ಭಟ್ಕಳ ಪುರಸಭೆ ಚುನಾವಣೆ
ಭಟ್ಕಳ ಪುರಸಭೆ ಚುನಾವಣೆ;ಗೆದ್ದವರ ಬಾಲ ಹಿಡಿಯುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು *ಎಂ.ಆರ್.ಮಾನ್ವಿ ಸ್ಥಳಿಯಾಡಳಿತ ಚುನಾವಣೆಗಳು ಮುಗಿದು ಫಲಿತಾಂಶವು ಹೊರಬಿದ್ದಿದೆ. ಯಾರ್‍ಯಾರ ಹಣೆಬರಹ ಏನು ಎಂಬುದು ಈಗಾಗಲೇ ಸಾಬೀತಾಗಿದೆ. ಈಗ ಪ್ರಮುಖ ರಾಜಕೀಯ ಪಕ್ಷಕಗಳಲ್ಲಿ ಅಭ್ಯರ್ಥಿಗಳ ಲೆಕ್ಕಚಾರ ಶುರುವಾಗಿದೆ. ಯಾವ ಪಕ್ಷದ ಅಭ್ಯರ್ಥಿಗಳು ಯಾವ ಯಾವ ವಾರ್ಡಿನಲ್ಲಿ ಗೆಲ್ಲುವು ಸಾಧಿಸಿದ್ದಾರೆ ಎನ್ನುವ ಗುಣಕಾರ ಭಾಗಕಾರಗಳು ಪ್ರಾರಂಭವಾಗಿದ್ದು, ಕಾಂಗ್ರೇಸ್, ಜೆ.ಡಿ.ಎಸ್. ಹಾಗೂ ಮಾಜಿ ಸಚಿವರು ಚುನಾವಣೆಯಲ್ಲಿ ಗೆದ್ದವರು ತಮ್ಮ ಬೆಂಬಲಿಗರು ಎಂದು ಹೇಳಿಕೊಳ್ಳುತ್ತ ಗೆದ್ದವರ ಬಾಲ ಹಿಡಿಯುವ ತವಕದಲ್ಲಿದ್ದಾರೆ. ೨೩ಮಂದಿ ಸದಸ್ಯರನ್ನು ಹೊಂದಿರುವ ಭಟ್ಕಳ ಪುರಸಭೆಯಲ್ಲಿ ಕಾಂಗ್ರೇಸ್ ೨ ಜೆ.ಡಿ.ಎಸ್.೧ಕ್ಷೇತ್ರದಲ್ಲಿ ಪಕ್ಷದ ಬ್ಯಾನರ್ ನಡಿ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ ೨೦ ಮಂದಿ ಸದಸ್ಯರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು ಅದರಲ್ಲಿ ೧೩ಮಂದಿ ಸದಸ್ಯರು ಇಲ್ಲಿನ ಪ್ರಮುಖ ರಾಜಕೀಯ,ಸಾಮಾಜಿಕ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್-ವ- ತಂಝೀಮ್ ಹಾಗೂ ಮೊಹಲ್ಲಾಗಳ ಮಸೀದಿ ಕಮಿಟಿಗಳ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಈಗ ಭಟ್ಕಳದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಪತ್ರಿಕಾಗೋಷ್ಟಿಗಳನ್ನು ಕರೆದು ಗೆದ್ದವರಲ್ಲಿ ನಾಲ್ಕು ಮಂದಿ ತಮ್ಮ ಬೆಂಬಲಿಗರು ಎಂದು ಹೇಳಿದರೆ, ಶಾಸಕ ಜ...