ಪ್ರವಾದಿ ಅನುಸರಣೆಯಿಂದ ಸಕಲ ಸಮಸ್ಯೆಗಳ ಪರಿಹಾರ



ಪ್ರವಾದಿ ಅನುಸರಣೆಯಿಂದ ಸಕಲ ಸಮಸ್ಯೆಗಳ ಪರಿಹಾರ

ಅಬ್ದುಲ್ಲಾ ಜಾವಿದ್

ಭಟ್ಕಳ:೨೯,  ಅಸಮಾನತೆ,ಮೇಲು-ಕೀಳು ಉಚ್ಚ-ನೀಚ ಎಂಬ ಬೇಧ ಭಾವವು ನಮ್ಮ ದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು ಈ ಸಮಸ್ಯೆಗೆ ಪರಿಹಾರ ಪ್ರವಾದಿ ಮುಹಮ್ಮದ್(ಸ) ರ ಜೀವನ ಚರ್ಯೆಯಲ್ಲಿ ನಾವು ಕಾಣುತ್ತೇವೆ ಪ್ರವಾದಿಯನ್ನು ಅನುಸರಿಸಿ ಜೀವಿಸುವುದೇ ಪ್ರಸಕ್ತಕಾಲದ ಎಲ್ಲ ಸಮಸ್ಯೆಗಳಿಗೆ ಪರಿಹಾ ಎಂದು ಜಮಾ‌ಆತೆ ಇಸ್ಲಾಮಿ ಹಿಂದ್ ಕರ್ನಾಟಕ ಮತ್ತು ಗೋವಾ ಘಟಕದ ಅಧ್ಯಕ್ಷ ಅಬ್ದುಲ್ಲಾ ಜಾವಿದ್ ಹೇಳಿದರು. ಅವರು ಮುರುಡೇಶ್ವರದ ಶಾದಿ ಮಹಾಲ್ ನಲ್ಲಿ ಜಮಾ‌ಆತೆ ಇಸ್ಲಾಮಿ ಹಿಂದ್ ಮುರುಡೇಶ್ವರ ಶಾಖೆ ‘’ಸಮಸ್ಯೆಗಳಿಗೆ ಪರಿಹಾರ ಪ್ರವಾದಿ ಮುಹಮ್ಮದ್(ಸ) ರ ಅನುಸರಣೆಯಲ್ಲಿ ಎಂಬ ವಿಷಯದ ಕುರಿತು ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಮ್ಮಲ್ಲಿನ ಹಲವಾರು ಸಮಸ್ಯೆಗಳಿಗೆ ೧೪೦೦ ವರ್ಷಗಳ ಹಿಂದೆಯೆ ಪ್ರವಾದಿ ಮುಹಮ್ಮದ್(ಸ) ಅವರು ಪರಿಹಾರವನ್ನು ಸೂಚಿದ್ದಾರೆ ಎಂದ ಅವರು ಪ್ರವಾದಿ ಮುಹಮ್ಮದ್ ರ ಸಂಪೂರ್ಣ ಜೀವನ ಎಲ್ಲಾ ಮಾನವರಿಗೆ ಮಾದರಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಿವಮೊಗ್ಗ ವಿಭಾಗ ಸಂಚಾಲಕ ಮೌಲಾನ ಸೈಯ್ಯದ್ ಅಬ್ದುಲ್ ಹಸೀಬ್ ಮಾತನಾಡಿ ಮನುಷ್ಯ ಸಮಾಜದಲ್ಲಿ ಪ್ರಾಣಿಯ ಜೀವನ ಸಾಗಿಸುತ್ತಿದ್ದು ಬಂಡವಾಳ ಶಾಹಿಗಳು ಅತಿಶ್ರೀಮಂತರು ಶ್ರೀಮಂತರಾಗುತ್ತಿದ್ದ ಮಕ್ಕಾದಲ್ಲಿ ಎಲ್ಲಿ ಕಂಡರೂ ಅಂಧಕಾರ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಅರಬಿನ ಮರುಭೂಮಿಯಲ್ಲಿ ಓರ್ವ ಮನುಕುಲ ವಿಮೋಚಕನ ಆಗಮನದೊಂದಿಗೆ ಸಮಾಜದ ಎಲ್ಲಾ ತೊಂದರೆಗಳು ದೂರವಾದವು. ನೀವೆಲ್ಲರು ಆದಮನ ಮಕ್ಕಳು ಎಂದು ಸಾರಿ ಮನುಷ್ಯರೆಲ್ಲರು ಒಂದೆ ಎಂಬ ಘೋಷಣೆಯನ್ನು ನೀಡಿದ್ದರು. ಆ ಕಾಲದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಇಂತಹ ಸಮಯದಲ್ಲಿ ಮುಸ್ಲಿಮ್ ಸಮುದಾಯವು ತನ್ನ  ಒಳಹೊಕ್ಕು ನೋಡಬೇಕಾಗಿದೆ ಪ್ರವಾದಿಯು ಬಿಟ್ಟು ಹೋದ ಕಾರ್ಯವನ್ನು ನಾವು ಎಷ್ಟರಮಟ್ಟಿಗೆ ನಿಭಾಯಿಸುತ್ತಿದ್ದೇವೆ? ಒಂದು ವೇಳೆ ಆ ಕೆಲಸವನ್ನು ನಾವು ಸರಿಯಾಗಿ ನಿರ್ವಹಿಸಿದ್ದೆಯಾದರೆ ಈ ಕಾಣುವ ಸಂದರ್ಭ ಒದಗಿ ಬರುತ್ತಿರಲಿಲ್ಲ ಎಂದ ಅವರು ಅದಕ್ಕಾಗಿ ನಾವು ಪ್ರವಾದಿ ಜೀವನವನ್ನು ನಮ್ಮಲ್ಲಿ ಅಳವಳಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಮೌಲಾನ ಮುಹಮ್ಮದ್ ಹುಸೇನ್ ಗೈಮಾ ಪ್ರಾಚಾರ್ಯ ಮದ್ರಸಾ ತನ್ವಿರುಲ್ ಇಸ್ಲಾಮ್ ಮುರುಡೇಶ್ವರ, ಖಾಝಿ ಜಮಾತುಲ್ ಮುಸ್ಲಿಮೀನ್ ಮುರುಡೇಶ್ವರ ಮೌಲಾನ ಅಬ್ದುಸ್ಸಮದ್ ನದ್ವಿ, ಸಂದರ್ಭೋಚಿತವಾಗಿ ಮಾತನಾಡಿದರು.  ಜಮಾ‌ಆತೆ ಇಸ್ಲಾಮಿ ಹಿಂದ್ ಶಿವಮೊಗ್ಗ ವಿಭಾಗದ ಉಪಸಂಚಾಲಕ ಚಮನ್ ಮಿಯಾ, ಮುರುಡೇಶ್ವರ ಸಂಚಾಲಕ ಮುಹಮ್ಮದ್ ಇಲ್ಯಾಸ್ ಶೇಖ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಬೈದುಲ್ಲಾ ಹಾಗಲವಾಡಿ ಪ್ರಸ್ಥಾವಿಕವಾಗಿ ಮಾತನಾಡಿದರು. ಖಮರುದ್ದೀನ್ ಮಷಾಯಿಕ್ ನಿರೂಪಿಸಿದರು. ಮೀರ್ ಅಲಿ ಧನ್ಯವಾದವಿತ್ತರು.

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ