ಪೋಸ್ಟ್‌ಗಳು

ಫೆಬ್ರವರಿ, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇತಿಹಾಸ ನಿರ್ಮಿಸಲಿರುವ ೨೦೧೧ ರ ಜನಗಣತಿ- ಒಂದಿಷ್ಟು ಮಾಹಿತಿ

ಇತಿಹಾಸ ನಿರ್ಮಿಸಲಿರುವ ೨೦೧೧ ರ ಜನಗಣತಿ- ಒಂದಿಷ್ಟು ಮಾಹಿತಿ ಮಾನವೇತಿಹಾಸದಲ್ಲಿ ಕಂಡು ಕೇಳರಿಯದ ಬಹು ಕೋಟಿ ವೆಚ್ಚದ ೧೫ನೇ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಪೆ.೯-೨೦೧೧ರಿಂದ ಎರಡನೇ ಹಂತದ ಜನಗಣತಿ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಇದೊಂದು ರಾಷ್ಟ್ರೀಯ ಯೋಜನೆಯಾದ್ದರಿಂದ ಪ್ರತಿಯೊಬ್ಬರು ಈ ಕಾರ್ಯಕ್ರಮದ ಭಾಗವಾಗಬೇಕು. ಇದರ ಯಶಸ್ವಿಗೆ ನಾವೆಲ್ಲರೂ ಪಣತೊಡಬೇಕು ಅಂದಾಗ ಮಾತ್ರ ಇದರ ಉದ್ದೇಶ ಸುಲಭವಾಗಿ ಈಡೇರಬಹುದು . ಇಲ್ಲವಾದರೆ ಹತ್ತರಲ್ಲಿ ಇದು ಒಂದು ಎಂಬಂತೆ ಕಾಟಾಚಾರದ ಗಣತಿಯಾಗಿ ಬಿಡಬಹುದು. ನಮ್ಮ ದೇಶವು ಈತನಕ ೧೫ ಜನಗಣತಿಗಳನ್ನು ಕಂಡಿದೆ. ಪ್ರತಿ ಬಾರಿ ಹಲವಾರು ಲೋಪದೋಷಗಳನ್ನು ಹೊತ್ತುಕೊಂಡು ನಡೆದ ಜನಗಣತಿ ಕಾರ್ಯ ಕಾಟಾಚಾರವೆಂಬಂತೆ ನಡೆಯುತ್ತಿತ್ತು. ಗಣತಿಗೆ ಬಂದ ಗಣತಿದಾರರು ಗಡಿಬಿಡಿಯಲ್ಲಿ ಅದೆಷ್ಟೋ ಜನರನ್ನು ಗಣತಿಯ ವ್ಯಾಪ್ತಿಗೆ ತರದೆ ಸರ್ಕಾರಕ್ಕೆ ವರದಿಯನ್ನು ನೀಡುತ್ತಿದ್ದ ಅದೆಷ್ಟು ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಜಣಗಣತಿ ಕಾರ್ಯವು ಒಂದು ರಾಷ್ಟ್ರ ಕಟ್ಟುವ ಕಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ನಮ್ಮ ಪಾಲೆಷ್ಟು? ಎನ್ನುವುದನ್ನು ನಾವು ಅವಲೋಕಿಸಿಕೊಳ್ಳಬೇಕಾಗಿದೆ. ನಾನು ಭಾರತಿಯ ಪ್ರಜೆಯಾಗಿ ಈ ರಷ್ಟ್ರೀಯ ಯೋಜನೆಯಲ್ಲಿ ಎಷ್ಟರ ಮಟ್ಟಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ ಎನ್ನುವುದರ ಕುರಿತು ಅವಲೋಕನೆ ಮಾಡಿಕೊಳ್ಳುವುದು ಒಳಿತು. ವಿಶ್ವವೇ ನಿಬ್ಬೆರಗಾಗಿ ನೋಡುವ ಭಾರ...

ಕಾವ್ಯಾಲಯ

ನಿಮ್ಮ ನೆನಪು ನಿಮ್ಮ ನೆನಪಿನಿಂದ ನನ್ನ ಕಣ್ಣು ತುಂಬಿ ಬಂದಿತು ನಿಮ್ಮ ನೆನಪಿನಿಂದ ನಮಗೆ ನವ ಚೈತನ್ಯ ತುಂಬಿತು ನಿಮ್ಮವಾಣಿಯನ್ನು ಕೇಳಿ ಕಲ್ಲು ಹೃದಯ ಕರಗಿತು ನಿಮ್ಮ ಅನುಸರಣೆಯು ಜೀವನ ಪಾವನಗೊಳಿಸಿತು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ನೀವು ತಂದ ದೇವ ಗ್ರಂಥ ನನ್ನ ಬದುಕೆ ರೂಪಿಸಿತು ನೀವು ಬಿಟ್ಟು ಹೋದ ಧರ್ಮ ನನಗೆ ಮುಕ್ತಿ ನೀಡಿತು ನಿಮ್ಮ ನಾಮಸ್ಮರಣೆಯಲ್ಲಿ ಹಗಲಿರುಳು ಕಳೆಯಲಿ ನಿಮ್ಮ ಗುಣಗಾನ ಮಾಡುತಲೆ ಪ್ರಾಣ ಪಕ್ಷಿಯ ಹಾರಲಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ನಿಮ್ಮ ನಡೆ ನುಡಿ ಎಷ್ಟೊಂದು ಸರಳ ಸುಂದರ ನಿಮ್ಮ ಜೀವನದ ಪುಟಗಳಲ್ಲಿ ಎಲ್ಲವೋ ಗೋಚರ ನಿಮ್ಮ ಅನುಸರಣೆ ಮಾಡುವೆ ನಾ ಅನುಚರ ದೊರಕುವುದು ನನಗಾಗ ನನ್ನಯ ಇಹಪರ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ನೀವು ತಂದ ಸತ್ಯ ಸಂದೇಶ ಲೋಕಕೆ ಬೆಳಕನು ತೋರುವುದು ಸೃಷ್ಟಿಕರ್ತನ ಮಹಾಮಹಿಮೆಯ ಸತ್ಯ ದರ್ಶನ ಮಾಡುವುದು ಇದನರಿಯದ ಮನುಜಕುಲವು ದಾರಿ ತಪ್ಪಿ ನಡೆಯುವುದು ತಪ್ಪಿ ನಡೆದ ದಾರಿ ನಮಗೆ ‘ನರಕ’ದಡೆಗೆ ನೂಕುವುದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್
ಭ್ರಷ್ಟಚಾರದಿಂದ ನಮ್ಮ ಮನೆ ಮತ್ತು ಮನ ಮುಕ್ತವಾಗಲಿ ೨೦೧೦ ನೇ ವರ್ಷದಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟಿದ್ದು ‘ಭ್ರಷ್ಟಚಾರ’ ವಿಷಯವಾಗಿ. ಏಕೆಂದರೆ ಈ ವರ್ಷ ನಮ್ಮ ರಾಜಕೀಯ ಭ್ರಷ್ಟಚಾರ ಸ್ಪೋಟಗೊಂಡು ಇಲ್ಲಿನ ರಾಜಕೀಯ ಲೆಕ್ಕಚಾರಗಳನ್ನೆ ಬುಡಮೇಲನ್ನಾಗಿಸಿತು. ಅದಕ್ಕಾಗಿಯೆ ಈ ವರ್ಷವನ್ನು ಭ್ರಷ್ಟ ರಾಜಕಾರಣಿಗಳ ವರ್ಷ ಎಂದರೆ ತಪ್ಪಾಗಲಾರದು. ಡಿ.೯ನ್ನು ಪ್ರತಿವರ್ಷ ಅಂತರಾಷ್ಟ್ರೀಯ ಭ್ರಷ್ಟಚಾರ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ ದಿನದಂದು ಮೈಕಿನ ಮುಂದೆ ನಿಂತು ಭ್ರಷ್ಟಚಾರದ ಬಗ್ಗೆ ಫುಂಖಾನುಪುಂಖವಾಗಿ ಭಾಷಣ ಬಿಗಿಯುವ ವ್ಯಕ್ತಿಯ ಚರಿತ್ರೆಯೂ ಸಹ ‘ಭ್ರಷ್ಟಚಾರ’ ರಹಿತವಾಗಿರುತ್ತದೆ ಎನ್ನುವುದರ ಯಾವ ಗ್ಯಾರಂಟಿಯನ್ನು ನಾವು ನೀಡಕಾಗಲ್ಲ. ಏಕೆಂದರೆ ಇಂದು ಭ್ರಷ್ಟಚಾರ ಎನ್ನುವುದು ರಕ್ತದಂತೆ ನಮ್ಮ ದೇಹದ ತುಂಬೆಲ್ಲ ಹರಿದಾಡುತ್ತಿದೆ. ವ್ಯವಸ್ಥೆಯ ಹಾಗೆ ಆಗಲು ಕಾರಣ ಯಾರು? ಎನ್ನುವ ಪ್ರಶ್ನೆ ಹುಡುಕಲು ಹೋದರೆ ಬಹಳ ಗಜಲಿನಲ್ಲಿ ಸಿಲುಕೊಳ್ಳಬೇಕಾದೀತು. ಆದ್ದರಿಂದ ಈ ವ್ಯವಸ್ಥೆ ಹೇಗಾದರೂ ಇರಲಿ. ಮೊದಲು ನಾವು ನಮ್ಮ ‘ಮನೆ’ ಮತ್ತು ‘ಮನ’ವನ್ನು ಇಣುಕಿ ನೋಡುವ. ಎಷ್ಟರ ಮಟ್ಟಿಗೆ ನಾವು ಈ ಭ್ರಷ್ಟಚಾರ’ ಎನ್ನುವ ಪೆಡಂಭೂತ ಹುಟ್ಟಲು, ಬೆಳೆಯಲು ಮತ್ತು ತನ್ನ ಕಬಂಧಬಾಹುಗಳನ್ನು ಚಾಚಲು ಕಾರಣೀಕರ್ತರಾಗಿದ್ದೇವೆ ಎನ್ನವುದು ಸ್ಪಷ್ಟವಾಗುತ್ತದೆ. ಭ್ರಷ್ಟಚಾರ’ ಪದಕ್ಕೆ ನಿಘಂಟಿನಲ್ಲಿ ದುರಾಚಾರ, ದುರ್ನೀತಿ, ಅನ್ಯಾಯ ಎಂಬೆಲ್ಲ ಅರ್ಥಗಳು ಇವೆ. ‘ಲಂಚ...

ಹಜ್: ವಿಶ್ವ ಬ್ರಾತೃತ್ವ ಸಂಗಮ

ಹಜ್: ವಿಶ್ವ ಬ್ರಾತೃತ್ವ ಸಂಗಮ ನಾನಾ ದೇಶ, ನಾನಾ ಭಾಷೆ ಇವರ ವೇಷವೂ ಒಂದೇ ಇವರ ಮಂತ್ರವೋ ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಇಲ್ಲಿ ಕರಿಯನು ಒಂದೇ ಬಿಳಿಯನು ಒಂದೇ ಹಿಂದಿ- ಚೀನಿ- ಪಾಕಿ- ಅಫ್ಘಾನಿ ಅಮೇರಿಕನ್, ರಷ್ಯನ್, ಸೌದಿ, ಇರಾನಿ ಇರಲಿ ಯಾವುದೆ ಭಾಷೆ ಇವರ ಘೋಷವು ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಇವರ ಗುರಿಯು ಒಂದೇ ಛಲವೂ ಒಂದೇ ದೇಶದ ಗಡಿ ಗಡಿಯನ್ನು ದಾಟಿ ಒಂದು ಗೂಡಿಹರು ತ್ಯಾಗಬಲಿದಾನದಿ ಸ್ಮರಣೆಯ ಮಾಡಲು ಇಲ್ಲಿಗೆ ಬಂದಿಹರು ಒಂದಾದರಿಲ್ಲಿ ಕರಿಯ, ಬಿಳಿಯರು ಬೆರತರು ಇಲ್ಲಿ ಬಡವ ಶ್ರೀಮಂತರು ಮುರಿದು ಹಾಕಿ ಉಚ್ಛ-ನೀಚತೆಯ ಸಂಕೋಲೆಗಳನು ಕೊಂಡಾಡಿದರು ಅಲ್ಲಾಹನ ನಾಮಸ್ಮರಣೆಯನು ಎಲ್ಲರ ಸ್ತುತಿಯು ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಜಗತ್ತಿನ ಕೇಂದ್ರ ಸ್ಥಾನವಿದು ಜಗತ್ಪಾಲಕನ ಭವ್ಯ ಮಂದಿರವಿದು ಇದು ವಿಶ್ವ ಬ್ರಾತೃತ್ವದ ನೆಲೆವೀಡು ಜೀವನದಿ ಒಮ್ಮೆ ನೀ ಬಂದು ನೋಡು ಇದು ವಿಶ್ವಮಾನವರ ಕೂಡಲ ಸಂಗಮ ಇಲ್ಲಿನ ವೇದಘೋಷವು ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್

ಪ್ರವಾದಿ ಮುಹಮ್ಮದ್(ಸ) ಇಂದಿಗೂ ಪ್ರಸ್ತುತ

ಪ್ರವಾದಿ ಮುಹಮ್ಮದ್(ಸ) ಇಂದಿಗೂ ಪ್ರಸ್ತುತ *ಎಮ್.ಆರ್.ಮಾನ್ವಿ. ಹೌದು. ಈ ಮಾತು ನೂರಕ್ಕೆ ನೂರು ಸತ್ಯ. ಪ್ರವಾದಿ ಮುಹಮ್ಮದ್(ಸ) ಎಂಬಚೈತನ್ಯದ ಚಿಲುಮೆ ಅರೇಬಿಯಾದ ಮರುಳುಗಾಡಿನಲ್ಲಿ ಹುಟ್ಟಿ ಈ ಇಹಲೋಕ ತ್ಯಜಿಸಿ ಇಂದಿಗೂ ೧೫೦೦ ವರ್ಷಗಳೇ ಸಂಧಿವೆ. ಆದರೂ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರ ನಡೆ-ನುಡಿ, ಎಲ್ಲವೂ ಇಂದಿಗೂ ಲಿಖಿತ ರೂಪದಲ್ಲಿ ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿ ಭದ್ರವಾಗಿದೆ. ಅದಕ್ಕಾಗಿಯೆ ಇಂದು ಲೋಕದ ಜನತೆಗೆ ಪ್ರವಾದಿ ಮುಹಮ್ಮದ್(ಸ) ಹಾಗೂ ಅವರು ತಂದ ಇಸ್ಲಾಮ್ ಧರ್ಮ ಕುತುಹಲವನ್ನು ಮೂಡಿಸಿದೆ. ಪ್ರವಾದಿ ಮುಹಮ್ಮದ್(ಸ)ರ ವಿರೋಧಿಗಳು ಅದೆಷ್ಟೂ ಅವರ ಕುರಿತಂತೆ ಗುಲ್ಲೆಬ್ಬಿಸಿದರೂ, ಪ್ರವಾದಿಯನ್ನು ಅರಿಯುವ ಜನರ ಕುತುಹಲ ತಣಿಯುತ್ತಿಲ್ಲ. ಕಳೆದ ನೂರು ವರ್ಷಗಳ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್(ಸ) ರ ಕುರಿತಂತೆ ಬರೆಯಲ್ಪಟ್ಟ ಪುಸ್ತಕಗಳು ಅತಿ ಹೆಚ್ಚು ಮರಾಟಗೊಂಡಿವೆ ಎಂಬುದರ ಕುರಿತು ಸರ್ವೆಯೊಂದು ತಿಳಿಸಿದೆ. ಆದ್ದರಿಂದಲೇ ನಾವು ಪ್ರವಾದಿ ಮುಹಮ್ಮದ್(ಸ) ರನ್ನು ಇಂದಿಗೂ ಪ್ರಸ್ತುತ ಅನ್ನಲೆಬೇಕು. ಅವರು ಬಿಟ್ಟು ಹೋದ ಅಸಂಖ್ಯಾತ ಅಗಣಿತ ನುಡಿ ಮುತ್ತುಗಳು ಹಾಗೂ ಅವರ ಅನುಯಾಯಿಗಳೆ ಇದಕ್ಕೆ ಸಾಕ್ಷಿ. ಅಂಧಕಾರ, ಅನಾಚಾರ,ಜೂಜು ವ್ಯಭಿಚಾರ, ಶರಾಬು, ಹೀಗೆ ಹತ್ತು ಹಲವು ಕೆಡುಕುಗಳು ತಾಂಡವವಾಡುತ್ತಿರುವ ಅರೆಬಿಯಾದ ಆ ಸಮಾಜದಲ್ಲಿ ಸ್ವಾರ್ಥಿಗಳ ಅಟ್ಟಹಾಸವು ಮೇರೆ ಮೀರಿತ್ತು. ಅಲ್ಲಿ ಮಾನವೀಯ ಮೌಲ್ಯಗಳು ಸತ್ತು ಹೋಗಿದ್ದವು. ...