ಪರಿಕ್ಷಾ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಬೇಡ, ನಿರಂತರ ವಿದ್ಯುತ್ ನೀಡಿ. ಎಸ್.ಐ.ಓ ಆಗ್ರಹ

 
ಪರಿಕ್ಷಾ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಬೇಡ, ನಿರಂತರ ವಿದ್ಯುತ್ ನೀಡಿ.  ಎಸ್.ಐ.ಓ ಆಗ್ರಹ

ಭಟ್ಕಳ:ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಪದೇ ಪದೇ ವಿದ್ಯುತ್ ಲೋಡ್ ಶೆಡ್ಡಿಂಗ್ ಹೇರುವುದನ್ನು ಬಲವಾಗಿ ಖಂಡಿಸಿದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಎಸ್.ಐ.ಓ ಭಟ್ಕಳ ಘಟಕವು ಗುರುವಾರದಂದು ಇಲ್ಲಿನ ಸಹಾಯಕ ಕಮಿಷನರ್ ಕಛೇರಿಯಲ್ಲಿ ಪ್ರತಿಭಟನೆಯನ್ನು ವ್ಯಕ್ತ ಪಡಿಸಿ ಪರಿಕ್ಷೆ ಮುಗಿಯುವರೆಗೂ ದಿನದ ೨೪ ಗಂಟೆಯು ವಿದ್ಯುತ್ ನೀಡುವಂತೆ ಆಗ್ರಹಿಸಿತು. 
ಪರಿಕ್ಷಾ ಸಮಯದಲ್ಲಿ ಪದೇ ಪದೇ ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಪ್ರತಿಕೂಲ ಪರಿಣಾಮ ಬೀರುತ್ತದೆ, ವಿದ್ಯಾಥಿಗಳು ಭವಿಷ್ಯದ ಸಂಪತ್ತಾಗಿದ್ದು ಅವರು ಆಗಾಗ ಕೈ ಕೊಡುವ ವಿದ್ಯುತ್ ಸಮಸ್ಯೆಯಿಂದ ತೀವ್ರವಾದ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದು ಅವರ ಮುಂಬರುವ ಭವಿಷ್ಯದ ಮೇಲೆ ಗಾಢ ಪರಿಣಾಮ ಬೀರಬಲ್ಲುದು. ಎಂದು ಅದು ಸಹಾಯಕ ಕಮಿಷನರ್ ಗೆ ನೀಡಿದ ಮನವಿಯಲ್ಲಿ ತಿಳಿಸಿದೆ. ಮನವಿಯಲ್ಲಿ ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದು ಮೇ ತಿಂಗಳ ಕೊನೆಯವರೆಗೂ ನಿರಂತರ ೨೪ ಗಂಟೆ ವಿದ್ಯುತ್ ನೀಡಬೇಕು, ಸಾಯಂಕಾಲ ಹಾಗೂ ಬೆಳಿಗ್ಗೆ ವಿದ್ಯಾರ್ಥಿಗಳ ಅಭ್ಯಾಸದ ಸಮಯವಾದ್ದರಿಂದ ಯಾವುದೇ ಕಾರಣಕ್ಕೂ ಆ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಬಾರದು ಎಂಬ ಬೇಡಿಕೆಯನ್ನು ಇಡಲಾಗಿದೆ. ಹಾಗೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಅದು ಅಧಿಕಾರಿಗಳಿಗೆ ಮನವಿಯನ್ನು ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಎಸ್.ಐ.ಓ ಜಿಲ್ಲಾ ಸಂಚಾಲಕ ಸೈಯ್ಯದ್ ಖುತುಬ್ ಬರ್ಮಾವರ್ ನದ್ವಿ, ಭಟ್ಕಳ ಶಾಖೆಯ ಅಧ್ಯಕ್ಷ ನಸೀಫ್ ಇಕ್ಕೇರಿ, ಮಾಜಿ ಜಿಲ್ಲಾ ಸಂಚಾಲಕ ರಿಯಾಝ್ ಆಹ್ಮದ್ ರೋಣ್, ಕಾರ್ಯದರ್ಶಿ ಝಿಯವುರ್ರಹ್ಮಾನ್ ನದ್ವಿ ಮತ್ತಿತರರು ಹಾಜರಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರವಾದಿ ಅನುಸರಣೆಯಿಂದ ಸಕಲ ಸಮಸ್ಯೆಗಳ ಪರಿಹಾರ

ಸ್ಟೀಲ್ ಪಾತ್ರೆಗಳ ಭರಾಟೆಯಲ್ಲಿ ಮರೆಯಾಗುತ್ತಿರುವ ಮಣ್ಣಿನ ಮಡಕೆ