ಶ್ರೀ ನಾಗಯಕ್ಷೆ ಮಹಾಸತಿ ಧರ್ಮದೇವಿ ಸಂಸ್ಥಾನದ ಆರನೇ ವರ್ಧಂತಿ ಉತ್ಸವ


ಭಟ್ಕಳ:೯ ಇಲ್ಲಿನ ಶ್ರೀ ನಾಗಯಕ್ಷೆ ಮಹಾಸತಿ ಧರ್ಮದೇವಿ ಸಂಸ್ಥಾನದ ಆರನೇ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಜ್ರಂಭಣೆಯಿಂದ ನೆರವೇರಿತು.

ದೇವಸ್ಥಾನದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ವಾಹಿನಿ ಅಧ್ಯಕ್ಷ ಸುರೇಂದ್ರ ಶ್ಯಾನುಭಾಗ್ ಮಕ್ಕಳಿಗೆ ಸಣ್ಣವರಿರುವಾಗಲೇ ಧಾರ್ಮಿಕ ಜಾಗ್ರತೆಯನ್ನು ಮೂಡಿಸಲು ಪಾಲಕರು ಮುಂದಾಗಬೇಕು. ನಮ್ಮ ಆಚಾರ ವಿಚಾರ, ಸಂಸ್ಕೃತಿಯ ಬಗ್ಗೆ ಮಕ್ಕಳು ತಿಳಿದುಕೊಂಡರೆ ದೊಡ್ಡವರಾದ ಮೇಲೆ ಅದೇ ಉತ್ತಮ ಸಂಸ್ಕೃತಿಯನ್ನು ಹೊಂದಲು ಸಾಧ್ಯ. ಯುವ ಜನಾಂಗಕ್ಕೆ ಭಕ್ತಿಯ ಪ್ರೇರಣೆಯಾಗಬೇಕು. ದೇವಸ್ಥಾನದ ವತಿಯಿಂದ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಇನ್ನೂ ಹೆಚ್ಚು ಕಾರ್ಯಗಳಾಗುವಂತಾಗಲಿ ಎಂದರು. ದೇವಸ್ಥಾನದಲ್ಲಿ ನೂತನವಾಗಿ ಅಳವಡಿಸಲಾದ ಎಲ್.ಸಿ.ಡಿ.ಟಿ.ವಿ. ಹಾಗೂ ಶ್ರೀ ದೇವರ ಪೂಜಾ ಕಾರ್ಯಕ್ರಮದ ನೇರ ಪ್ರಸಾರವನ್ನು ಮಂಗಳೂರಿನ ಉಷಾ ಸುರೇಶ ರಾವ್ ಉದ್ಘಾಟಿಸಿದರು.

ಉಪಾಧ್ಯಕ್ಷ ವೆಂಕಟೇಶ ಪ್ರಭು ಅವರು ಮಾತನಾಡಿ ಕಳೆದ ಆರು ವರ್ಷಗಳಿಂದ ಆಡಳಿತ ಮಂಡಳಿ ನಡೆಸಿದ ಕಾರ್ಯಗಳನ್ನು ವಿವರಿಸಿ ಇನ್ನೂ ಹೆಚ್ಚಿನ ಕಾರ್ಯಗಳಾಗಬೇಕು ಎಂದು ಆಶಿಸಿದರು. ವೇದಿಕೆಯಲ್ಲಿ ನಾರಾಯಣ ಗವಾಳಿ, ನ್ಯಾಯವಾದಿ ಆರ್.ಆರ್. ಶ್ರೇಷ್ಟಿ ಹಾಗೂ ಮುಂಬೈಯ ಮಾಧವಿ ಕಾಮತ್ ಮಾತನಾಡಿದರು. ದೇವಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ದೇವಿಯ ಮಹಿಮೆಯನ್ನು ವಿವರಿಸಿದರು. ವೇದಿಕೆಯಲ್ಲಿ ಸುರೇಶ್ ರಾವ್, ಉಧ್ಯಮಿ ದಿಗಂಬರ ಶೇಟ್ ಉಪಸ್ಥಿತರಿದ್ದರು. ಉದಯ ಪ್ರಭು ಪ್ರಾರ್ಥಿಸಿದಿರು. ದೇವಸ್ಥಾನದ ಕಾರ್ಯದರ್ಶಿ ಕಿರಣ್ ಶ್ಯಾನುಭಾಗ ಸ್ವಾಗತಿಸಿದರು. ಝೇಂಕಾರ್ ಮೆಲೋಡಿಸ್‌ನ ಪ್ರಸನ್ನ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ