‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು


‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ಮತ್ತೊಮ್ಮೆ ಕರಾವಳಿಯ ಈ ಪುಟ್ಟ ಶಾಂತಿಯ ನಗರ ಭಟ್ಕಳ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ದೇಶದ ಯಾವ ಮೂಲೆಯಲ್ಲಿ ಏನಾದರೂ ಅನಾಹುತ ಜರಗಿದರೆ ಅದಕ್ಕೆ ಸುತ್ತಿಬಳಸಿ ಭಟ್ಕಳ್ ಸಹೋದರರ ಹೆಸರನ್ನು ಮಾಧ್ಯಮಗಳಲ್ಲಿ ತೇಲಿ ಬಿಡುವುದರ ಮೂಲಕ ಪೊಲೀಸರು ಭಟ್ಕಳದ ಹೆಸರನ್ನು ಹಾಳುಮಾಡುವ ತವಕದಲ್ಲಿರುತ್ತಾರೆ. 

ಎಲ್ಲೇ ಸ್ಪೋಟಗಳು ನಡೆಯಲಿ ಸ್ಪೋಟ ನಡೆದ ಹತ್ತು ನಿಮಿಷದಲ್ಲೆ ‘ಭಟ್ಕಳ್’ ಹೆಸರು ಯಾವುದೇ ಅಡೆತಡೆಯಿಲ್ಲದೆ ರಾಷ್ಟ್ರೀಯ ಅಂತರಾಷ್ಟ್ರೀಯ ಟಿವಿ ಪರದೆಗಳ ಮೇಲೆ ಹೈಲೈಟ್ ಆಗುತ್ತೆ. ಹಾಗೆಯೆ ಪೊಲೀಸ್ ಅಧಿಕಾರಿಗಳ ಹಿಡಿತವಿಲ್ಲದ ನಾಲಗೆಯ ಮೆಲೆ ಹರಿದಾಡುತ್ತದೆ. ಅಲ್ಲಿಗೆ ಮುಗಿಯಿತು ಅಸಲಿ ಭಯೋತ್ಪಾದಕರು ಪರದೆಯಿಂದ ಹಿಂದಕ್ಕೆ ಸರಿಯುತ್ತಾರೆ. ಒಂದೆರಡು ದಿನಗಳಲ್ಲಿ ಘಟನೆಯಲ್ಲಿ ಉಂಟಾದ ಸಾವು ನೋವುಗಳು ಸಂತೃಸ್ತರ ಆಕ್ರಂದನಗಳು ಮರೆಯಲಾರಂಭವಾಗುತ್ತವೆ. ಅಲ್ಲಿಗೆ ಪೊಲೀಸ್ ಅಧಿಕಾರಿಗಳ ಕೆಲಸವೂ ಮುಗಿಯುತ್ತದೆ. ಮತ್ತೆ ಯಾವುದದಾರೂ ದುರ್ಘಟನೆಗಳು ನಡೆದಲ್ಲಿ ಭಟ್ಕಳ್ ಸಹೋದರರು ನೆನಪಾಗುತ್ತಾರೆ.

ಹೈದರಾಬಾದ್ ನ ದಿಲ್ ಸುಖ್ ನಗರದ ಸ್ಪೋಟದಲ್ಲೂ ಆಗಿದ್ದು ಇಷ್ಟೇ ತಾನೆ. ಸ್ಪೋಟದ ಕೆಲವೆ ಕ್ಷಣದಲ್ಲಿ ಟಿವಿ ಪರದೆ ಮೇಲೆ ರಿಯಾಝ್ ಹಾಗೂ ಇಖ್ಬಾಲ್ ಭಟ್ಕಳ್ ನ ಹೆಸರು ರಾರಾಜಿಸಿದ್ದು. ಇಷ್ಟಕ್ಕೂ ದೇಶದ ಯಾವೆಲ್ಲ ಸ್ಪೋಟಗಳು ನಡೆದವು ಆ ಎಲ್ಲ ಸ್ಪೋಟಗಳಲ್ಲೂ ರಿಯಾಜ್ ಹಾಗೂ ಇಖ್ಬಾಲ್ ನ ಕೈವಾಡ ಇದೆ ಎಂದೆ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆ ಜನರನ್ನು ನಂಬಿಸುತ್ತ ಬಂದಿವೆ.

ಯಾವುದೇ ಘಟನೆಗಳು ಘಟಸಿ ಅದು ಮರೆತು ಹೋಗುವ ಮುಂಚೆ ಯಾವತ್ತಿಗೂ ನಿಜವಾದ ಅಪರಾಧಿಗಳು ಪೊಲೀಸರಿಗೆಯಾಗಲಿ ಸಿಬಿ‌ಐ ಯವರಿಗಾಗಲಿ ಸಿಕ್ಕುವುದೆ ಇಲ್ಲ. ಇದು ನಮ್ಮ ಭಾರತದ ದುರಾದೃಷ್ಟವೋ ಅಥವಾ ಕರ್ಮವೋ ದೇವರೆ ಬಲ್ಲ.

ರಿಯಾಝ್ ಹಾಗೂ ಇಖ್ಬಾಲ್ ಸಹೋದರರ ಕುರಿತಂತೆ ಹೇಳಬೇಕಾದರೆ ಅವರ ತಾಯಿ ಸಯೀದಾ ಎನ್ನುವರರು  ಭಟ್ಕಳ ಮೂಲದವರು ಎನ್ನುವುದನ್ನು ಬಿಟ್ಟರೆ ರಿಯಾಝ್ ಹಾಗೂ ಇಖ್ಬಾಲ್ ಭಟ್ಕಳದಲ್ಲಂತೋ ಅವರು ಇರಲೆ ಇಲ್ಲ. ಅವರು ಹುಟ್ಟಿದ್ದು,ಬೆಳೆದ್ದಿದ್ದು, ವಿದ್ಯಾಭ್ಯಾಸ ಎಲ್ಲವೋ ದೂರದ ಮುಂಬೈಯಲ್ಲಿ. ಆದರೆ ಆ ಇಬ್ಬರ ಸಹೋದರರ ಹೆಸರಿನ ಮುಂದೆ ಮಾತ್ರ ಭಟ್ಕಳ ಎಂದು ಸೇರಿಸಿ ಬರೆದು ಇಡೀ ಭಟ್ಕಳ ಸಮುದಾಯಕ್ಕೆ ಅವಮಾನಿಸಲಾಗುತ್ತಿದೆ ಎನ್ನುವುದು ಇಲ್ಲಿನ ಭಟ್ಕಳ ನಿವಾಸಿಗಳ ಅಂಬೋಣ. ಅದು ಏನೆ ಇರಲಿ ಇತ್ತಿಚೆ ಭಟ್ಕಳದ ಹೆಸರನ್ನು ಮುಂದಿಟ್ಟುಕೊಂಡು ಇದು ಭಯೋತ್ಪಾದಕರ ತಾಣ, ಇಲ್ಲಿ ಆರ್.ಡಿ.ಎಕ್ಸ್ ತಯಾರಿಸುವ ಫ್ಯಾಕ್ಟರಿ ಇದೆ ಎಂಬೆಲ್ಲ ವಿಷಯಗಳ ಮಾಧ್ಯಮದವರ ಲಂಗುಲಗಾಮಿಲ್ಲದ ಬರವಣಿಗೆಯ ಮೂಲಕ ಹರಿದಾಡಿದಂತೋ ಸತ್ಯ.

ರಿಯಾಝ್, ಇಖ್ಬಾಲ್ ಕುರಿತಂತೆ ಅವರ ಪಾಲಕರು ಏನು ಹೇಳುತ್ತಾರೆ?: ನಮ್ಮ ಇಬ್ಬರು ಮಕ್ಕಳಾದ ರಿಯಾಝ್ ಹಾಗೂ ಇಖ್ಬಾಲ್ ಭಟ್ಕಳವನ್ನು ಬಿಟ್ಟು ೬-೭ವರ್ಷಗಳೇ ಕಳೆದಿವೆ. ಇಗ ಅವರು ಜೀವಂತವಾಗಿದ್ದಾರೂ ಇಲ್ಲವೂ ದೇವರೆ ಬಲ್ಲ. ಆದರೆ ಇವರ ಹೆಸರನ್ನು ಮುಂದಿಟ್ಟುಕೊಂಡ ಭಟ್ಕಳಕ್ಕೆ ಕಳಂಕ ತರುವ ರೀತಿಯಲ್ಲಿ ಪೊಲೀಸರು ಹಾಗೂ ಮಾಧ್ಯಮದವರು ವರ್ತಿಸುತ್ತಿದ್ದು ಸರಿಯಲ್ಲ ಆಕ್ರೋಶ ವ್ಯಕ್ತಪಡಿಸುತ್ತಾರೆ. ರಿಯಾಝ್ ನನ್ನು ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಟಿವಿಗಳಲ್ಲಿ ಬಂದ ವರದಿಯಿಂದಲೆ ತಿಳಿದು ಬಂದಿದ್ದು ಅವನು ಜೀವಂತವಾಗಿದ್ದರು ಎಂದು. ನನ್ನ ಮಗನನ್ನು ಎಂದೋ ಹತ್ಯೆ ಮಾಡಲಾಗಿದೆ.  ಆತ ಓರ್ವ ಸಭ್ಯ ವ್ಯಕ್ತಿಯಾಗಿದ್ದ, ಅಮಾಯಕನಾಗಿದ್ದ ಆತನಿಗೆ ಪೋಲಿಸರು ಪದೇ ಪದೇ ನೀಡುತ್ತಿರುವ ಕಿರುಕುಳವನ್ನು  ತಾಳಲಾರದೆ ಊರು ಬಿಡುವಂತಾಯಿತು. ಮಾಧ್ಯಮಗಳಲ್ಲಿ ಬಂದ ಸುದ್ದಿಯು ನನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ ನಾನು ತಿಳಿದುಕೊಂಡಂತೆ ಆತನು ಎಂದೋ ಹತ್ಯೆಯಾಗಿದ್ದಾನೆ ಎಂದು ತಮ್ಮ ಕಣ್ಣಾವಲಿಗಳನ್ನು ತೇವ ಮಾಡಿಕೊಳ್ಳುವ ಅವರು ಇನ್ನೂ ಮುಂದೆ ತಮ್ಮ ಮಕ್ಕಳು ಮರಳಿ ಗೂಡು ಸೇರುತ್ತಾರೆ ಎನ್ನುವ ಆಸೆಯನ್ನು ಎಂದೋ ಬಿಟ್ಟಂತೆ ತೊರುತ್ತಿತ್ತು.

ಪಾಕಿಸ್ಥಾನದಲ್ಲಿ ಸತ್ತ ಮಗ ಮತ್ತೆ ಭಾರತಕ್ಕೆ ಬಂದು ಬಾಂಬು ಸ್ಪೋಟಿಸುವುದು ಎಷ್ಟು ಹಾಸ್ಯಸ್ಪದ ಅಲ್ಲವೇ ಎಂದು ಕೇಳುವ ಅವರು ಪೊಲೀಸರು, ರಾಜಕಾರಣಿಗಳು ನನ್ನ ಮಕ್ಕಳಿಬ್ಬರ ಹೆಸರನ್ನು ಮುಂದಿಟ್ಟುಕೊಂಡು ತಮ್ಮ ದುರುದ್ದೇಶಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಪೋಲಿಸರ ಕಿರುಕುಳದಿಂದಲೆ ನನ್ನ ಮಗನಿಗೆ ಇಂತಹ ಕಳಂಕ ಬಂದಿರುವುದು. ಅಮಾಯಕರಿಗೆ ಕಿರುಕುಳವನ್ನು ನೀಡಿ ಭಯೋತ್ಪಾದಕರನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸುವ ಅವರು ಈಗ ನನ್ನ ಕಣ್ಣೀರು ಬತ್ತಿ ಹೋಗಿದೆ. ನಾನು ಅಲ್ಲಾಹನ ಮೇಲೆ ಭರವಸೆಯನ್ನು ಇಟ್ಟು ನನ್ನ ಮಗನ ಆಸೆಯನ್ನು ಬಿಟ್ಟಿದ್ದೇನೆ. ಉನ್ನತ ವಿದ್ಯಾಭ್ಯಾಸವನ್ನು ಮಾಡಿಕೊಂಡಿದ್ದ ನನ್ನ ಇಬ್ಬರು ಮಕ್ಕಳು ಎಲ್ಲರಂತೆ ಸಮಾಜದಲ್ಲಿ ಉತ್ತಮ ಜೀವನ ಸಾಗಿಸುತ್ತಿದ್ದರು.  ಮುಂಬೈಯಲ್ಲಿ ಸಿಮಿ ಕಾರ್ಯಲಯದಲ್ಲಿ ಅಭ್ಯಾಸ ಮಾಡಲು ಹೋಗುತ್ತಿರುವುದನ್ನೆ ನೆಪ ಮಾಡಿಕೊಂಡು ನನ್ನ ಮಕ್ಕಳ ಬದುಕನ್ನೆ ಹಾಳು ಮಾಡಿದರು. ಮುಂಬೈ ಬಿಟ್ಟು ಭಟ್ಕಳಕ್ಕೆ ಬಂದ ನಮಗೆ ಇಲ್ಲಿಯೂ ಪೋಲಿಸರ ಕಿರುಕುಳ ತಪ್ಪಲಿಲ್ಲ. ಪೋಲಿಸರ ಕಿರುಕಳುವನ್ನು ತಾಳಲಾರದೆ ನನ್ನ ಮಗ ಮನೆಯನ್ನು ಬಿಟ್ಟು ೬-೭ ವರ್ಷಗಳು ಕಳೆದವು ಅವನು ಎಲ್ಲಿದ್ದಾನೋ ಹೇಗಿದ್ದಾನೋ ಎಂಬ ಆತಂಕ ಅವರದ್ದು.


ರಿಯಾಝ್ ಹಾಗೂ ಇಖ್ಬಾಲ್ ನೊಂದಿಗೆ ಭಟ್ಕಳದ ಹೆಸರನ್ನು ಸೇರಿಸುವುದರಿಂದ ಭಟ್ಕಳಕ್ಕೆ ಕೆಟ್ಟ ಹೆಸರು ಬಂದಂತಾಗಿ. ಜನರು ಕೇವಲ ನಮ್ಮನ್ನಷ್ಟೆ ಅಲ್ಲ ಇಡಿ ಭಟ್ಕಳದ ಜನರನ್ನು ಶಂಕೆಯಿಂದ ನೋಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಎಲ್ಲಾದರೂ ಕಲಿಯಲು ಹೋದಾಗ ಅವರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ. ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳು ತಮ್ಮ ಊರನ್ನು ಪರಿಚಯಿಸಿಕೊಳ್ಳಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮಕ್ಕಳು ತಪ್ಪು ಮಾಡಿದಲ್ಲಿ ಅವರಿಗೆ ಶಿಕ್ಷೆಯನ್ನು ನೀಡಿ ಆದರೆ ಅವರ ಆರೋಪ ಸಾಬೀತಾಗುವ ಮೊದಲೆ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸುತ್ತಾರೆ.

ಪೊಲೀಸ್ ಅಧಿಕಾರಿಗಳು ಏನು ಹೇಳುತ್ತಾರೆ?: ಭಟ್ಕಳ್ ಸಹೋದರರ ಕುರಿತಂತೆ ಪೊಲೀಸ್ ಅಧಿಕಾರಿಗಳು ಬೇರೆಯೆ ಕತೆ ಹೇಳುತ್ತಾರೆ. ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಆದರಿಸಿ ಮಾಧ್ಯಮ ಪ್ರತಿನಿಧಿಗಳು ಪೊಲೀಸ ಅಧಿಕಾರಿಗಳನ್ನು ಮಾತನಾಡಿಸಿದರೆ, ಪತ್ರಿಕೆಗಳಲ್ಲಿ ಬಂದ ಸುದ್ದಿ ತಮಗೇನು ತಿಳಿಯದು ಇಲ್ಲಿ ಅಂತಹ ಭಯೋತ್ಪಾದನೆ ಕೃತ್ಯ ಯಾವುದು ನಡೆಯುವುದರ ಕುರಿತು ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಹಾಗೂ ಭಟ್ಕಳದಲ್ಲಿ ಆರ್.ಡಿ.ಎಕ್ಸ್ ಫ್ಯಾಕ್ಟರಿಯಾಗಲಿ ಮತ್ತಾವದೆ ಚಟುವಟಿಕೆಗಳಾಗಿ ನಡೆಯುತ್ತಿರುವ ಕುರಿತು ಮಾಹಿತಿ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೇಳುತ್ತಾರೆ.
ರಿಯಾಝ್ ಕುರಿತು ಪಶ್ಚಿಮ ವಲಯ ಐ.ಜಿ.ಪಿ ಪ್ರತಾಪ್ ರೆಡ್ಡಿ ಬಾಂಬ್ ಸ್ಪೋಟದ ಕುರಿತಂತೆ ತನಿಖೆಯನ್ನು ನಾವು ನಡೆಸುತ್ತಿಲ್ಲ.ವಿವಿಧ ತನಿಖ ಸಂಸ್ಥೆಗಳು ಅದನ್ನು ಮಾಡುತ್ತಿವೆ. ರಿಯಾಝ್ ಸಹೋದರರು ಎಲ್ಲಿದ್ದರು ಈಗ ಅವರು ಎಲ್ಲಿದ್ದಾರೆ ಎನ್ನುವದನ್ನು ಅವರಿಂದಲೆ ತಿಳಿಯಬೇಕು, ರಿಯಾಝ್ ಸಹೋದರರ ಕುರಿತಂತೆ ನಮ್ಮಲ್ಲಿ ಯಾವುದೇ ಪ್ರಕರಣಗಳಿಲ್ಲ. ಈಗ ಅವರು ಎಲ್ಲಿದ್ದಾರೆ ಎನ್ನುವ ಕುರಿತು ನಮಗೆ ಮಾಹಿತಿ ಇಲ್ಲ ಎನ್ನುತ್ತಾರೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ