ಇತಿಹಾಸ ನಿರ್ಮಿಸಲಿರುವ ೨೦೧೧ ರ ಜನಗಣತಿ- ಒಂದಿಷ್ಟು ಮಾಹಿತಿ
ಇತಿಹಾಸ ನಿರ್ಮಿಸಲಿರುವ ೨೦೧೧ ರ ಜನಗಣತಿ- ಒಂದಿಷ್ಟು ಮಾಹಿತಿ
ಮಾನವೇತಿಹಾಸದಲ್ಲಿ ಕಂಡು ಕೇಳರಿಯದ ಬಹು ಕೋಟಿ ವೆಚ್ಚದ ೧೫ನೇ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಪೆ.೯-೨೦೧೧ರಿಂದ ಎರಡನೇ ಹಂತದ ಜನಗಣತಿ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಇದೊಂದು ರಾಷ್ಟ್ರೀಯ ಯೋಜನೆಯಾದ್ದರಿಂದ ಪ್ರತಿಯೊಬ್ಬರು ಈ ಕಾರ್ಯಕ್ರಮದ ಭಾಗವಾಗಬೇಕು. ಇದರ ಯಶಸ್ವಿಗೆ ನಾವೆಲ್ಲರೂ ಪಣತೊಡಬೇಕು ಅಂದಾಗ ಮಾತ್ರ ಇದರ ಉದ್ದೇಶ ಸುಲಭವಾಗಿ ಈಡೇರಬಹುದು. ಇಲ್ಲವಾದರೆ ಹತ್ತರಲ್ಲಿ ಇದು ಒಂದು ಎಂಬಂತೆ ಕಾಟಾಚಾರದ ಗಣತಿಯಾಗಿ ಬಿಡಬಹುದು. ನಮ್ಮ ದೇಶವು ಈತನಕ ೧೫ ಜನಗಣತಿಗಳನ್ನು ಕಂಡಿದೆ. ಪ್ರತಿ ಬಾರಿ ಹಲವಾರು ಲೋಪದೋಷಗಳನ್ನು ಹೊತ್ತುಕೊಂಡು ನಡೆದ ಜನಗಣತಿ ಕಾರ್ಯ ಕಾಟಾಚಾರವೆಂಬಂತೆ ನಡೆಯುತ್ತಿತ್ತು. ಗಣತಿಗೆ ಬಂದ ಗಣತಿದಾರರು ಗಡಿಬಿಡಿಯಲ್ಲಿ ಅದೆಷ್ಟೋ ಜನರನ್ನು ಗಣತಿಯ ವ್ಯಾಪ್ತಿಗೆ ತರದೆ ಸರ್ಕಾರಕ್ಕೆ ವರದಿಯನ್ನು ನೀಡುತ್ತಿದ್ದ ಅದೆಷ್ಟು ಪ್ರಕರಣಗಳು ನಮ್ಮ ಕಣ್ಣಮುಂದಿವೆ.
ಜಣಗಣತಿ ಕಾರ್ಯವು ಒಂದು ರಾಷ್ಟ್ರ ಕಟ್ಟುವ ಕಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ನಮ್ಮ ಪಾಲೆಷ್ಟು? ಎನ್ನುವುದನ್ನು ನಾವು ಅವಲೋಕಿಸಿಕೊಳ್ಳಬೇಕಾಗಿದೆ. ನಾನು ಭಾರತಿಯ ಪ್ರಜೆಯಾಗಿ ಈ ರಷ್ಟ್ರೀಯ ಯೋಜನೆಯಲ್ಲಿ ಎಷ್ಟರ ಮಟ್ಟಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ ಎನ್ನುವುದರ ಕುರಿತು ಅವಲೋಕನೆ ಮಾಡಿಕೊಳ್ಳುವುದು ಒಳಿತು.
ವಿಶ್ವವೇ ನಿಬ್ಬೆರಗಾಗಿ ನೋಡುವ ಭಾರತ ದೇಶದ ೧೫ನೇ ಜನಗಣತಿ ಕಾರ್ಯದ ಹೊಸ್ತಿಲಲ್ಲಿ ನಾವಿದ್ದೇವೆ. ದೇಶದಲ್ಲಿನ ಜನತೆಯು ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೆ ರೂಪಿತವಾಗುವ ಯೋಜನೆಗಳಿಗೆ ಜನಗಣತಿಯ ಪಾತ್ರ ಅತ್ಯಂತ ಮಹತ್ವದ್ದು. ಏಕೆಂದರೆ ಜನಗಣತಿಯಲ್ಲಿ ಸಂಗ್ರಹಿತವಾಗುವ ಬಹುಮುಖ ಮಾಹಿತಿಗಳನ್ನು ವಿಶ್ಲೇಷಿಸುವ ಮೂಲಕ ಜನತೆಯ ಅಗತ್ಯಗಳಲ್ಲಿನ ಪೂರೈಕೆ ಮತ್ತು ಕೊರತೆಗಳ ಬಗೆಗಿನ ಸುದೀರ್ಘ ವಿವರಗಳು ದೊರೆಯುತ್ತವೆ. ಜನಗಣತಿ ಎಂದರೆ ಕೇವಲ ಜನಗಳ ಎಣಿಕೆ ಮಾಡುವ ಕಾರ್ಯವಲ್ಲ. ಈ ಕಾರ್ಯಾಚರಣೆಯಲ್ಲಿ ಜನತೆಯ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಣೆಯ ಅಡಕವಾಗಿದೆ.
ಜನಗಣತಿಯ ಇತಿಹಾಸ: ಕ್ರಿ.ಪೂ. ಕಾಲದಿಂದಲೂ ಜನಗಣತಿ ಕಾರ್ಯ ಚಾಲ್ತಿ ಇರುವ ಬಗ್ಗೆ ನಮಗೆ ಇತಿಹಾಸದ ಉಲ್ಲೇಖಗಳಿಂದ ತಿಳುದುಬರುತ್ತದೆ. ವಿಶ್ವದ ಅತ್ಯಂತ ಪುರಾತನ ಎನ್ನಲಾಗಿರುವ ಜನಗಣತಿಯ ದಾಖಲೆಯು ಚೀನಾದಿಂದ ಲಭಿಸುತ್ತವೆ. ಅತ್ಯಂತ ಪ್ರಾಚೀನ ಎನ್ನಲಾದ ಜನಗಣತಿಯ ದಾಖಲೆಗಳೆಂದರೆ ಅದು ಚೀನಾದಿಂದ ಬಂದದ್ದಾಗಿವೆ. ಕೆನಡಿಯನ್ ಎನ್ ಸೈಕ್ಲೊಪಿಡಿಯಾದ ಪ್ರಕಾರ ೪,೦೦೦ ವರ್ಷದ ಹಿಂದೆ ಇದರ ಜನಸಂಖ್ಯೆಯು ೧೬ ದಶಲಕ್ಷವಿತ್ತೆಂದು ದಾಖಲೆಗಳಿಂದ ತಿಳಿದುಬರುತ್ತದೆ. ಇನ್ನೊಂದು ಜನಗಣತಿಯನ್ನು ಹ್ಯಾನ್ ಡ್ಯಾನಸ್ಟಿಯ ಮೂಲಕ ಬಂದಿದ್ದು ಇದು ಚೀನಾದ ಅತ್ಯಂತ ಪುರಾತನ ಗಣತಿಯಾಗಿದೆ. ಆಗ ಕ್ರಿ.ಶ೨ನೇ ಇಸ್ವಿ ಯಲ್ಲಿ ಬರುವ ಇದನ್ನು ವಿದ್ವಾಂಸರು ನಿಖರವೆಂದು ಅಭಿಪ್ರಾಯಪಡುತ್ತಾರೆ. ಆ ಸಮಯ ಚೀನಾದಲ್ಲಿ ಸುಮಾರು ೧೨.೩೬ ದಶಲಕ್ಷ ಕುಟುಂಬಗಳ ಒಟ್ಟು ಜನಸಂಖ್ಯೆಯು ೫೭.೬೭ ದಶಲಕ್ಷ ಎಂದು ನೊಂದಾಯಿಸಲಾಗಿದೆ. ಮೂರನೆಯ ಗಣತಿ ದಾಖಲೆಯು ೧೪೪ಎಡಿ ಯಲ್ಲಿ ಜರುಗಿದ್ದ ಕುರಿತು ಮಾಹಿತಿ ದೊರಕುತ್ತದೆ. ೯.೯೪ ಕುಟುಂಬಗಳ ಒಟ್ಟು ಜನಸಂಖ್ಯೆ ೪೯.೭೩ ದಶಲಕ್ಷವಾಗಿತ್ತು.
ಈಜಿಪ್ತ್ ನಲ್ಲಿ ಜನಗಣತಿಯು ಆರಂಭಿಕ ಫರೊನಿಕ್ ಆಡಳಿತದ ಕಾಲ ಕ್ರೀ.ಪೂ.೩೩೪೦ ಮತ್ತು ಕ್ರಿ.ಪೂ೩೦೫೦ ನಲ್ಲಿ ನಡೆದವೆಂದು ಹೇಳಲಾಗುತ್ತಿದೆ. ಬೈಬಲ್ ನಲ್ಲಿ ಗಣತಿ ಬಗ್ಗೆ ಪ್ರಸ್ತಾಪಿಸಲಾಗಿದೆ:ಬುಕ್ ಆಫ್ ನಂಬರ್ಸ್ ನಲ್ಲಿ ಈಜಿಪ್ತ್ ನಿಂದ ಜನರು ಬಂದಾಗ ಇಸ್ರಲೈಟ್ ಜನರ ಸಂಖ್ಯಾಗಣನೆ ಮಾಡಲಾಯಿತು. ನಂತರ,ಇದನ್ನು ರಾಜ ಡೇವಿಡ್ ಈ ಜನಗಣತಿ ಮಾಡಿದನೆಂದು ವರದಿ ಮಾಡಲಾಗಿದೆ.
‘ಸೆನ್ಸಸ್’ ಎಂಬ ಪದ ಪುರಾತನ ರೊಮ್ ನಲ್ಲಿ ಲ್ಯಾಟಿನ್ ಭಾಷೆಯಲ್ಲಿ ಇದ್ದ ’ಸೆನ್ಸೆರೆ’ (ಅಂದರೆ ಅಂದಾಜು)ಎಂದು ಉಪಯೋಗಿಸ್ಪಟ್ಟಿದೆ. ಗಣತಿಯು ರೊಮನ್ ಸಾಮ್ರಾಜ್ಯದಲ್ಲಿ ಬಹಳಷ್ಟು ಮಹತ್ವದ ಪಾತ್ರ ವಹಿಸಿದೆ. ತೆರಿಗೆಗಳನ್ನು ನಿರ್ಧರಿಸಲು ಇದು ಅಗತ್ಯವಾಗಿತ್ತು ಕೆಲವು ಅಡೆತಡೆಗಳೊಂದಿಗೆ ಇದನ್ನು ಪ್ರತಿ ಐದು ವರ್ಷಕ್ಕೊಮ್ಮೆ ನಡೆಸಲಾಗುತಿತ್ತು. ಇದು ನಾಗರಿಕರ ನೊಂದಣಿ ಅವರ ಆಸ್ತಿ-ಪಾಸ್ತಿ ಅದರ ಮೂಲಕ ಅವರ ಹಕ್ಕು ಮತ್ತು ಕರ್ತ್ಯವ್ಯಗಳನ್ನು ನಿರ್ಧಿಸಲಾಗುತಿತ್ತು.
ಭಾರತದಲ್ಲಿ ಕ್ರಿಸ್ತಪೂರ್ವ ಮೂರನೇ ಶತಮಾನದ ಬೌದ್ಧ ಗ್ರಂಥಗಳಲ್ಲಿ ಮತ್ತು ಋಗ್ವೇದಗಳಲ್ಲಿ ಜನಸಂಖ್ಯೆ ಮತ್ತು ಜನಗಣತಿ ಇವುಗಳ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. ಖ್ಯಾತ ಅರ್ಥಶಾಸ್ತ್ರಜ್ಞನಾದ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಜನಗಣತಿ ನಡೆಸುವ ಗ್ಗೆ ವಿವರಗಳು ದೊರೆಯುತ್ತವೆ. ಆದರೂ ಜನಗಣತಿಯ ಅಂಕಿಅಂಶಗಳನ್ನು ತೆರಿಗೆ ಸಂಗ್ರಹಕ್ಕಾಗಿ ರಾಜನೀತಿಯನ್ನಾಗಿ ರೂಪಿಸಲಾಗಿತ್ತು.
ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಭಾರತದ ಜನಗಣತಿಯು ಭಾರತದ ಸಮಗ್ರ ಜನಸಂಖ್ಯೆಯ ಸಂಪೂರ್ಣ ಮಾಹಿತಿ ಒಳಗೊಂಡಿರುತ್ತದೆ. ಮುಂಬರುವ ೨೦೧೧ ರ ಜನಗಣತಿಯು ಮಾನವ ಇತಿಹಾಸದಲ್ಲೇ ಅತಿ ದೊಡ್ಡ ಜನಗಣತಿ ಎನಿಸಲಿದೆ.
ಆಧುನಿಕ ವೇಳೆಯ ಮೊದಲ ಭಾರತದ ಗಣತಿಯನ್ನು ೧೮೭೨ ರಲ್ಲಿ ಮಾಡಲಾಯಿತು. ಮೊದಲ ನಿಯಮಿತ ಗಣತಿ ೧೮೮೧ ರಲ್ಲಿ ಲಾರ್ಡ್ ರಿಪ್ಪನ್ ರಿಂದ ಆರಂಭವಾಯಿತು.ಆವಾಗಿನಿಂದ ಪ್ರತಿ ೧೦ ವರ್ಷಗಳಿಗೊಮ್ಮೆ ಜನಗಣತಿ ಮಾಡಲಾಗುತ್ತದೆ. ಇತ್ತೀಚಿನ ಗಣತಿ ಆರಂಭವಾಗಿದ್ದು ೧ ಮೇ ೨೦೧೦ ರಲ್ಲಿ. ಇದು ನ್ಯಾಶನಲ್ ಪಾಪ್ಯುಲೇಶನ್ ರಜಿಸ್ಟರ್ ನ್ನು ಪ್ರತಿಯೊಬ್ಬ ರಹವಾಸಿಯ ಛಾಯಾಚಿತ್ರ ಮತ್ತು ಬೆರಳಚ್ಚನ್ನು ನಮೂದಿಸುತ್ತದೆ. ಎಲ್ಲಾ ಜನಸಾಮಾನ್ಯ ಭಾರತೀಯರು ಅವರ ಅಪರೂಪದ ಐ.ಡಿ ಸಂಖ್ಯೆಯನ್ನು ಹೊಂದಬೇಕಾಗುತ್ತದೆ, ಅಲ್ಲದೇ ನ್ಯಾಶನಲ್ ಐಡೆಂಟಿಟಿ ಕಾರ್ಡ್ ಗಳನ್ನು ಪಡೆಯುತ್ತಾರೆ. ಗಣತಿಯನ್ನು ರಜಿಸ್ಟ್ರಾರ್ ಜನರಲ್ ಅಂಡ್ ಸೆನ್ಸಸ್ ಕಮೀಶ್ನರ್ ಆಫ್ ಇಂಡಿಯಾ, ದೆಹಲಿ ,ಅವರಿಂದ ಮಾಡಲಾಗುತ್ತದೆ.ಇದನ್ನು ೧೯೪೮ ರ ಸೆನ್ಸನ್ ಆಫ್ ಇಂಡಿಯಾ ಆಕ್ಟ್ ಅಡಿ ನಿರ್ವಹಿಸಲಾಗುತ್ತದೆ.ಈ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಜನಗಣತಿಯ ದಿನಾಂಕ ನಿಗದಿ, ಗಣತಿ ಕಾರ್ಯಕ್ಕೆ ಬೇಕಾದ ಸಿಬ್ಬಂದಿ ನೇಮಕ ಇತ್ಯಾದಿ ಹಕ್ಕುಗಳನ್ನು ಈ ಕಾನೂನು ನೀಡುತ್ತದೆ,ಇದರ ಕಚೇರಿಯು ಭಾರತ ಸರಕಾರದ ಗೃಹ ಸಚಿವಾಲಯವು ಇದರ ಸ್ಥಾನಿಕ ಕಚೇರಿಯಾಗಿದೆ. ಈ ಕಾನೂನು ಪ್ರತಿಯೊಬ್ಬ ನಾಗರಿಕನು ಜನಗಣತಿ ವೇಳೆಯಲ್ಲಿ ಕೇಳುವ ಮಾಹಿತಿಯನ್ನು ನಿಖರವಾಗಿ ಹೇಳಬೇಕಾಗುತ್ತದೆ ಎಂದು ಕಡ್ಡಾಯಗೊಳಿಸಿದೆ. ಕೇಳಲಾದ ಪ್ರಶ್ನೋತ್ತರಗಳಿಗೆ ತಪ್ಪು ಮಾಹಿತಿ ಅಥವಾ ಉತ್ತರ ಇಲ್ಲವೆ ಉತ್ತರ ಕೊಡದಿರುವುದನ್ನು ಈ ಕಾನೂನು ದಂಡ ವಿಧಿಸುತ್ತದೆ. ಈ ಕಾಯ್ದೆಯ ಮಹತ್ವದ ಅಂಸಹ್ವೆಂದರೆ ಇದರಲ್ಲಿ ಸಂಗ್ರಹಿಸಿದ ಪ್ರತಿ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿರಿಸುವುದು. ಗಣತಿಯ ದಾಖಲೆಗಳು ತನಿಖೆಗೆ ಮುಕ್ತವಾಗಿರುವುದಿಲ್ಲ ಅಥವಾ ಸಾಕ್ಷ್ಯಾಧಾರಕ್ಕೆ ಬರಲಾರವು.
ಗಣತಿಯನ್ನು ಎರಡು ಅಹಂತಗಳಲ್ಲಿ ನಡೆಸಲಾಗುತ್ತದೆ: ಮೊದಲು ಮನೆ ಪಟ್ತಿ ಮಾಡುವುದು,ಮನೆ ಸಂಖ್ಯೆ ನಮೂದು ಮಾಡುವುದು,ಎರಡನೆಯದು ನಿಜವಾದ ಜನಸಂಖ್ಯಾ ಎಣಿಕೆ. ಗಣತಿ ಪ್ರಚಾರಪದ್ದತಿಯಲ್ಲಿ ನಡೆಯುತ್ತದೆ. ಈ ಪದ್ದತಿಯಲ್ಲಿ ಪ್ರತಿ ಮನೆಗೂ ತೆರಳಿ ವಿಶೇಷ ತರಬೇತಾದ ಸಿಬ್ಬಂದಿ ಮಾಹಿತಿ ಸಂಗ್ರಹಿಸುತ್ತದೆ. ಸಿಬ್ಬಂದಿ ಆಯಾ ಮನೆಗೆ ಸಂಬಂಧಿಸಿದ ಅಂಕಿಅಂಶ ಸಂಗ್ರಹಿಸುತ್ತದೆ,ನೀರು ಮತ್ತು ವಿದ್ಯುತ್ ಪೂರೈಕೆ,ಭೂಮಿ ಒಡೆತನ,ವಾಹನಗಳು,ಕಂಪ್ಯುಟರ್ ಗಳು ಮತ್ತು ಇನ್ನಿತರ ಆಸ್ತಿಗಳು ಮತ್ತು ಸೇವೆಗಳು ಇತ್ಯಾದಿ. ಎರಡನೆಯ ಹಂತದಲ್ಲಿ ಒಟ್ಟು ಜನಸಂಖ್ಯೆಯನ್ನು ಲೆಕ್ಕಹಾಕಿ ವೈಯಕ್ತಿಕ ವಿಷಯಗಳನ್ನು ಶಾಸ್ತ್ರೀಯವಾಗಿ ಸಂಗ್ರಹಿಸುವುದು.
ಈ ಜನಗಣತಿ ಕಾರ್ಯಕ್ಕೆ ಸುಮಾರು ರೂ. ೨೨೦೯ ಕೋಟಿ ಬೇಕಾಗುತ್ತದೆ. ಎನ್‌ಪಿಆರ್ ತಯಾರಿಸುವ ಯೋಜನೆಗೆ ರೂ. ೩,೫೩೯.೨೪ ಕೋಟಿ ಮಂಜೂರಾಗಿದೆ.ಈ ಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಎಪ್ರಿಲ್-ಜುಲೈ ನಡುವಿನ ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಹಾಗೂ ಮನೆ ಗಣತಿ ನಡೆಯಲಿದೆ. ೨೦೧೧ನೆ ಫೆ.೯ರಿಂದ ೨೮ರ ವರೆಗಿನ ಎರಡನೆ ಹಂತದಲ್ಲಿ ದೇಶಾದ್ಯಂತ ಏಕಕಾಲದಲ್ಲಿ ಜನರ ಗಣತಿ ನಡೆಯಲಿದೆ.
೨೦೧೧ರ ರಾಷ್ಟ್ರೀಯ ಜನಗಣತಿ ಯೋಜನೆಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಮಂದಿಯನ್ನು ತೊಡಗಿಸಲಾಗುವುದು. ಪ್ರಪ್ರಥಮವಾಗಿ ಗುರುವಾರ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲರಿಂದ ಈ ಜನಗಣತಿ ಆರಂಭವಾಗಲಿದೆ.ಭಾರತ ಸ್ವತಂತ್ರವಾದ ಬಳಿಕ ಎಂದೂ ಜಾತಿವಾರು ಜನಗಣತಿ ನಡೆದಿಲ್ಲವಾದ ಕಾರಣ ಈ ಬಾರಿಯೂ ಜಾತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದಿಲ್ಲವೆಂದು ಸರಕಾರ ಸ್ಪಷ್ಟಪಡಿಸಿದೆ.ದೇಶದಲ್ಲಿ, ಅಡಕ ಗುರುತಿಸುವಿಕೆಯ ಮಾಹಿತಿ ಕೋಶವೊಂದನ್ನು ಸಷ್ಟಿಸಲು, ಸರಕಾರವು ೩೫ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ೧.೨ ಶತಕೋಟಿ ಜನಸಂಖ್ಯೆಯ ಪ್ರತಿ ಸದಸ್ಯನನ್ನು ಗುರುತಿಸಲು ಈ ಬಾರಿಯ ಗಣತಿಯಲ್ಲಿ ಪ್ರಯತ್ನಿಸಲಿದ್ದು, ಬಹುಶಃ ಇದೊಂದು ಅತ್ಯಂತ ಮಹತ್ವಾಕಾಂಕ್ಷಿ ರಾಷ್ಟ್ರೀಯ ಯೋಜನೆಯಾಗಿದೆ.ಈ ಬಹತ್ ಅಭಿಯಾನದ ವೇಳೆ ಎನ್ಸುಮರೇಟರರು ಮೊದಲ ಬಾರಿಗೆ, ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್, ಶುದ್ಧೀಕರಿಸಿದ ಕುಡಿಯುವ ನೀರು ಅಥವಾ ಶುದ್ಧೀಕರಿಸದ ನೀರು ಬಳಸುತ್ತಿರುವರೇ ಎಂಬ ಮಾಹಿತಿಯ ಜೊತೆಗೆ ಬೆರಳಚ್ಚು ಹಾಗೂ ಭಾವಚಿತ್ರಗಳನ್ನೂ ಸಂಗ್ರಹಿಸಲಿದ್ದಾರೆ. ಇದರಿಂದ ಸರಕಾರಕ್ಕೆ ಯೋಜನೆ ರೂಪಿಸಲು ಹಾಗೂ ದೇಶದ ಭದ್ರತೆ ಬಲಪಡಿಸಲು ಸಹಾಯವಾಗುವುದೆನ್ನಲಾಗಿದೆ.ಜನಗಣತಿ ಪೂರ್ಣಗೊಂಡೊಡನೆಯೇ ರಾಷ್ಟ್ರೀಯ ಜನಸಂಖ್ಯಾ ದಾಖಲೆಯೊಂದನ್ನು (ಎನ್‌ಪಿಆರ್) ರಚಿಸಲಾಗುವುದು. ಇದರಿಂದ ಸರಕಾರಕ್ಕೆ ದೇಶದ ಇಡೀ ಜನಸಂಖ್ಯೆಯ ಮಾಹಿತಿ ಒಂದೇ ಕೋಶದಲ್ಲಿ ದೊರೆಯಲಿದೆ.
ಗಣತಿ ಹೇಗೆ ಮಾಡುತ್ತಾರೆ?: ಗಣತಿದಾರರರು, ಶಾಲಾ ಶಿಕ್ಷಕರು ಮನೆಮನೆಗೆ ತೆರಳಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಜನಗಣತಿ ಅರ್ಜಿಯ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಬಳಿಕ ಎನ್.ಪಿ.ಆರ್. ಅರ್ಜಿಯನ್ನೂ ಭರ್ತಿ ಮಾಡುತ್ತಾರೆ. ಭರ್ತಿ ಮಾಡಿದ ಆರ್ಜಿಯನ್ನು ಸ್ಕ್ಯಾನ್ ಮಾಡಲಾಗುತ್ತದೆ. ಇದಕ್ಕಾಗಿ ಅತ್ಯಾಧುನಿಕ ಐಸಿ.ಆರ್ ತಂತ್ರಜ್ಞಾನ ಬಳಸಾಗುತ್ತದೆ. ಈ ತಂತ್ರಜ್ಞಾನವನ್ನು ಜನಗಣತಿಗೆ ಬಳಸುತ್ತಿರುವ ಏಕೈಕ ದೇಶ ಭಾರತ. ಎನ್.ಪಿ.ಆರ್. ಅರ್ಜಿಗಳು ಸ್ಕ್ಯಾನ ಆದ ಬಳಿಕ ಪ್ರತಿ ವ್ಯಕ್ತಿಯ ಭಾವಚಿತ್ರ ಮತ್ತು ಬೆರಳಚ್ಚನ್ನು ಸಂಗ್ರಹಿಸಲಾಗುತ್ತದೆ. ನಂತರ ಎಲ್ಲಾ ದಾಖಲೆಗಳನ್ನು ಯುಐಡಿಗೆ ರವಾನಿಸಲಾಗುತ್ತದೆ. ಈ ದಾಖಲೆಗಳ ಆಧಾರದಲ್ಲಿ ರಾಷ್ಟ್ರೀಯ ಗುರುತಿನ ಸಂಖ್ಯೆ ನೀಡಲಾಗುತ್ತದೆ.
೨೦೧೧ರ ಜನಗಣತಿಯ ವಿಶೇಷಗಳು: ೨೧,೦೩,೬೮೬ ಗಣತಿದಾರರರು, ೪,೦೫,೩೧೪ ಮೇಲ್ವಿಚಾರಕರು, ೩೫,ರಾಜ್ಯಗಳು ಕೇಂದ್ರಾಢಲಿತ ಪ್ರದೇಶಗಳು, ೬೪೦ ಜಿಲ್ಲೆಗಳು, ೫,೭೬೭ ತಾಲೂಕುಗಳು, ೭,೭೪೨ ನಗರ, ಪಟ್ಟಣಗಳು, ೬೦,೮೭೬ ಹಳ್ಳಿಗಳು, ೧೨೦ಕೋಟಿ ಜನಸಂಖ್ಯೆ, ಜನಗಣತಿU೨೦೦೦ ಕೋಟಿ ರೂ ವೆಚ್ಚ, ಎನ್.ಪಿ.ಆರ್ ಗೆ ೩,೭೫೯ ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ