ಭಟ್ಕಳ ಯುವ ನ್ಯಾಯವಾದಿ ಜಾವೀದ್ ಬಾತಿನ್ ಇನ್ನಿಲ್ಲ.

ಭಟ್ಕಳ ಯುವ ನ್ಯಾಯವಾದಿ ಜಾವೀದ್ ಬಾತಿನ್ ಇನ್ನಿಲ್ಲ.
ಭಟ್ಕಳ:೩೧ ಭಟ್ಕಳದ ಯುವ ನ್ಯಾಯವಾದಿ ಜಾವೀದ್ ಆಹ್ಮದ್ ಬಾತಿನ್ ಎಸ್.ಎಮ್. ಇವರು ಬುಧವಾರ ರಾತ್ರಿ ಸುಮಾರು ೮ ಗಂಟೆಗೆ ಶಿರೂರಿನ ಸಮೀಪ ಬೈಕ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಅಪಾಘಾತವು ಹೇಗೆ ಸಂಭವಿಸಿದ್ದು ಎನ್ನುವುದುರ ಕುರಿತು ಯಾವುದೇ ಮಾಹಿತಿಯು ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ದನವೊಂದು ಅಡ್ಡ ಬಂದ ಪರಿಣಾವಾಗಿ ಅದರ ಕೋಡು ಎದೆಗೆ ತಾಗಿದ ಪರಿಣಾಮ ಈ ಸಾವು ಸಂಭವಿಸಿದೆ ಎನ್ಲಗಿದೆ. ಆದರೆ ಯಾವುದೆ ಸ್ಪಷ್ಟ ಮಾಹಿತಿಯು ದೊರೆತಿಲ್ಲ. ಜಾವಿದ್ ಬಾತಿನ್ ಭಟ್ಕಳದಿಂದ ಶಿರೂರು ಕಡೆಗೆ ಎಷ್ಟು ಗಂಟೆಗೆ ಹೋದರು ಮತ್ತು ಏತಕ್ಕಾಗಿ ಹೋದರು ಎನ್ನುವುದು ಸಹ ಯಾರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಇವರ ಅಪಘಾತ ಕುರಿತ ಯಾವುದೇ ಸ್ಪಷ್ಟವಾದ ಮಾಹಿತಿಯು ಮಾಧ್ಯಮಗಳಿಗೆ ಲಭಿಸುತ್ತಿಲ್ಲ. ಇವರು ಭಟ್ಕಳದ ತಂಝೀಮ್ ಹಾಗೂ ಅಂಜುಮನ್ ಸಂಸ್ಥೆಯು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಅತ್ಯಂತ ಸಕ್ರಿಯಾವಾಗಿ ಭಾಗವಹಿಸುತ್ತಿದ್ದರು. ಅಂಜುಮನ್ ಹಾಗೂ ತಂಝೀಮ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದ ಇವರ ಅಗಲಿಕೆಯಿಂದ ಭಟ್ಕಳದ ಸಮಸ್ತ ನಾಗರೀಕರು ತುಂಬಲಾರದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಯುವ ನ್ಯಾಯವಾದಿಯಾಗಿದ್ದರು. ಇವರು ಇಲ್ಲಿನ ಬಾತಿನ್ ಮಾಸ್ಟರ್ ಅವರು ಪುತ್ರರಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ