ಹಜ್: ವಿಶ್ವ ಬ್ರಾತೃತ್ವ ಸಂಗಮ

ಹಜ್: ವಿಶ್ವ ಬ್ರಾತೃತ್ವ ಸಂಗಮ

ನಾನಾ ದೇಶ, ನಾನಾ ಭಾಷೆ
ಇವರ ವೇಷವೂ ಒಂದೇ
ಇವರ ಮಂತ್ರವೋ ಒಂದೇ
ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್

ಇಲ್ಲಿ ಕರಿಯನು ಒಂದೇ
ಬಿಳಿಯನು ಒಂದೇ
ಹಿಂದಿ- ಚೀನಿ- ಪಾಕಿ- ಅಫ್ಘಾನಿ
ಅಮೇರಿಕನ್, ರಷ್ಯನ್, ಸೌದಿ, ಇರಾನಿ
ಇರಲಿ ಯಾವುದೆ ಭಾಷೆ
ಇವರ ಘೋಷವು ಒಂದೇ
ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್


ಇವರ ಗುರಿಯು ಒಂದೇ
ಛಲವೂ ಒಂದೇ
ದೇಶದ ಗಡಿ ಗಡಿಯನ್ನು ದಾಟಿ
ಒಂದು ಗೂಡಿಹರು
ತ್ಯಾಗಬಲಿದಾನದಿ ಸ್ಮರಣೆಯ
ಮಾಡಲು ಇಲ್ಲಿಗೆ ಬಂದಿಹರು
ಒಂದಾದರಿಲ್ಲಿ ಕರಿಯ, ಬಿಳಿಯರು
ಬೆರತರು ಇಲ್ಲಿ ಬಡವ ಶ್ರೀಮಂತರು
ಮುರಿದು ಹಾಕಿ ಉಚ್ಛ-ನೀಚತೆಯ
ಸಂಕೋಲೆಗಳನು ಕೊಂಡಾಡಿದರು
ಅಲ್ಲಾಹನ ನಾಮಸ್ಮರಣೆಯನು
ಎಲ್ಲರ ಸ್ತುತಿಯು ಒಂದೇ
ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್

ಜಗತ್ತಿನ ಕೇಂದ್ರ ಸ್ಥಾನವಿದು
ಜಗತ್ಪಾಲಕನ ಭವ್ಯ ಮಂದಿರವಿದು
ಇದು ವಿಶ್ವ ಬ್ರಾತೃತ್ವದ ನೆಲೆವೀಡು
ಜೀವನದಿ ಒಮ್ಮೆ ನೀ ಬಂದು ನೋಡು
ಇದು ವಿಶ್ವಮಾನವರ ಕೂಡಲ ಸಂಗಮ
ಇಲ್ಲಿನ ವೇದಘೋಷವು ಒಂದೇ
ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀರಾಮಚಂದ್ರಾಪುರ ಮಠದ ಶ್ರೀಗಳಿಂದ ಹವ್ಯಕ ಸಭಾಭವನದ ಉದ್ಘಾಟನೆ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ