ಭಟ್ಕಳ ಪುರಸಭೆ ಚುನಾವಣೆ


ಭಟ್ಕಳ ಪುರಸಭೆ ಚುನಾವಣೆ;ಗೆದ್ದವರ ಬಾಲ ಹಿಡಿಯುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು
*ಎಂ.ಆರ್.ಮಾನ್ವಿ

ಸ್ಥಳಿಯಾಡಳಿತ ಚುನಾವಣೆಗಳು ಮುಗಿದು ಫಲಿತಾಂಶವು ಹೊರಬಿದ್ದಿದೆ. ಯಾರ್‍ಯಾರ ಹಣೆಬರಹ ಏನು ಎಂಬುದು ಈಗಾಗಲೇ ಸಾಬೀತಾಗಿದೆ. ಈಗ ಪ್ರಮುಖ ರಾಜಕೀಯ ಪಕ್ಷಕಗಳಲ್ಲಿ ಅಭ್ಯರ್ಥಿಗಳ ಲೆಕ್ಕಚಾರ ಶುರುವಾಗಿದೆ. ಯಾವ ಪಕ್ಷದ ಅಭ್ಯರ್ಥಿಗಳು ಯಾವ ಯಾವ ವಾರ್ಡಿನಲ್ಲಿ ಗೆಲ್ಲುವು ಸಾಧಿಸಿದ್ದಾರೆ ಎನ್ನುವ ಗುಣಕಾರ ಭಾಗಕಾರಗಳು ಪ್ರಾರಂಭವಾಗಿದ್ದು, ಕಾಂಗ್ರೇಸ್, ಜೆ.ಡಿ.ಎಸ್. ಹಾಗೂ ಮಾಜಿ ಸಚಿವರು ಚುನಾವಣೆಯಲ್ಲಿ ಗೆದ್ದವರು ತಮ್ಮ ಬೆಂಬಲಿಗರು ಎಂದು ಹೇಳಿಕೊಳ್ಳುತ್ತ ಗೆದ್ದವರ ಬಾಲ ಹಿಡಿಯುವ ತವಕದಲ್ಲಿದ್ದಾರೆ. 

೨೩ಮಂದಿ ಸದಸ್ಯರನ್ನು ಹೊಂದಿರುವ ಭಟ್ಕಳ ಪುರಸಭೆಯಲ್ಲಿ ಕಾಂಗ್ರೇಸ್ ೨ ಜೆ.ಡಿ.ಎಸ್.೧ಕ್ಷೇತ್ರದಲ್ಲಿ ಪಕ್ಷದ ಬ್ಯಾನರ್ ನಡಿ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ ೨೦ ಮಂದಿ ಸದಸ್ಯರು ಪಕ್ಷೇತರ ಅಭ್ಯರ್ಥಿಗಳಾಗಿ  ಸ್ಪರ್ಧಿಸಿದ್ದು ಅದರಲ್ಲಿ ೧೩ಮಂದಿ ಸದಸ್ಯರು ಇಲ್ಲಿನ ಪ್ರಮುಖ ರಾಜಕೀಯ,ಸಾಮಾಜಿಕ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್-ವ- ತಂಝೀಮ್ ಹಾಗೂ ಮೊಹಲ್ಲಾಗಳ ಮಸೀದಿ ಕಮಿಟಿಗಳ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. 

ಈಗ ಭಟ್ಕಳದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಪತ್ರಿಕಾಗೋಷ್ಟಿಗಳನ್ನು ಕರೆದು ಗೆದ್ದವರಲ್ಲಿ ನಾಲ್ಕು ಮಂದಿ ತಮ್ಮ ಬೆಂಬಲಿಗರು ಎಂದು ಹೇಳಿದರೆ, ಶಾಸಕ ಜೆ.ಡಿ.ನಾಯ್ಕ ಸ್ವಲ್ಪ ಮುಂದೆ ಹೋಗಿ ಭಟ್ಕಳ ಪುರಸಭೆಯಲ್ಲಿ ೧೫ಮಂದಿ ಸದಸ್ಯರು ತಮ್ಮ ಅಭ್ಯರ್ಥಿಗಳಾಗಿದ್ದು ತಂಝೀಮ್ ಸಂಸ್ಥೆಯೊಂದಿಗೆ ತಾವು ಹೊಂದಾಣಿಕೆ ಮಾಡಿಕೊಂಡಿದ್ದರ ಫಲವಾಗಿ ಈ ಫಲಿತಾಂಶ ಬಂದಿದೆ ಎಂದು ಹೇಳಿಕೊಂಡಿದ್ದಾರೆ. 

ಆದರೆ, ತಂಝೀಮ್ ಸಂಸ್ಥೆಗೆ ಇತರ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯಾವಾದರೂ ಏನಿತ್ತು? ಎಂಬುದು ಒಂದು ದೊಡ್ಡ ಸವಾಲಾಗಿದೆ. ಏಕೆಂದತೆ ತಂಝೀಮ್ ಸಂಸ್ಥೆ ಮೂಲಗಳ ಪ್ರಕಾರ ತಂಝೀಮ್ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೊಂದಾಣಿಕೆ ಮಾಡಿಕೊಂಡಿದ್ದೆ ಆದಲ್ಲಿ ಅದು ತನ್ನ ಅಭ್ಯರ್ಥಿಗಳನ್ನು ಪಕ್ಷೇತರವಾಗಿ ನಿಲ್ಲಿಸುತ್ತಿರಲಿಲ್ಲ ಬದಲಾಗಿ ಯಾವ ವಾರ್ಡಿನಲ್ಲಿ ಹೊಂದಾಣಿಕೆಯಾಗಿದೆಯೂ ಆಯಾ ವಾರ್ಡಿನಲ್ಲಿ ಪಕ್ಷದ ಬ್ಯಾನರ್ ನಡಿ ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದರು. ಇಲ್ಲಿ ಹಾಗೆ ಆಗದೆ ತಂಝೀಮ್ ಪಕ್ಷೇತರವಾಗಿ ನಿಲ್ಲಿಸಿ ಎಲ್ಲಾ ೧೨ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. 

ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳು ಈಗ ರಾಜಕೀಯ ಪಕ್ಷಗಳು ಗೆದ್ದ ಅಭ್ಯರ್ಥಿಗಳ ಬಾಲ ಹಿಡಿಯುತ್ತಿದ್ದು ಇದನ್ನು ತಂಝೀಮ್ ಸಂಸ್ಥೆ ಎಷ್ಟರಮಟಿಗೆ ಸಹಿಸಿಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕಾಗಿದೆ. 

ತಂಝೀಮ್ ವತಿಯಿಂದ ಗೆದ್ದ ಅಭ್ಯರ್ಥಿಗಳಲ್ಲಿ ಕೆಲವರು ಮೂಲತಃ ಕಾಂಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷದವರಾಗಿದ್ದು ಅದನ್ನೆ ನಂಬಿಕೊಂಡು ಕಾಂಗ್ರೇಸ್,ಜೆ.ಡಿ.ಎಸ್. ಹಾಗೂ ಮಾಜಿ ಸಚಿವರು ಗೆದ್ದವರು ತಮ್ಮ ಅಭ್ಯರ್ಥಿಗಳು ಎಂದು ಹೇಳಿಕೊಳ್ಳುವುದರಲ್ಲಿ ಯಾವ ನ್ಯಾಯವಿದೆ ಎಂದು ಜನ ಪ್ರಶ್ನಸುತ್ತಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಮಹಿಳೆಯರ ಶೋಷಣೆ ಮುಕ್ತ ಬದುಕು ರೂಪಿಸಲು ಇದು ಸೂಕ್ತ ಸಮಯ’

ಸರ್ವಕೆಡುಕುಗಳ ಮೂಲ ಮದ್ಯಪಾನದಿಂದ ಮುಕ್ತಿ ನೀಡುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರದ ನವಜೀವನ ಸಮಿತಿ

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ