ಪ್ರವಾದಿ ಮುಹಮ್ಮದ್ ಈ ಜಗತ್ತು ಕಂಡ ಅದ್ಬುತ ವ್ಯಕ್ತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಮತ.
ಪ್ರವಾದಿ ಮುಹಮ್ಮದ್ ಈ ಜಗತ್ತು ಕಂಡ ಅದ್ಬುತ ವ್ಯಕ್ತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಮತ. ಭಟ್ಕಳ: ಈ ಜಗತ್ತಿನ ಪ್ರತಿಯೊಂದು ರಂಗದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕೆಂದು ತೋರಿಸಿದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರರು ಈ ಜಗತ್ತು ಕಂಡ ಒಂದು ಅದ್ಬುತ ವ್ಯಕ್ತಿಯಾಗಿದ್ದಾರೆ ಎಂದು ರಾಮಕ್ಷೇತ್ರ ಧರ್ಮಸ್ಥಳದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಸಂಜೆ ಭಟ್ಕಳದ ಹೋಟೆಲ್ ಟಿ.ಎಫ್.ಸಿ. ಹತ್ತಿರ ಮೈದಾನದಲ್ಲಿ ಎಸ್.ಐ.ಓ ಭಟ್ಕಳ ಶಾಖೆಯ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈಜಗತ್ತು ಯಾವ ರೀತಿ ಬಾಳಿ ಬದುಕಬೇಕು ಎಂಬುವುದನ್ನು ತಮ್ಮ ಸಂದೇಶ ಹಾಗೂ ಚಾರಿತ್ಯ್ರದ ಮೂಲಕ ತೋರಿಸಿಕೊಟ್ಟಂತಹ ಮಹಾನ್ ಚೈತನ್ಯ ಎಂದು ಬಿಂಬಿಸಿದ ಅವರು ಇಂದು ಅವರ ಅನುಯಾಯಿಗಳು ಪ್ರವಾದಿಯ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿಷಾಧಿಸಿದರು. ಮುಸ್ಲಿಮ ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆಯಬೇಕು, ಧರ್ಮಾಚರಣೆ ಬೇಕು ಧರ್ಮಾಂಧತೆ ಬೇಡ ಎಂಬ ಕಿವಿಮಾತನ್ನು ಹೇಳಿದ ಸ್ವಾಮಿಗಳು ಈ ದೇಶದ ಐಕ್ಯತೆಯು ರಾಜಕೀಯ ಕಾರಣಗಳಿಂದ ಹಾಳಾಗುತ್ತಿದೆ ಎಂದರು.ಯುವಕರು ತಮ್ಮ ಮನಸ್ಸು ಮತ್ತು ಬುದ್ದಿಯನ್ನು ಸ್ಥೀಮಿತದಲ್ಲಿಟ್ಟುಕೊಳ್ಳಬೇಕೆಂದು ಕಿವಿ ಮಾತು ಹೇಳಿದ್ದು ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿ ಇಂದು ಯುವ ಸಮುದಾಯ ಭಯೋತ್ಪಾದನೆಯ ದಾರಿಯನ್ನು ...