ಪೋಸ್ಟ್‌ಗಳು

ಪರೇಶ್ ಮೇಸ್ತಾನ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿದ್ದ ಸಂಸದ, ಶಾಸಕರು ರಾಜಿನಾಮೆ ನೀಡಲಿ-ಐವಾನ್ ಡಿ’ಸೋಜಾ

ಇಮೇಜ್
  ಪರೇಶ್ ಮೇಸ್ತಾನ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿದ್ದ ಸಂಸದ, ಶಾಸಕರು ರಾಜಿನಾಮೆ ನೀಡಲಿ-ಐವಾನ್ ಡಿ’ಸೋಜಾ ಭಟ್ಕಳದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಟಿಯಲ್ಲಿ ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಮಾತನಾಡಿದರು.   ಭಟ್ಕಳ : ಹೊನ್ನಾವರದ ಪರೇಶ ಮೇಸ್ತಾ ಅವರ ಸಹಜ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆದು ಚುನಾವಣೆಯಲ್ಲಿ ಆರಿಸಿ ಬಂದಿದ್ದ ಬಿ.ಜೆ.ಪಿ. ಶಾಸಕರು, ಸಂಸದರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಅವರು ಆಗ್ರಹಿಸಿದರು.  ಭಟ್ಕಳದ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಣೆಯಾಗಿದ್ದ ಪರೇಶ ಮೇಸ್ತ ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದನ್ನೇ ಚುನಾವಣಾ ಬಂಡವಾಳವನ್ನಾಗಿಸಿಕೊAಡ ಬಿ.ಜೆ.ಪಿ. ಐವರು ಮುಸ್ಲೀಮರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸುತ್ತದೆ. ಅಂದಿನ ಮುಖ್ಯ ಮಂತ್ರಿ ಸಿ.ಓ.ಡಿ.ಗೆ ಪ್ರಕರಣ ಹಸ್ತಾಂತರ ಮಾಡಿದ್ದನ್ನು ವಿರೋಧಿಸಿ ನಮಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ, ನಾವೇನಿದ್ದರೂ ಸಿ.ಬಿ.ಐ. ಮೇಲೆ ನಂಬಿಕೆ ಇದ್ದವರು ಸಿ.ಬಿ.ಐ. ತನಿಖೆಯೇ ಆಗಬೇಕು ಎಂದು ಆಗ್ರಹಿಸಿ ಸಿ.ಬಿ.ಐ. ತನಿಖೆಗೆ ಒಪ್ಪಿಸಲಾಗಿತ್ತು. ಆದರೆ ಇಂದು ಸಿ.ಬಿ.ಐ. ಇವರ ಪರವಾಗಿ ವರದಿಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿ.ಬಿ.ಐ. ತನಿಖೆಯ ಮೇಲೆಯೇ ನಂಬಿಕೆ ಇಲ್ಲ ಎನ್ನುವ ಬಿ.ಜೆ.ಪಿ. ಬಣ್ಣ ಬಟಬಯಲ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ

ಇಮೇಜ್
*ಎಂ.ಆರ್.ಮಾನ್ವಿ ಭಟ್ಕಳ ಹೈದರಾಬಾದ್ ಕರ್ನಾಟಕದಲ್ಲಿ ಹುಟ್ಟಿಬೆಳದ ನನಗೆ ‘ಆಲೆಮನೆ’ ಅನುಭವ ತೀರ ಹೊಸದು. ಭಟ್ಕಳಕ್ಕೆ ಬಂದ ನಂತರ ಆಲೆಮನೆ ಕಾಣಲು ೧೭ವರ್ಷಗಳೇ ಬೇಕಾಯಿತು. ಇತ್ತಿಚಿಗೆ ನನ್ನ ಸಹೋದ್ಯೋಗಿ  ಮಿತ್ರ ವಿನಾಯಕ ಭಟ್ ತಮ್ಮ  ಹಳ್ಳಿಯಲ್ಲಿ ‘ಆಲೆಮನೆ’ ಶುರುವಾಗಿದೆ ಎಂದು ಅದರ ಸೊಗಸನ್ನು ವರ್ಣಿಸುತ್ತಿದ್ದರು. ನನಗೆ ಆಲೆಮನೆ ಕಾಣಬೇಕೆಂಬ ಬಹುದಿನಗಳ ಹಂಬಲದಿಂದ ನಾನೂ ಆಲೆಮನಗೆ ಬರುತ್ತೇನೆ ಎಂದು ಹೇಳಿದೆ. ಅದಕ್ಕೆ ಅವರು ಬಹಳ ಸಂತೋಷದಿಂದ ಒಪ್ಪಿ ನನ್ನನ್ನು ಆಲೆಮನೆ ದರುಶನ ಮಾಡಿಸಿದರು.  ಆಲೆಮನೆಯಂದರೆ ಅದೆಂತದೋ ದೊಡ್ಡಮನೆಯಲ್ಲಿ ಬೆಲ್ಲ ತಯಾರಿಸುವ ಫ್ಯಾಕ್ಟರಿ ಇರುತ್ತದೆ ಎಂದುಕೊಂಡಿದ್ದ ನನಗೆ ಅಲ್ಲಿ ಹೋದಾಗ ಕಂಡಿದ್ದೆ ಬೇರೆ.  ಸುಮಾರು ೮೫-೯೦ ವರ್ಷದ ಹಿರಿಯರೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಕೋಣಗಳ ಹಿಂದೆ ತಿರುಗುತ್ತ ಗಾಣದಲ್ಲಿ ಎಣ್ಣೆ ತೆಗೆಯುವ ಹಾಗೆ ಕಬ್ಬಿನ ರಸವನ್ನು ತೆಗೆಯುತ್ತಿದ್ದರು. ಒಂದೆಡೆ ಕೊಪ್ಪರಿಗೆಯೊಂದರಲ್ಲಿ ಕೊತಕೊತನೆ ಕುದಿಯುತ್ತ ತನ್ನ ಸುತ್ತಲೆಲ್ಲ ಸುವಾಸನೆ ಬೀರುತ್ತ ಕಬ್ಬಿನ ಹಾಲಿನ ರಸ ಪಾಕವಾಗಲು ಸಿದ್ದವಾಗತೊಡಗಿತ್ತು. ನಮ್ಮನ್ನು ಕಂಡವರೆ ಆ ೯೦ವರ್ಷದ ಅಜ್ಜ ಎದ್ದು ನಿಂತು ಸಾಹೇಬರನ್ನು ಬರಮಾಡಿಕೊಂಡಂತೆ ನಮ್ಮನ್ನು ಬರಮಾಡಿಕೊಂಡು ಅಲ್ಲಿಯೆ ಕುಳಿತುಕೊಳ್ಳಲು ಹಾಕಿದ್ದ ಬೆತ್ತಲು ಪಲ್ಲಂಗದ ಮೇಲೆ ಕುಳಿತುಕೊಳ್ಳುವಂತೆ ತಮ್ಮ ಬಡಕಲು ಕೈಯಿಂದ   ಸನ್ನೆ

ಸರ್ವಕೆಡುಕುಗಳ ಮೂಲ ಮದ್ಯಪಾನದಿಂದ ಮುಕ್ತಿ ನೀಡುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರದ ನವಜೀವನ ಸಮಿತಿ

ಇಮೇಜ್
*ಎಂ.ಆರ್.ಮಾನ್ವಿ ಮದ್ಯಪಾನವನ್ನು ಸರ್ವ ಕೆಡುಕುಗಳ ತಾಯಿ ಎಂದೇ ಹೇಳಲಾಗುತ್ತದೆ. ಒಮ್ಮೆ ಈ ರೋಗ ಹತ್ತಿಕೊಂಡರೆ ಅದನ್ನು ಬಿಡುವುದು  ಕಷ್ಟ. ಎಷ್ಟೋ ಜನ ಮದ್ಯಪಾನಿಗಳು ಇದನ್ನು ಕೆಡುಕು ಎಂದೇ ತಿಳಿದು ಮತ್ತದಕ್ಕೆ ಅಂಟಿಕೊಂಡು ತಮ್ಮ ಜೀವನವನ್ನೆ ನರಕವನ್ನಾಗಿ ಮಾಡುಕೊಳ್ಳುತ್ತಾರೆ. ಈ ಮಾಹ ಜಾಡ್ಯದಿಂದ ಹೊರಬರಲು ಅದೆಷ್ಟೋ ಮಂದಿ ಪ್ರಯತ್ನಿಸುತ್ತಾರೆ. ಆದರೆ ಇದನ್ನು ಸಂಪೂರ್ಣವಾಗಿ ತ್ಯಜಿಸಲು ಆಗದೆ ಚಟಪಟಿಸುತ್ತಾರೆ.  ಮದ್ಯಪಾನದಿಂದ ಮುಕ್ತರಾಗಲು ಹರಸಾಹಸ ಮಾಡಿಯೂ ಇದರಲ್ಲಿ ಯಶಸ್ಸು ಕಾಣದೆ ಮತ್ತೆ ಅದರ ದಾಸರಾಗಿ ಬಿಡುತ್ತಾರೆ. ಮದ್ಯಪಾನದಿಂದ ಮುಕ್ತರಾಗಬೇಕೆಂಬ ಅವರ ಕನಸು ಕನಸಾಗಿಯೆ ಉಳಿಯುತ್ತದೆ. ಇಂತಹದ್ದರಲ್ಲಿ   ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನವಜೀವನ ಸಮಿತಿಯು ಇಲ್ಲಿನ  ಮದ್ಯಪಾನಿಗಳ ಸಹಾಯಕ್ಕೆ ನಿಂತು ಎಷ್ಟೋ ಮಂದಿಯ ಕುಟುಂಬವನ್ನು ಕಾಪಾಡಿದ ಕೀರ್ತಿಗೆ   ಪಾತ್ರವಾಗಿದೆ.  ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯು ಭಟ್ಕಳ ಮತ್ತು ಹೊನ್ನಾವರ ತಾಲೂಕಿನಾದ್ಯಂತ ನಡೆಸುತ್ತಿರುವ  ಮದ್ಯವರ್ಧಕ ಶಿಬಿರಗಳಿಂದ ನೂರಾರು ಮಂದಿ ಪ್ರಯೋಜನ ಪಡೆದು ಈಗ ತಮ್ಮದೇ ಆದ ನವಜೀವನವನ್ನು ನಡೆಸುತ್ತಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಎಂತಹ ದುರ್ಗಮ ಸ್ಥಿತಿಯಲ್ಲೋ ಜೀವನ ನಿರ್ವಾಹಣೆಯ ಪಾಠವೇ ಇಲ್ಲಿನ ಶಿಬಿರಾರ್ಥಿಗಳಿಗೆ ನವಜೀವನ ನೀಡುತ್ತಿರುವುದು ವಿಶೇಷವಾಗಿದೆ.  ಪ್ರಪಂಚದ ಐದು ಮಾರಕ ರೋಗಗಳಲ್ಲಿ ಮದ್ಯಪಾನವು

ಇಂಜಿನೀಯರಿಂಗ್ ವಿದ್ಯಾರ್ಥಿಯ ಉರಗಪ್ರೇಮ

ಇಮೇಜ್
ಇಂಜಿನೀಯರಿಂಗ್ ವಿದ್ಯಾರ್ಥಿಯ ಉರಗಪ್ರೇಮ  ೨೦೦ಕ್ಕೂ ಹೆಚ್ಚು ಹೆಬ್ಬಾವುಗಳ ಸಂರಕ್ಷಕ ಮಿಸ್ಬಾ-ಉಲ್-ಹಖ್ * ಮುಹಮ್ಮದ್ ರಝಾ ಮಾನ್ವಿ ಹಾವುಗಳೆಂದರೆ ಎಲ್ಲರಿಗೂ ಭಯ.ಅದರಲ್ಲೂ ಹೆಬ್ಬಾವು ಕಂಡರೆ ಹೆದರಿಕೆ ಹುಟ್ಟಿಕೊಳ್ಳುತ್ತದೆ. ಇಂತಹದ್ದರಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಸರ್ಪ ಹಾಗೂ ಹೆಬ್ಬಾವುಗಳನ್ನು ಹಿಡಿದು ಅವುಗಳನ್ನು ಸಂರಕ್ಷಿಸಿದ ಕೀರ್ತಿ ಭಟ್ಕಳದ ಅಂಜುಮನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನ ಸಿವಿಲ್ ಇಂಜಿನೀಯರ್ ವಿಭಾಗದ ೨೨ವರ್ಷದ ವಿದ್ಯಾರ್ಥಿ ಮಿಸ್ಬಾ-ಉಲ್-ಹಖ್ ಗೆ ಸಲ್ಲುತ್ತದೆ.  ಈತ ತನ್ನ ೧೧ನೇ ವರ್ಷದ ವಯೋಮಾನದಲ್ಲೆ ಹಾವುಗಳನ್ನು ಹಿಡಿಯು ಕಲೆಯನ್ನು ರೂಢಿಸಿಕೊಂಡಿರುವುದಾಗಿ ಹೇಳುತ್ತಾನೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿನ ಶಮ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ನೌನಿಹಾಲ್ ಶಾಲೆಗಳಲ್ಲಿ ಪಡೆದ ಈತ ಓದಿನಲ್ಲೂ ಮುಂಚೂಣಿಯ ವಿದ್ಯಾರ್ಥಿ, ಈಗ ಸಿವಿಲ್ ಇಂಜಿನೀಯರಿಂಗ್ ಓದುತ್ತಿರುವ ಈತ ಭಟ್ಕಳದ ಯಾವ ಮೂಲೆಯಲ್ಲೂ ಹಾವು ಕಂಡರೆ ಸಾಕು ಅದನ್ನು ಸುರಕ್ಷತವಾಗಿ ಹಿಡಿದು ಅರಣ್ಯ ಇಲಾಖೆಯ ಸುಪರ್ಧಿಗೆ ಒಪ್ಪಿಸುತ್ತಾನೆ. ಹಾವುಗಳನ್ನು ಕಂಡರೆ ಹಿಡಿ, ಕೊಲ್ಲು ಎನ್ನುವ ಜನರ ಮಧ್ಯೆ ಇಂತಹ ಉರಗಪ್ರೇಮಿಯೊಬ್ಬ ತನ್ನ ಮಾನವೀಯ ಸ್ಪರ್ಷದೊಂದಿಗೆ ಅವುಗಳಿಗೆ ಮರುಜೀವ ನೀಡುತ್ತಾನೆ.  ಉತ್ತರಕನ್ನಡ ಜಿಲ್ಲೆಯು ಶೇ೮೦ರಷ್ಟು ಅರಣ್ಯ ಪ್ರದೇಶ ಹೊಂದಿದ್ದು ಅದರಲ್ಲಿ ಭಟ್ಕಳದಲ್ಲ

ಸ್ಟೀಲ್ ಪಾತ್ರೆಗಳ ಭರಾಟೆಯಲ್ಲಿ ಮರೆಯಾಗುತ್ತಿರುವ ಮಣ್ಣಿನ ಮಡಕೆ

ಇಮೇಜ್
ಸ್ಟೀಲ್ ಪಾತ್ರೆಗಳ ಭರಾಟೆಯಲ್ಲಿ ಮರೆಯಾಗುತ್ತಿರುವ ಮಣ್ಣಿನ ಮಡಕೆ;  ಕುಂಬಾರಣ್ಣ ಈಗ ನೆನಪು ಮಾತ್ರ *ಮುಹಮ್ಮದ್ ರಝಾ ಮಾನ್ವಿ ಹೌದು ಇದು ಪ್ಲಾಸ್ಟಿಕ್ ಯುಗ. ನಮ್ಮ ಮನೆಯ ಪ್ರತಿಯೊಂದು ಸ್ಥಳವನ್ನು ಪ್ಲಾಸ್ಟಿಕ್ ಕಬಳಿಸಿಕೊಂಡಿದೆ. ನಾವು ಚಿಕ್ಕವರಿದ್ದಾಗ ಕುಂಬಾರ ಓಣಿಗೆ ಹೋಗಿ ಬೇಳೆ ಬೇಯಿಸುವ ಮಡಕೆ ತರವುದೆ ಒಂದು ಸಾಹಸ. ಅದನ್ನು ಜೋಪಾನವಾಗಿ ಮನೆಮುಟ್ಟಿಸುವುದರೊಳಗೆ ಸಾಕುಸಾಕಾಗಿ ಹೋಗುತ್ತಿತ್ತು. ಈಗ ಅಂತಹ ಪ್ರಮೇಯವೇ ಇಲ್ಲ. ಏಕೆಂದರೆ ಮಡಕೆಯ ಬದಲಿಗೆ ಲೋಹದ ವಸ್ತುಗಳು ಅಡುಗೆ ಮನೆ ಸೇರಿಕೊಂಡಿವೆ. ಅಲಂಕಾರಿಕ ಮಣ್ಣಿನ ಪರಿಕರಕಗಳ ಬದಲಾಗಿ ಆರ್ಟಿಫಿಸಿಯಲ್ ಪ್ಲಾಸ್ಟಿಕ್ ವಸ್ತುಗಳು ತಮ್ಮ ಜಾಗವನ್ನು ಪಡೆದುಕೊಂಡಿವೆ.  ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ ಹಾರ್‍ಯಾರಿ ಮಣ್ಣಾ ತುಳಿದಾನ ಹಾರಿ ಹಾರ್‍ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ ನಾರ್‍ಯಾರು ಹೊರುವಂತ ಐರಾಣಿ ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ ಘಟ್ಟಿಸಿ ಮಣ್ಣಾ ತುಳಿದಾನ ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ ಮಿತ್ರೇರು ಹೊರುವಂತ ಐರಾಣಿ ಈ ಜಾನಪದ ಹಾಡಿನ ಕುಂಬಾರಣ್ಣ ಈಗ ನೆನಪು ಮಾತ್ರ. ಕುಂಬಾರಣ್ಣನೀಗ ಮುಂಜಾನೆದ್ದು ಹಾಲು ಬಾನು ಉಂಡು,ಹಾರ್‍ಯಾಡಿ ಮಣ್ಣನ್ನು ತುಳಿಯುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಆಧುನಿಕತೆಯ ಭರಾಟೆಯಲ್ಲಿ ಜನರು ಕುಂಬಾರಣ್ಣ ಮಾಡಿದ ಮಣ್ಣಿನ ಮಡಿಕೆಗಳನ್ನು ಕೊಳ್ಳಲು ಸಿದ್ದರಿಲ್ಲ. ಅಲ್ಲಲ್ಲಿ ಕೆಲವರು

ಭಟ್ಕಳ ಪುರಸಭೆ ಚುನಾವಣೆ

ಭಟ್ಕಳ ಪುರಸಭೆ ಚುನಾವಣೆ;ಗೆದ್ದವರ ಬಾಲ ಹಿಡಿಯುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು *ಎಂ.ಆರ್.ಮಾನ್ವಿ ಸ್ಥಳಿಯಾಡಳಿತ ಚುನಾವಣೆಗಳು ಮುಗಿದು ಫಲಿತಾಂಶವು ಹೊರಬಿದ್ದಿದೆ. ಯಾರ್‍ಯಾರ ಹಣೆಬರಹ ಏನು ಎಂಬುದು ಈಗಾಗಲೇ ಸಾಬೀತಾಗಿದೆ. ಈಗ ಪ್ರಮುಖ ರಾಜಕೀಯ ಪಕ್ಷಕಗಳಲ್ಲಿ ಅಭ್ಯರ್ಥಿಗಳ ಲೆಕ್ಕಚಾರ ಶುರುವಾಗಿದೆ. ಯಾವ ಪಕ್ಷದ ಅಭ್ಯರ್ಥಿಗಳು ಯಾವ ಯಾವ ವಾರ್ಡಿನಲ್ಲಿ ಗೆಲ್ಲುವು ಸಾಧಿಸಿದ್ದಾರೆ ಎನ್ನುವ ಗುಣಕಾರ ಭಾಗಕಾರಗಳು ಪ್ರಾರಂಭವಾಗಿದ್ದು, ಕಾಂಗ್ರೇಸ್, ಜೆ.ಡಿ.ಎಸ್. ಹಾಗೂ ಮಾಜಿ ಸಚಿವರು ಚುನಾವಣೆಯಲ್ಲಿ ಗೆದ್ದವರು ತಮ್ಮ ಬೆಂಬಲಿಗರು ಎಂದು ಹೇಳಿಕೊಳ್ಳುತ್ತ ಗೆದ್ದವರ ಬಾಲ ಹಿಡಿಯುವ ತವಕದಲ್ಲಿದ್ದಾರೆ.  ೨೩ಮಂದಿ ಸದಸ್ಯರನ್ನು ಹೊಂದಿರುವ ಭಟ್ಕಳ ಪುರಸಭೆಯಲ್ಲಿ ಕಾಂಗ್ರೇಸ್ ೨ ಜೆ.ಡಿ.ಎಸ್.೧ಕ್ಷೇತ್ರದಲ್ಲಿ ಪಕ್ಷದ ಬ್ಯಾನರ್ ನಡಿ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ ೨೦ ಮಂದಿ ಸದಸ್ಯರು ಪಕ್ಷೇತರ ಅಭ್ಯರ್ಥಿಗಳಾಗಿ  ಸ್ಪರ್ಧಿಸಿದ್ದು ಅದರಲ್ಲಿ ೧೩ಮಂದಿ ಸದಸ್ಯರು ಇಲ್ಲಿನ ಪ್ರಮುಖ ರಾಜಕೀಯ,ಸಾಮಾಜಿಕ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್-ವ- ತಂಝೀಮ್ ಹಾಗೂ ಮೊಹಲ್ಲಾಗಳ ಮಸೀದಿ ಕಮಿಟಿಗಳ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದು ರಾಜ್ಯಕ್ಕೆ ಮಾದರಿಯಾಗಿದ್ದಾರೆ.  ಈಗ ಭಟ್ಕಳದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಪತ್ರಿಕಾಗೋಷ್ಟಿಗಳನ್ನು ಕರೆದು ಗೆದ್ದವರಲ್ಲಿ ನಾಲ್ಕು ಮಂದಿ ತಮ್ಮ ಬೆಂಬಲಿಗರು ಎಂದು ಹೇಳಿದರೆ, ಶಾಸಕ ಜೆ.ಡಿ.ನಾಯ್ಕ ಸ್ವ

‘ಮಹಿಳೆಯರ ಶೋಷಣೆ ಮುಕ್ತ ಬದುಕು ರೂಪಿಸಲು ಇದು ಸೂಕ್ತ ಸಮಯ’

ಇಮೇಜ್
ಮಾ.೮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಈ ಲೇಖನ ಎಂ.ಆರ್.ಮಾನ್ವಿ. ೨೦೧೩ನೇ ಮಾರ್ಚ ೮ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರಲ್ಲೇನು ವಿಶೇಷ, ಪ್ರತಿವರ್ಷವೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಎನ್ನವುದು ನಿಮ್ಮ ಪ್ರಶ್ನೆಯಾಗಿದ್ದರೆ ಖಂಡಿತವಾಗಿಯೂ ನಿಮ್ಮ ಪ್ರಶ್ನೆ ಸಹಜವಾದುದೇ. ಆದರೆ ಬಾರಿಯ ದಿನಾಚರಣೆಗೊಂದು ಮಹತ್ವ ಇರುವುದು ಅದರ ಘೋಷವಾಖ್ಯದಲ್ಲಿ. A promise is a promise: time  for action to end violence against women’   “ಮಹಿಳೆಯ ಶೋಷಣೆ ಕೊನೆಗಾಣಿಸಲು ಇದು ಸೂಕ್ತ ಸಮಯ; ಇದೊಂದು ಪ್ರತಿಜ್ಞೆ” ಎನ್ನುವ ಸಂಕಲ್ಪದೊಂದಿಗೆ ೨೦೧೩ನೇ ವರ್ಷವನ್ನು ಆಚರಿಸುತ್ತಿರುವುದೇ ಇದಕ್ಕೆ ಕಾರಣ.   ಇತ್ತಿಚೆಗೆ ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ಶೋಷಣೆ, ದೌರ್ಜನ್ಯದ ಹಿನ್ನೆಲೆಯಲ್ಲಿ ಇಂತಹದ್ದೊಂದು ಘೋಷವ್ಯಾಖ್ಯ ಬಹಳ ಮಹತ್ವ ಪಡೆದುಕೊಂಡಿದೆ. ನಿಜಕ್ಕೂ ಮಹಿಳೆಯರ ಮೇಲಿನ  ಶೋಷಣೆಯನ್ನು ಕೊನೆಗಾಣಿಸಲು ಇದು ಸೂಕ್ತ ಸಮಯ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ನಡೆದ ಮಹಿಳಾ ದೌರ್ಜನ್ಯಗಳು, ಶೋಷಣೆಗಳು ಲೆಕ್ಕ ಹಾಕಿದರೆ ಬರೆಯಲು ಪುಟಗಳು ಸಾಲವು.    ನಮ್ಮ ಕಾನೂನು ಮಹಿಳೆಯರಿಗೆ ಯಾವ ರೀತಿಯ ರಕ್ಷಣೆಯ ಭರವಸೆಯನ್ನು ನೀಡಿದೆಯೂ ಅದಕ್ಕಿಂತ ಹತ್ತುಪಟ್ಟು ಮಹಿಳಾ ಶೋಷಣೆಯ ಘಟನೆಗಳು ನಮ್ಮ ದೇಶದಲ್ಲಿ ಜರಗುತ್ತಿರು

ಭಟ್ಕಳ ಪುರಸಭೆ ಚುನಾವಣೆ ರಾಜ್ಯಕ್ಕೆ ಮಾದರಿ; ೨೩ರಲ್ಲಿ ೧೩ವಾರ್ಡುಗಳಿಗೆ ಅವಿರೋಧ ಆಯ್ಕೆ

ಭಟ್ಕಳ ಪುರಸಭೆ ಚುನಾವಣೆ ರಾಜ್ಯಕ್ಕೆ ಮಾದರಿ; ೨೩ರಲ್ಲಿ ೧೩ವಾರ್ಡುಗಳಿಗೆ ಅವಿರೋಧ ಆಯ್ಕೆ ಮೊಹಲ್ಲಾದ ಮಸೀದಿ ಕಮಿಟಿಗಳೇ ಇಲ್ಲಿ ಹೈಕಮಾಂಡ್ *ಮುಹಮ್ಮದ್ ರಝಾ ಮಾನ್ವಿ ಚುನಾವಣೆಯಲ್ಲಿ ಮರಾಮಾರಿ, ಟಿಕೆಟಿಗಾಗಿ ಪೈಪೋಟಿ ಇದ್ದದ್ದೇ. ಇದೇ ಸುದ್ದಿಗಳು ಚುನಾವಣೆ ಮುಗಿಯುವವರೆಗೂ ಪತ್ರಿಕೆಗಳಲ್ಲಿ ರಾರಾಜಿಸುತ್ತಿರುತ್ತವೆ. ಆದರೆ ಹೊಡೆದಾಟ ಬಡಿದಾಟದ ಸುದ್ದಿಗಳು ಎಲ್ಲೂ ಕಾಣ ಸಿಗುವುದಿಲ್ಲ.  ಈಗ ಮತ್ತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಇಲ್ಲಿಯೂ ಜನರು ತಮ್ಮ ತಮ್ಮ ಪಕ್ಷದ ಬ್ಯಾನರ್ ನಡಿ ತಮ್ಮದೆ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಹರಸಹಾಸಕ್ಕಿಳಿದ್ದಿದ್ದಾರೆ. ಎಲ್ಲೋ ಒಂದೆರೆಡು ಕಡೆ ಅಭ್ಯರ್ಥಿಗಳ ಕೊರತೆಯಿಂದಲೂ ಅಥವಾ ಆ ವಾರ್ಡಿನ ವ್ಯಕ್ತಿಯ ವರ್ಚಸ್ಸಿನಿಂದಲೂ ಅವಿರೋಧ ಆಯ್ಕೆಗಳು ನಡೆಯುತ್ತವೆ. ಆದರೆ ಯೋಜಿತ ಮತ್ತು ಕ್ರಮಬದ್ಧ ರೀತಿಯಲ್ಲಿ ಆ ವಾರ್ಡಿನ ಜನತೆ ಮುಂದೆ ನಿಂತು ತಮ್ಮ ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ವಿರಳ ಮತ್ತು ಅಪರೂಪ.  ಪಂಚಾಯತ್, ಹಾಗೂ ಪುರಸಭೆ ಚುನಾವಣೆಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಗೆಲುವು ಸಾಧಿಸಿ ತಮ್ಮ ಅಧಿಕಾರವಧಿಯಲ್ಲ ಆ ಹಣವನ್ನು ಮರುಪೂರಣಗೊಳಿಸಲು ಹೆಣಗಾಡುತ್ತಿರುವ ಎಷ್ಟೋ ಮಂದಿ ಜನಪ್ರತಿನಿಧಿಗಳು ನಾವು ಕಂಡಿಲ್ಲ? ಯಾವುದೇ ಆಯ್ಕೆಗೊಂಡ ವ್ಯಕ್ತಿ ಸಾಮಾಜಿಕ ತುಡಿತ ಹಾಗೂ ಕಳಕಳಿಯಿಮದ ತನ್ನ ವಾರ್ಡಿನ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾನೆ? ಅಥವಾ ಆ ವ್ಯಕ್ತಿಯ ಕೊರಳುಪಟ್ಟಿ