಹಿಳೆಯರ ಶೋಷಣೆ ಮುಕ್ತ ಬದುಕು ರೂಪಿಸಲು ಇದು ಸೂಕ್ತ ಸಮಯ’
ಮಾ.೮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಈ ಲೇಖನ ಎಂ.ಆರ್.ಮಾನ್ವಿ. ೨೦೧೩ನೇ ಮಾರ್ಚ ೮ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರಲ್ಲೇನು ವಿಶೇಷ, ಪ್ರತಿವರ್ಷವೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಎನ್ನವುದು ನಿಮ್ಮ ಪ್ರಶ್ನೆಯಾಗಿದ್ದರೆ ಖಂಡಿತವಾಗಿಯೂ ನಿಮ್ಮ ಪ್ರಶ್ನೆ ಸಹಜವಾದುದೇ. ಆದರೆ ಬಾರಿಯ ದಿನಾಚರಣೆಗೊಂದು ಮಹತ್ವ ಇರುವುದು ಅದರ ಘೋಷವಾಖ್ಯದಲ್ಲಿ. A promise is a promise: time for action to end violence against women’ “ಮಹಿಳೆಯ ಶೋಷಣೆ ಕೊನೆಗಾಣಿಸಲು ಇದು ಸೂಕ್ತ ಸಮಯ; ಇದೊಂದು ಪ್ರತಿಜ್ಞೆ” ಎನ್ನುವ ಸಂಕಲ್ಪದೊಂದಿಗೆ ೨೦೧೩ನೇ ವರ್ಷವನ್ನು ಆಚರಿಸುತ್ತಿರುವುದೇ ಇದಕ್ಕೆ ಕಾರಣ. ಇತ್ತಿಚೆಗೆ ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ಶೋಷಣೆ, ದೌರ್ಜನ್ಯದ ಹಿನ್ನೆಲೆಯಲ್ಲಿ ಇಂತಹದ್ದೊಂದು ಘೋಷವ್ಯಾಖ್ಯ ಬಹಳ ಮಹತ್ವ ಪಡೆದುಕೊಂಡಿದೆ. ನಿಜಕ್ಕೂ ಮಹಿಳೆಯರ ಮೇಲಿನ ಶೋಷಣೆಯನ್ನು ಕೊನೆಗಾಣಿಸಲು ಇದು ಸೂಕ್ತ ಸಮಯ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ನಡೆದ ಮಹಿಳಾ ದೌರ್ಜನ್ಯಗಳು, ಶೋಷಣೆಗಳು ಲೆಕ್ಕ ಹಾಕಿದರೆ ಬರೆಯಲು ಪುಟಗಳು ಸಾಲವು. ನಮ್ಮ ಕಾನೂನು ಮಹಿಳೆಯರಿಗೆ ಯಾವ ರೀತಿಯ ರಕ್ಷಣೆಯ ಭರವಸೆಯನ್ನು ನೀಡಿದೆಯೂ ಅದಕ್ಕಿಂತ ಹತ್ತುಪಟ್ಟು ಮಹಿಳಾ ಶೋಷಣೆಯ ಘಟನ...