ಎಸ್.ಎಮ್. ಜಾವಿದ್ ಬಾತಿನ್ ಸಂತಾಪ ಸೂಚಕ ಸಭೆ. ಗಣ್ಯರಿಂದ ಗುಣಗಾನ
ಎಸ್.ಎಮ್. ಜಾವಿದ್ ಬಾತಿನ್ ಸಂತಾಪ ಸೂಚಕ ಸಭೆ. ಗಣ್ಯರಿಂದ ಗುಣಗಾನ ಭಟ್ಕಳ:೫, ಇಲ್ಲಿನ ಸಾಮಾಜಿಕ ಕಾರ್ಯಕರ್ತ ಅಂಜುಮನ್ ಹಾಗೂ ತಂಝೀಮ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಎಸ್.ಎಮ್. ಸೈಯ್ಯದ್ ಆಹ್ಮದ್ ಜಾವಿದ್ ಬಾತಿನ್ ಇತ್ತಿಚೆಗೆ ನಡೆದ ಅಪಘಾತವೊಂದರಲ್ಲಿ ಸಾವಪ್ಪಿದ್ದು ಇಲ್ಲಿನ ಎಲ್ಲರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ ಎಂದು ಶಾಸಕ ಜೆ.ಡಿ. ನಾಯ್ಕ ಅಭಪ್ರಯಾಪಟ್ಟರು. ಅವರು ರವಿವಾರ ರಾತ್ರಿ ೯-೦೦ ಗಂಟೆಗೆ ಫಾರೂಖಿ ಸ್ಟ್ರೀಟ್ ನ ಬರ್ನಿ ಮೈದಾನದಲ್ಲಿ ಅಸದುಲ್ಲಾ ಸ್ಪೋರ್ಟ್ಸ್ ಅಸೋಸೊಯೇಶನ್ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಿದ್ದರು. ಜಾವೀದ್ ಓರ್ವ ನ್ಯಾಯವಾದಿ ಸಮಾಜದ ಎಲ್ಲರೊಂದಿಗೆ ಹೊಂದಾಣಿಕೆಯಿಂದ ಇದ್ದರು ಯಾವುದೇ ಕೆಲಸವಾಗಲಿ ಹಿಂಜರಿಯದೆ ದೈರ್ಯದಿಂದ ಸಾಧಿಸುವಂತಹ ಛಲಗಾರಿಕೆಯನ್ನು ಹೊಂದಿದ್ದರು ಅವರ ಅಗಲಿಕೆಯಿಂದಾಗಿ ಭಟ್ಕಳದ ಮುಸ್ಲಿಮ್ ಸಮುದಾಯಕ್ಕಷ್ಟೆಯಲ್ಲದೆ ಇಡಿ ಭಟ್ಕಳಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಕಾಂಗೈ ಮುಖಂಡ ರಾಮ ಮೊಗೆರ್ ಮಾತನಾಡಿ ಸದಾ ಭಟ್ಕಳದ ಅಭಿವೃದ್ಧಿಯ ಕನಸ್ಸು ಕಾಣುವ ಯುವ ನ್ಯಾಯವಾದಿ ಇಲ್ಲಿನ ಹಿಂದು-ಮುಸ್ಲಿಮ್ ಸೌಹಾರ್ಧತೆಯ ಕುರಿತು ಸದಾ ಚಿಂತಿಸುತ್ತದ್ದರು ನೇರ ನುಡಿಯ ಪ್ರಾಮಾಣಿಕ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಇದು ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದರು. ನ್ಯಾಯವಾದಿ ನಾಗರಾಜ್ ಇ.ಎಚ್. ಜಾವಿದ್ ಬಾತಿನ್ ತಮ್ಮೊಂದಿಗೆ ಎರಡು ವರ್ಷಗಳ ಕಾಲ ಒಂದೇ ಕೋಣೆಯಲ್ಲಿ ಸಹ...