ಕಾವ್ಯಾಲಯ

ನಿಮ್ಮ ನೆನಪು


ನಿಮ್ಮ ನೆನಪಿನಿಂದ ನನ್ನ ಕಣ್ಣು ತುಂಬಿ ಬಂದಿತು

ನಿಮ್ಮ ನೆನಪಿನಿಂದ ನಮಗೆ ನವ ಚೈತನ್ಯ ತುಂಬಿತು

ನಿಮ್ಮವಾಣಿಯನ್ನು ಕೇಳಿ ಕಲ್ಲು ಹೃದಯ ಕರಗಿತು


ನಿಮ್ಮ ಅನುಸರಣೆಯು ಜೀವನ ಪಾವನಗೊಳಿಸಿತು


ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್





ನೀವು ತಂದ ದೇವ ಗ್ರಂಥ ನನ್ನ ಬದುಕೆ ರೂಪಿಸಿತು

ನೀವು ಬಿಟ್ಟು ಹೋದ ಧರ್ಮ ನನಗೆ ಮುಕ್ತಿ ನೀಡಿತು


ನಿಮ್ಮ ನಾಮಸ್ಮರಣೆಯಲ್ಲಿ ಹಗಲಿರುಳು ಕಳೆಯಲಿ


ನಿಮ್ಮ ಗುಣಗಾನ ಮಾಡುತಲೆ ಪ್ರಾಣ ಪಕ್ಷಿಯ ಹಾರಲಿ


ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್





ನಿಮ್ಮ ನಡೆ ನುಡಿ ಎಷ್ಟೊಂದು ಸರಳ ಸುಂದರ

ನಿಮ್ಮ ಜೀವನದ ಪುಟಗಳಲ್ಲಿ ಎಲ್ಲವೋ ಗೋಚರ


ನಿಮ್ಮ ಅನುಸರಣೆ ಮಾಡುವೆ ನಾ ಅನುಚರ


ದೊರಕುವುದು ನನಗಾಗ ನನ್ನಯ ಇಹಪರ


ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್






ನೀವು ತಂದ ಸತ್ಯ ಸಂದೇಶ ಲೋಕಕೆ ಬೆಳಕನು ತೋರುವುದು


ಸೃಷ್ಟಿಕರ್ತನ ಮಹಾಮಹಿಮೆಯ ಸತ್ಯ ದರ್ಶನ ಮಾಡುವುದು


ಇದನರಿಯದ ಮನುಜಕುಲವು ದಾರಿ ತಪ್ಪಿ ನಡೆಯುವುದು


ತಪ್ಪಿ ನಡೆದ ದಾರಿ ನಮಗೆ ‘ನರಕ’ದಡೆಗೆ ನೂಕುವುದು


ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀರಾಮಚಂದ್ರಾಪುರ ಮಠದ ಶ್ರೀಗಳಿಂದ ಹವ್ಯಕ ಸಭಾಭವನದ ಉದ್ಘಾಟನೆ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ