ಭಟ್ಕಳ:ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ.

ಭಟ್ಕಳ:ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ.
ಭಟ್ಕಳ:೨೯, ಭಟ್ಕಳದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆಗೆ ಬೇಸತ್ತ ವಿದ್ಯಾರ್ಥಿ ಸಂಘಟನೆಗೆ ಎಸ್.ಐ.ಓ ಭಟ್ಕಳ ತಾಲೂಕಿನಾದ್ಯಂತ ಪರೀಕ್ಷೆಗಳು ಮುಗಿಯುವವರೆಗೂ ವಿದ್ಯುತ್ ಕಡಿತಗೊಳಿಸದಿರುವಂತೆ ಇಲ್ಲಿನ ಸಹಾಯಕ ಕಮಿಷನರ್ ಹಾಗೂ ಹೆಸ್ಕಾಮ್ ಆಧಿಕಾರಿಗಳಿಗೆ ಮನವಿ ಅರ್ಪಿಸಿದ ಬೆನ್ನ ಹಿಂದೆಯೆ ಹೆಸ್ಕಾಂ ಕಂಪನಿಯು ವಿದ್ಯುತ್ ಕಡಿತವನ್ನು ದ್ವಿಗುಣಗೊಳಿಸಿದ್ದು ಪರೀಕ್ಷೆಯ ಸಮಯದಲ್ಲಿ ಈ ವಿದ್ಯುತ್ ಕಡಿತವು ವಿದ್ಯಾರ್ಥಿಗಳಿಗೆ ಭಾರಿ ಬೆಲೆಯನ್ನು ತೆರುವಂತೆ ಮಾಡಿದೆ. ಸಂಜೆ ಹಾಗೂ ಬೆಳಗಿನ ಸಮಯ ಅರ್ದಗಂಟೆ ವಿದ್ಯುತ್ ಕಡಿತಗೊಳಿಸುತ್ತಿರುವ ಇಲಾಖೆಯು ಈಗ ಅದನ್ನು ದ್ವಿಗುಣಗೊಳಿಸಿ ತನ್ನ ವ್ಯಾಪ್ತಿಗೆ ಬರುವ ಎಲ್ಲಾ ತಾಲೂಕುಗಳಿಗೆ ಫರ್ಮಾನು ಜಾರಿಗೊಳಿಸಿದ್ದು ಅದರಂತೆ ಮುರುಡೇಶ್ವರದಲ್ಲಿ ಬೆಳಿಗ್ಗೆ ೬ ಗಂಟೆಯಿಂದ ೮ ಗಂಟೆವರೆಗೆ, ಸಂಜೆ ೧ರಿಂದ ೨ ಹಾಗೂ ರಾತ್ರಿ ೭ರಿಂದ ೮ ಗಂಟೆಯವರೆಗೆ, ಶಿರಾಲಿ ವ್ಯಾಪ್ತಿಯಲ್ಲಿ ಬೆಳಿಗ್ಗೆ ೬ರಿಂದ ೮, ಸಂಜೆ ೧೨ ರಿಂದ ೧, ಹಾಗೂ ರಾತ್ರಿ ೬ ರಿಂದ ೭ ಗಂಟೆಯವರೆಗೆ, ಅಳ್ವೆಕೋಡಿ ಭಾಗದಲ್ಲಿ ಬೆಳಿಗ್ಗೆ ೮ರಿಂದ ೧೦, ಸಂಜೆ೨ರಿಂದ೩ ಹಾಗೂ ರಾತ್ರಿ ೮ ರಿಂದ ೯ ಗಂಟೆಯವರೆಗೆ, ಕೊಪ್ಪ ವ್ಯಾಪ್ತಿಯಲ್ಲಿ ಬೆಳಿಗ್ಗೆ ೬ರಿಂದ ೧೨, ಸಾಯಂಕಾಲ ೩ರಿಂದ ೬, ರಾತ್ರಿ ೧೧ ರಿಂದ ೩ ಗಂಟೆಯವರೆಗೆ, ಭಟ್ಕಳ ನಗರವನ್ನು ಎರಡು ವಿಭಾಗವನ್ನಾಗಿ ಮಾಡಿದ್ದು ಪಟ್ಟಣ-೧ರಲ್ಲಿ ಬೆಳಿಗ್ಗೆ ೬ ರಿಂದ ೮, ಮಧ್ಯಾಹ್ನ ೧ ರಿಂದ ೨, ಸಾಯಂಕಾಲ ೭ ರಿಂದ ರಾತ್ರಿ ೮ ಗಂಟೆಯವರೆಗೆ, ಪಟ್ಟಣ-೨ರಲ್ಲಿ ಬೆಳಿಗ್ಗೆ ೬ರಿಂದ ೮, ಮಧ್ಯಹ್ನ ೧೨ ರಿಂದ ೧ ಹಾಗೂ ಸಾಯಂಕಾಲ ೬ ರಿಂದ ೭ ಗಂಟೆಯವರೆಗೆ, ಕೈಗಾರಿಕಾ ಪ್ರದೇಗಳಲ್ಲಿ ಬೆಳಿಗ್ಗೆ ೮ ರಿಂದ ೧೦, ಮಧ್ಯಹ್ನ ೨ ರಿಂದ ೩ ಹಾಗೂ ರಾತ್ರಿ ೮ ರಿಂದ ೯ ಗಂಟೆಯವರೆಗೆ, ಹೆಬ್ಳೆ ಭಾಗದಲ್ಲಿ ಬೆಳಿಗ್ಗೆ ೮ರಿಂದ೧೦, ಸಂಜೆ ೩ರಿಂದ ೪ ಹಾಗೂ ರಾತ್ರಿ ೯ರಿಂದ ೧೦ ಗಂಟೆಯವರೆಗೆ, ಬೆಳಕೆ ಭಾಗದಲ್ಲಿ ಬೆಳಿಗ್ಗೆ ೮ ರಿಂದ ೧೦, ಸಂಜೆ ೩ರಿಂದ ೪ ಹಾಗೂ ರಾತಿ ೯ ರಿಂದ ೧೦ ಗಂಟೆಯವರೆಗೆ, ಮಾರುಕೇರಿ ಭಾಗದಲ್ಲಿ ಬೆಳಿಗ್ಗೆ ೬ರಿಂದ ೯, ಸಂಜೆ ೧೨ ರಿಂದ ೬ ಹಾಗೂ ರಾತ್ರಿ ೭ ರಿಂದ ೮ ಮತ್ತು ೨ ಗಂಟೆಯವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಹುಬ್ಬಳ್ಳಿ ಸರಬರಾಜು ಕಂಪನಿಯ ಕಳುಹಿಸಿದ ಆದೇಶದಲ್ಲಿ ತಿಳಿಸಿದೆ. ಕರಾವಳಿ ಭಾಗದಲ್ಲಿ ಮೊದಲೆ ಸೆಕೆಯನ್ನು ತಡೆಯಲಾರದ ಜನತೆ ಈಗ ಹೆಸ್ಕಾಂ ನೀಡುವ ಸೆಕೆಯನ್ನು ಹೇಗೆ ತಡೆದುಕೊಂಡಾರು ಎಂಬುವುದು ಕೌತುಕದ ವಿಷಯವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ