ಪೋಸ್ಟ್‌ಗಳು

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ

ಇಮೇಜ್
*ಎಂ.ಆರ್.ಮಾನ್ವಿ ಭಟ್ಕಳ ಹೈದರಾಬಾದ್ ಕರ್ನಾಟಕದಲ್ಲಿ ಹುಟ್ಟಿಬೆಳದ ನನಗೆ ‘ಆಲೆಮನೆ’ ಅನುಭವ ತೀರ ಹೊಸದು. ಭಟ್ಕಳಕ್ಕೆ ಬಂದ ನಂತರ ಆಲೆಮನೆ ಕಾಣಲು ೧೭ವರ್ಷಗಳೇ ಬೇಕಾಯಿತು. ಇತ್ತಿಚಿಗೆ ನನ್ನ ಸಹೋದ್ಯೋಗಿ  ಮಿತ್ರ ವಿನಾಯಕ ಭಟ್ ತಮ್ಮ  ಹಳ್ಳಿಯಲ್ಲಿ ‘ಆಲೆಮನೆ’ ಶುರುವಾಗಿದೆ ಎಂದು ಅದರ ಸೊಗಸನ್ನು ವರ್ಣಿಸುತ್ತಿದ್ದರು. ನನಗೆ ಆಲೆಮನೆ ಕಾಣಬೇಕೆಂಬ ಬಹುದಿನಗಳ ಹಂಬಲದಿಂದ ನಾನೂ ಆಲೆಮನಗೆ ಬರುತ್ತೇನೆ ಎಂದು ಹೇಳಿದೆ. ಅದಕ್ಕೆ ಅವರು ಬಹಳ ಸಂತೋಷದಿಂದ ಒಪ್ಪಿ ನನ್ನನ್ನು ಆಲೆಮನೆ ದರುಶನ ಮಾಡಿಸಿದರು.  ಆಲೆಮನೆಯಂದರೆ ಅದೆಂತದೋ ದೊಡ್ಡಮನೆಯಲ್ಲಿ ಬೆಲ್ಲ ತಯಾರಿಸುವ ಫ್ಯಾಕ್ಟರಿ ಇರುತ್ತದೆ ಎಂದುಕೊಂಡಿದ್ದ ನನಗೆ ಅಲ್ಲಿ ಹೋದಾಗ ಕಂಡಿದ್ದೆ ಬೇರೆ.  ಸುಮಾರು ೮೫-೯೦ ವರ್ಷದ ಹಿರಿಯರೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಕೋಣಗಳ ಹಿಂದೆ ತಿರುಗುತ್ತ ಗಾಣದಲ್ಲಿ ಎಣ್ಣೆ ತೆಗೆಯುವ ಹಾಗೆ ಕಬ್ಬಿನ ರಸವನ್ನು ತೆಗೆಯುತ್ತಿದ್ದರು. ಒಂದೆಡೆ ಕೊಪ್ಪರಿಗೆಯೊಂದರಲ್ಲಿ ಕೊತಕೊತನೆ ಕುದಿಯುತ್ತ ತನ್ನ ಸುತ್ತಲೆಲ್ಲ ಸುವಾಸನೆ ಬೀರುತ್ತ ಕಬ್ಬಿನ ಹಾಲಿನ ರಸ ಪಾಕವಾಗಲು ಸಿದ್ದವಾಗತೊಡಗಿತ್ತು. ನಮ್ಮನ್ನು ಕಂಡವರೆ ಆ ೯೦ವರ್ಷದ ಅಜ್ಜ ಎದ್ದು ನಿಂತು ಸಾಹೇಬರನ್ನು ಬರಮಾಡಿಕೊಂಡಂತೆ ನಮ್ಮನ್ನು ಬರಮಾಡಿಕೊಂಡು ಅಲ್ಲಿಯೆ ಕುಳಿತುಕೊಳ್ಳಲು ಹಾಕಿದ್ದ ಬೆತ್ತಲು ಪಲ್ಲಂಗದ ಮೇಲೆ ಕುಳಿತುಕೊಳ್ಳುವಂತೆ ತಮ್ಮ ಬಡ...

ಸರ್ವಕೆಡುಕುಗಳ ಮೂಲ ಮದ್ಯಪಾನದಿಂದ ಮುಕ್ತಿ ನೀಡುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರದ ನವಜೀವನ ಸಮಿತಿ

ಇಮೇಜ್
*ಎಂ.ಆರ್.ಮಾನ್ವಿ ಮದ್ಯಪಾನವನ್ನು ಸರ್ವ ಕೆಡುಕುಗಳ ತಾಯಿ ಎಂದೇ ಹೇಳಲಾಗುತ್ತದೆ. ಒಮ್ಮೆ ಈ ರೋಗ ಹತ್ತಿಕೊಂಡರೆ ಅದನ್ನು ಬಿಡುವುದು  ಕಷ್ಟ. ಎಷ್ಟೋ ಜನ ಮದ್ಯಪಾನಿಗಳು ಇದನ್ನು ಕೆಡುಕು ಎಂದೇ ತಿಳಿದು ಮತ್ತದಕ್ಕೆ ಅಂಟಿಕೊಂಡು ತಮ್ಮ ಜೀವನವನ್ನೆ ನರಕವನ್ನಾಗಿ ಮಾಡುಕೊಳ್ಳುತ್ತಾರೆ. ಈ ಮಾಹ ಜಾಡ್ಯದಿಂದ ಹೊರಬರಲು ಅದೆಷ್ಟೋ ಮಂದಿ ಪ್ರಯತ್ನಿಸುತ್ತಾರೆ. ಆದರೆ ಇದನ್ನು ಸಂಪೂರ್ಣವಾಗಿ ತ್ಯಜಿಸಲು ಆಗದೆ ಚಟಪಟಿಸುತ್ತಾರೆ.  ಮದ್ಯಪಾನದಿಂದ ಮುಕ್ತರಾಗಲು ಹರಸಾಹಸ ಮಾಡಿಯೂ ಇದರಲ್ಲಿ ಯಶಸ್ಸು ಕಾಣದೆ ಮತ್ತೆ ಅದರ ದಾಸರಾಗಿ ಬಿಡುತ್ತಾರೆ. ಮದ್ಯಪಾನದಿಂದ ಮುಕ್ತರಾಗಬೇಕೆಂಬ ಅವರ ಕನಸು ಕನಸಾಗಿಯೆ ಉಳಿಯುತ್ತದೆ. ಇಂತಹದ್ದರಲ್ಲಿ   ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನವಜೀವನ ಸಮಿತಿಯು ಇಲ್ಲಿನ  ಮದ್ಯಪಾನಿಗಳ ಸಹಾಯಕ್ಕೆ ನಿಂತು ಎಷ್ಟೋ ಮಂದಿಯ ಕುಟುಂಬವನ್ನು ಕಾಪಾಡಿದ ಕೀರ್ತಿಗೆ   ಪಾತ್ರವಾಗಿದೆ.  ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯು ಭಟ್ಕಳ ಮತ್ತು ಹೊನ್ನಾವರ ತಾಲೂಕಿನಾದ್ಯಂತ ನಡೆಸುತ್ತಿರುವ  ಮದ್ಯವರ್ಧಕ ಶಿಬಿರಗಳಿಂದ ನೂರಾರು ಮಂದಿ ಪ್ರಯೋಜನ ಪಡೆದು ಈಗ ತಮ್ಮದೇ ಆದ ನವಜೀವನವನ್ನು ನಡೆಸುತ್ತಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಎಂತಹ ದುರ್ಗಮ ಸ್ಥಿತಿಯಲ್ಲೋ ಜೀವನ ನಿರ್ವಾಹಣೆಯ ಪಾಠವೇ ಇಲ್ಲಿನ ಶಿಬಿರಾರ್ಥಿಗಳಿಗೆ ನವಜೀವನ ನೀಡುತ್ತಿರುವುದು ವಿಶೇಷವಾಗಿದೆ.  ...

ಇಂಜಿನೀಯರಿಂಗ್ ವಿದ್ಯಾರ್ಥಿಯ ಉರಗಪ್ರೇಮ

ಇಮೇಜ್
ಇಂಜಿನೀಯರಿಂಗ್ ವಿದ್ಯಾರ್ಥಿಯ ಉರಗಪ್ರೇಮ  ೨೦೦ಕ್ಕೂ ಹೆಚ್ಚು ಹೆಬ್ಬಾವುಗಳ ಸಂರಕ್ಷಕ ಮಿಸ್ಬಾ-ಉಲ್-ಹಖ್ * ಮುಹಮ್ಮದ್ ರಝಾ ಮಾನ್ವಿ ಹಾವುಗಳೆಂದರೆ ಎಲ್ಲರಿಗೂ ಭಯ.ಅದರಲ್ಲೂ ಹೆಬ್ಬಾವು ಕಂಡರೆ ಹೆದರಿಕೆ ಹುಟ್ಟಿಕೊಳ್ಳುತ್ತದೆ. ಇಂತಹದ್ದರಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಸರ್ಪ ಹಾಗೂ ಹೆಬ್ಬಾವುಗಳನ್ನು ಹಿಡಿದು ಅವುಗಳನ್ನು ಸಂರಕ್ಷಿಸಿದ ಕೀರ್ತಿ ಭಟ್ಕಳದ ಅಂಜುಮನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನ ಸಿವಿಲ್ ಇಂಜಿನೀಯರ್ ವಿಭಾಗದ ೨೨ವರ್ಷದ ವಿದ್ಯಾರ್ಥಿ ಮಿಸ್ಬಾ-ಉಲ್-ಹಖ್ ಗೆ ಸಲ್ಲುತ್ತದೆ.  ಈತ ತನ್ನ ೧೧ನೇ ವರ್ಷದ ವಯೋಮಾನದಲ್ಲೆ ಹಾವುಗಳನ್ನು ಹಿಡಿಯು ಕಲೆಯನ್ನು ರೂಢಿಸಿಕೊಂಡಿರುವುದಾಗಿ ಹೇಳುತ್ತಾನೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿನ ಶಮ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ನೌನಿಹಾಲ್ ಶಾಲೆಗಳಲ್ಲಿ ಪಡೆದ ಈತ ಓದಿನಲ್ಲೂ ಮುಂಚೂಣಿಯ ವಿದ್ಯಾರ್ಥಿ, ಈಗ ಸಿವಿಲ್ ಇಂಜಿನೀಯರಿಂಗ್ ಓದುತ್ತಿರುವ ಈತ ಭಟ್ಕಳದ ಯಾವ ಮೂಲೆಯಲ್ಲೂ ಹಾವು ಕಂಡರೆ ಸಾಕು ಅದನ್ನು ಸುರಕ್ಷತವಾಗಿ ಹಿಡಿದು ಅರಣ್ಯ ಇಲಾಖೆಯ ಸುಪರ್ಧಿಗೆ ಒಪ್ಪಿಸುತ್ತಾನೆ. ಹಾವುಗಳನ್ನು ಕಂಡರೆ ಹಿಡಿ, ಕೊಲ್ಲು ಎನ್ನುವ ಜನರ ಮಧ್ಯೆ ಇಂತಹ ಉರಗಪ್ರೇಮಿಯೊಬ್ಬ ತನ್ನ ಮಾನವೀಯ ಸ್ಪರ್ಷದೊಂದಿಗೆ ಅವುಗಳಿಗೆ ಮರುಜೀವ ನೀಡುತ್ತಾನೆ.  ಉತ್ತರಕನ್ನಡ ಜಿಲ್ಲೆಯು ಶೇ೮೦ರಷ್ಟು ಅರಣ್ಯ ಪ್ರದೇಶ ಹೊಂದಿದ್ದು ಅದರ...

ಸ್ಟೀಲ್ ಪಾತ್ರೆಗಳ ಭರಾಟೆಯಲ್ಲಿ ಮರೆಯಾಗುತ್ತಿರುವ ಮಣ್ಣಿನ ಮಡಕೆ

ಇಮೇಜ್
ಸ್ಟೀಲ್ ಪಾತ್ರೆಗಳ ಭರಾಟೆಯಲ್ಲಿ ಮರೆಯಾಗುತ್ತಿರುವ ಮಣ್ಣಿನ ಮಡಕೆ;  ಕುಂಬಾರಣ್ಣ ಈಗ ನೆನಪು ಮಾತ್ರ *ಮುಹಮ್ಮದ್ ರಝಾ ಮಾನ್ವಿ ಹೌದು ಇದು ಪ್ಲಾಸ್ಟಿಕ್ ಯುಗ. ನಮ್ಮ ಮನೆಯ ಪ್ರತಿಯೊಂದು ಸ್ಥಳವನ್ನು ಪ್ಲಾಸ್ಟಿಕ್ ಕಬಳಿಸಿಕೊಂಡಿದೆ. ನಾವು ಚಿಕ್ಕವರಿದ್ದಾಗ ಕುಂಬಾರ ಓಣಿಗೆ ಹೋಗಿ ಬೇಳೆ ಬೇಯಿಸುವ ಮಡಕೆ ತರವುದೆ ಒಂದು ಸಾಹಸ. ಅದನ್ನು ಜೋಪಾನವಾಗಿ ಮನೆಮುಟ್ಟಿಸುವುದರೊಳಗೆ ಸಾಕುಸಾಕಾಗಿ ಹೋಗುತ್ತಿತ್ತು. ಈಗ ಅಂತಹ ಪ್ರಮೇಯವೇ ಇಲ್ಲ. ಏಕೆಂದರೆ ಮಡಕೆಯ ಬದಲಿಗೆ ಲೋಹದ ವಸ್ತುಗಳು ಅಡುಗೆ ಮನೆ ಸೇರಿಕೊಂಡಿವೆ. ಅಲಂಕಾರಿಕ ಮಣ್ಣಿನ ಪರಿಕರಕಗಳ ಬದಲಾಗಿ ಆರ್ಟಿಫಿಸಿಯಲ್ ಪ್ಲಾಸ್ಟಿಕ್ ವಸ್ತುಗಳು ತಮ್ಮ ಜಾಗವನ್ನು ಪಡೆದುಕೊಂಡಿವೆ.  ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ ಹಾರ್‍ಯಾರಿ ಮಣ್ಣಾ ತುಳಿದಾನ ಹಾರಿ ಹಾರ್‍ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ ನಾರ್‍ಯಾರು ಹೊರುವಂತ ಐರಾಣಿ ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ ಘಟ್ಟಿಸಿ ಮಣ್ಣಾ ತುಳಿದಾನ ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ ಮಿತ್ರೇರು ಹೊರುವಂತ ಐರಾಣಿ ಈ ಜಾನಪದ ಹಾಡಿನ ಕುಂಬಾರಣ್ಣ ಈಗ ನೆನಪು ಮಾತ್ರ. ಕುಂಬಾರಣ್ಣನೀಗ ಮುಂಜಾನೆದ್ದು ಹಾಲು ಬಾನು ಉಂಡು,ಹಾರ್‍ಯಾಡಿ ಮಣ್ಣನ್ನು ತುಳಿಯುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಆಧುನಿಕತೆಯ ಭರಾಟೆಯಲ್ಲಿ ಜನರು ಕುಂಬಾರಣ್ಣ ಮಾಡಿದ ಮಣ್ಣಿನ ಮಡಿಕೆಗಳನ್ನು ಕೊಳ್ಳಲು ಸಿದ್ದರಿಲ್ಲ. ಅಲ್ಲಲ್ಲ...

ಭಟ್ಕಳ ಪುರಸಭೆ ಚುನಾವಣೆ

ಭಟ್ಕಳ ಪುರಸಭೆ ಚುನಾವಣೆ;ಗೆದ್ದವರ ಬಾಲ ಹಿಡಿಯುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು *ಎಂ.ಆರ್.ಮಾನ್ವಿ ಸ್ಥಳಿಯಾಡಳಿತ ಚುನಾವಣೆಗಳು ಮುಗಿದು ಫಲಿತಾಂಶವು ಹೊರಬಿದ್ದಿದೆ. ಯಾರ್‍ಯಾರ ಹಣೆಬರಹ ಏನು ಎಂಬುದು ಈಗಾಗಲೇ ಸಾಬೀತಾಗಿದೆ. ಈಗ ಪ್ರಮುಖ ರಾಜಕೀಯ ಪಕ್ಷಕಗಳಲ್ಲಿ ಅಭ್ಯರ್ಥಿಗಳ ಲೆಕ್ಕಚಾರ ಶುರುವಾಗಿದೆ. ಯಾವ ಪಕ್ಷದ ಅಭ್ಯರ್ಥಿಗಳು ಯಾವ ಯಾವ ವಾರ್ಡಿನಲ್ಲಿ ಗೆಲ್ಲುವು ಸಾಧಿಸಿದ್ದಾರೆ ಎನ್ನುವ ಗುಣಕಾರ ಭಾಗಕಾರಗಳು ಪ್ರಾರಂಭವಾಗಿದ್ದು, ಕಾಂಗ್ರೇಸ್, ಜೆ.ಡಿ.ಎಸ್. ಹಾಗೂ ಮಾಜಿ ಸಚಿವರು ಚುನಾವಣೆಯಲ್ಲಿ ಗೆದ್ದವರು ತಮ್ಮ ಬೆಂಬಲಿಗರು ಎಂದು ಹೇಳಿಕೊಳ್ಳುತ್ತ ಗೆದ್ದವರ ಬಾಲ ಹಿಡಿಯುವ ತವಕದಲ್ಲಿದ್ದಾರೆ.  ೨೩ಮಂದಿ ಸದಸ್ಯರನ್ನು ಹೊಂದಿರುವ ಭಟ್ಕಳ ಪುರಸಭೆಯಲ್ಲಿ ಕಾಂಗ್ರೇಸ್ ೨ ಜೆ.ಡಿ.ಎಸ್.೧ಕ್ಷೇತ್ರದಲ್ಲಿ ಪಕ್ಷದ ಬ್ಯಾನರ್ ನಡಿ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ ೨೦ ಮಂದಿ ಸದಸ್ಯರು ಪಕ್ಷೇತರ ಅಭ್ಯರ್ಥಿಗಳಾಗಿ  ಸ್ಪರ್ಧಿಸಿದ್ದು ಅದರಲ್ಲಿ ೧೩ಮಂದಿ ಸದಸ್ಯರು ಇಲ್ಲಿನ ಪ್ರಮುಖ ರಾಜಕೀಯ,ಸಾಮಾಜಿಕ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್-ವ- ತಂಝೀಮ್ ಹಾಗೂ ಮೊಹಲ್ಲಾಗಳ ಮಸೀದಿ ಕಮಿಟಿಗಳ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದು ರಾಜ್ಯಕ್ಕೆ ಮಾದರಿಯಾಗಿದ್ದಾರೆ.  ಈಗ ಭಟ್ಕಳದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಪತ್ರಿಕಾಗೋಷ್ಟಿಗಳನ್ನು ಕರೆದು ಗೆದ್ದವರಲ್ಲಿ ನಾಲ್ಕು ಮಂದಿ ತಮ್ಮ ಬೆಂಬಲಿಗರು ಎಂದು ಹೇಳಿದರೆ, ಶಾಸಕ ಜ...

‘ಮಹಿಳೆಯರ ಶೋಷಣೆ ಮುಕ್ತ ಬದುಕು ರೂಪಿಸಲು ಇದು ಸೂಕ್ತ ಸಮಯ’

ಇಮೇಜ್
ಮಾ.೮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಈ ಲೇಖನ ಎಂ.ಆರ್.ಮಾನ್ವಿ. ೨೦೧೩ನೇ ಮಾರ್ಚ ೮ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರಲ್ಲೇನು ವಿಶೇಷ, ಪ್ರತಿವರ್ಷವೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಎನ್ನವುದು ನಿಮ್ಮ ಪ್ರಶ್ನೆಯಾಗಿದ್ದರೆ ಖಂಡಿತವಾಗಿಯೂ ನಿಮ್ಮ ಪ್ರಶ್ನೆ ಸಹಜವಾದುದೇ. ಆದರೆ ಬಾರಿಯ ದಿನಾಚರಣೆಗೊಂದು ಮಹತ್ವ ಇರುವುದು ಅದರ ಘೋಷವಾಖ್ಯದಲ್ಲಿ. A promise is a promise: time  for action to end violence against women’   “ಮಹಿಳೆಯ ಶೋಷಣೆ ಕೊನೆಗಾಣಿಸಲು ಇದು ಸೂಕ್ತ ಸಮಯ; ಇದೊಂದು ಪ್ರತಿಜ್ಞೆ” ಎನ್ನುವ ಸಂಕಲ್ಪದೊಂದಿಗೆ ೨೦೧೩ನೇ ವರ್ಷವನ್ನು ಆಚರಿಸುತ್ತಿರುವುದೇ ಇದಕ್ಕೆ ಕಾರಣ.   ಇತ್ತಿಚೆಗೆ ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ಶೋಷಣೆ, ದೌರ್ಜನ್ಯದ ಹಿನ್ನೆಲೆಯಲ್ಲಿ ಇಂತಹದ್ದೊಂದು ಘೋಷವ್ಯಾಖ್ಯ ಬಹಳ ಮಹತ್ವ ಪಡೆದುಕೊಂಡಿದೆ. ನಿಜಕ್ಕೂ ಮಹಿಳೆಯರ ಮೇಲಿನ  ಶೋಷಣೆಯನ್ನು ಕೊನೆಗಾಣಿಸಲು ಇದು ಸೂಕ್ತ ಸಮಯ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ನಡೆದ ಮಹಿಳಾ ದೌರ್ಜನ್ಯಗಳು, ಶೋಷಣೆಗಳು ಲೆಕ್ಕ ಹಾಕಿದರೆ ಬರೆಯಲು ಪುಟಗಳು ಸಾಲವು.    ನಮ್ಮ ಕಾನೂನು ಮಹಿಳೆಯರಿಗೆ ಯಾವ ರೀತಿಯ ರಕ್ಷಣೆಯ ಭರವಸೆಯನ್ನು ನೀಡಿದೆಯೂ ಅದಕ್ಕಿಂತ ಹತ್ತುಪಟ್ಟು ಮಹಿಳಾ ಶೋಷಣೆಯ ಘಟನ...

ಭಟ್ಕಳ ಪುರಸಭೆ ಚುನಾವಣೆ ರಾಜ್ಯಕ್ಕೆ ಮಾದರಿ; ೨೩ರಲ್ಲಿ ೧೩ವಾರ್ಡುಗಳಿಗೆ ಅವಿರೋಧ ಆಯ್ಕೆ

ಭಟ್ಕಳ ಪುರಸಭೆ ಚುನಾವಣೆ ರಾಜ್ಯಕ್ಕೆ ಮಾದರಿ; ೨೩ರಲ್ಲಿ ೧೩ವಾರ್ಡುಗಳಿಗೆ ಅವಿರೋಧ ಆಯ್ಕೆ ಮೊಹಲ್ಲಾದ ಮಸೀದಿ ಕಮಿಟಿಗಳೇ ಇಲ್ಲಿ ಹೈಕಮಾಂಡ್ *ಮುಹಮ್ಮದ್ ರಝಾ ಮಾನ್ವಿ ಚುನಾವಣೆಯಲ್ಲಿ ಮರಾಮಾರಿ, ಟಿಕೆಟಿಗಾಗಿ ಪೈಪೋಟಿ ಇದ್ದದ್ದೇ. ಇದೇ ಸುದ್ದಿಗಳು ಚುನಾವಣೆ ಮುಗಿಯುವವರೆಗೂ ಪತ್ರಿಕೆಗಳಲ್ಲಿ ರಾರಾಜಿಸುತ್ತಿರುತ್ತವೆ. ಆದರೆ ಹೊಡೆದಾಟ ಬಡಿದಾಟದ ಸುದ್ದಿಗಳು ಎಲ್ಲೂ ಕಾಣ ಸಿಗುವುದಿಲ್ಲ.  ಈಗ ಮತ್ತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಇಲ್ಲಿಯೂ ಜನರು ತಮ್ಮ ತಮ್ಮ ಪಕ್ಷದ ಬ್ಯಾನರ್ ನಡಿ ತಮ್ಮದೆ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಹರಸಹಾಸಕ್ಕಿಳಿದ್ದಿದ್ದಾರೆ. ಎಲ್ಲೋ ಒಂದೆರೆಡು ಕಡೆ ಅಭ್ಯರ್ಥಿಗಳ ಕೊರತೆಯಿಂದಲೂ ಅಥವಾ ಆ ವಾರ್ಡಿನ ವ್ಯಕ್ತಿಯ ವರ್ಚಸ್ಸಿನಿಂದಲೂ ಅವಿರೋಧ ಆಯ್ಕೆಗಳು ನಡೆಯುತ್ತವೆ. ಆದರೆ ಯೋಜಿತ ಮತ್ತು ಕ್ರಮಬದ್ಧ ರೀತಿಯಲ್ಲಿ ಆ ವಾರ್ಡಿನ ಜನತೆ ಮುಂದೆ ನಿಂತು ತಮ್ಮ ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ವಿರಳ ಮತ್ತು ಅಪರೂಪ.  ಪಂಚಾಯತ್, ಹಾಗೂ ಪುರಸಭೆ ಚುನಾವಣೆಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಗೆಲುವು ಸಾಧಿಸಿ ತಮ್ಮ ಅಧಿಕಾರವಧಿಯಲ್ಲ ಆ ಹಣವನ್ನು ಮರುಪೂರಣಗೊಳಿಸಲು ಹೆಣಗಾಡುತ್ತಿರುವ ಎಷ್ಟೋ ಮಂದಿ ಜನಪ್ರತಿನಿಧಿಗಳು ನಾವು ಕಂಡಿಲ್ಲ? ಯಾವುದೇ ಆಯ್ಕೆಗೊಂಡ ವ್ಯಕ್ತಿ ಸಾಮಾಜಿಕ ತುಡಿತ ಹಾಗೂ ಕಳಕಳಿಯಿಮದ ತನ್ನ ವಾರ್ಡಿನ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾನೆ? ಅಥವಾ ಆ ವ್ಯಕ್ತಿಯ ಕೊ...

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ಇಮೇಜ್
‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು ಮತ್ತೊಮ್ಮೆ ಕರಾವಳಿಯ ಈ ಪುಟ್ಟ ಶಾಂತಿಯ ನಗರ ಭಟ್ಕಳ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ದೇಶದ ಯಾವ ಮೂಲೆಯಲ್ಲಿ ಏನಾದರೂ ಅನಾಹುತ ಜರಗಿದರೆ ಅದಕ್ಕೆ ಸುತ್ತಿಬಳಸಿ ಭಟ್ಕಳ್ ಸಹೋದರರ ಹೆಸರನ್ನು ಮಾಧ್ಯಮಗಳಲ್ಲಿ ತೇಲಿ ಬಿಡುವುದರ ಮೂಲಕ ಪೊಲೀಸರು ಭಟ್ಕಳದ ಹೆಸರನ್ನು ಹಾಳುಮಾಡುವ ತವಕದಲ್ಲಿರುತ್ತಾರೆ.  ಎಲ್ಲೇ ಸ್ಪೋಟಗಳು ನಡೆಯಲಿ ಸ್ಪೋಟ ನಡೆದ ಹತ್ತು ನಿಮಿಷದಲ್ಲೆ ‘ಭಟ್ಕಳ್’ ಹೆಸರು ಯಾವುದೇ ಅಡೆತಡೆಯಿಲ್ಲದೆ ರಾಷ್ಟ್ರೀಯ ಅಂತರಾಷ್ಟ್ರೀಯ ಟಿವಿ ಪರದೆಗಳ ಮೇಲೆ ಹೈಲೈಟ್ ಆಗುತ್ತೆ. ಹಾಗೆಯೆ ಪೊಲೀಸ್ ಅಧಿಕಾರಿಗಳ ಹಿಡಿತವಿಲ್ಲದ ನಾಲಗೆಯ ಮೆಲೆ ಹರಿದಾಡುತ್ತದೆ. ಅಲ್ಲಿಗೆ ಮುಗಿಯಿತು ಅಸಲಿ ಭಯೋತ್ಪಾದಕರು ಪರದೆಯಿಂದ ಹಿಂದಕ್ಕೆ ಸರಿಯುತ್ತಾರೆ. ಒಂದೆರಡು ದಿನಗಳಲ್ಲಿ ಘಟನೆಯಲ್ಲಿ ಉಂಟಾದ ಸಾವು ನೋವುಗಳು ಸಂತೃಸ್ತರ ಆಕ್ರಂದನಗಳು ಮರೆಯಲಾರಂಭವಾಗುತ್ತವೆ. ಅಲ್ಲಿಗೆ ಪೊಲೀಸ್ ಅಧಿಕಾರಿಗಳ ಕೆಲಸವೂ ಮುಗಿಯುತ್ತದೆ. ಮತ್ತೆ ಯಾವುದದಾರೂ ದುರ್ಘಟನೆಗಳು ನಡೆದಲ್ಲಿ ಭಟ್ಕಳ್ ಸಹೋದರರು ನೆನಪಾಗುತ್ತಾರೆ. ಹೈದರಾಬಾದ್ ನ ದಿಲ್ ಸುಖ್ ನಗರದ ಸ್ಪೋಟದಲ್ಲೂ ಆಗಿದ್ದು ಇಷ್ಟೇ ತಾನೆ. ಸ್ಪೋಟದ ಕೆಲವೆ ಕ್ಷಣದಲ್ಲಿ ಟಿವಿ ಪರದೆ ಮೇಲೆ ರಿಯಾಝ್ ಹಾಗೂ ಇಖ್ಬಾಲ್ ಭಟ್ಕಳ್ ನ ಹೆಸರು ರಾರಾಜಿಸಿದ್ದು. ಇಷ್ಟಕ್ಕೂ ದೇಶದ ಯಾವೆಲ್ಲ ಸ್ಪೋಟಗಳು ನಡೆದವು ಆ ಎಲ್ಲ ಸ್ಪೋಟಗಳಲ್ಲೂ ರಿಯಾಜ್ ಹಾಗೂ ಇಖ್ಬಾಲ್ ನ ಕ...

yammarmanvi.com ಮನದ ಮಾತು: ನಮ್ಮ ಕಾಲೇಜು ಹುಡ್ಗೀರು ಎಷ್ಟು ಸೇಫ್ ಆಗಿದ್ದಾರೆ???

yammarmanvi.com ಮನದ ಮಾತು: ನಮ್ಮ ಕಾಲೇಜು ಹುಡ್ಗೀರು ಎಷ್ಟು ಸೇಫ್ ಆಗಿದ್ದಾರೆ???

ನಮ್ಮ ಕಾಲೇಜು ಹುಡ್ಗೀರು ಎಷ್ಟು ಸೇಫ್ ಆಗಿದ್ದಾರೆ???

ನಮ್ಮ ಕಾಲೇಜು ಹುಡ್ಗೀರು ಎಷ್ಟು ಸೇಫ್ ಆಗಿದ್ದಾರೆ??? ಹೌದು ನಿಜವಾಗ್ಲೂ ಇಂತಹದ್ದೊಂದು ಪ್ರಶ್ನೆ ನಮ್ಮಲ್ಲಿನ ಪ್ರತಿಯೊಬ್ಬರಲ್ಲೂ ಮೂಡುವುದು ಸಹಜ. ಇತ್ತಿಚೆಗೆ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಘಟಿಸಿದ ನಂತರವಂತೋ ಇಂತಹ ಪ್ರಶ್ನೆಗಳಿಗೆ ಮತ್ತೊಂದಿಷ್ಟು ಬಲ ಬಂದಂತಾಗಿದೆ. ನಾವು ವಯಸ್ಸಿಗೆ ಬಂದ ಹುಡುಗಿಯರನ್ನು ಕಾಲೇಜು ಕಳುಹಿಸುವ ನೆಪದಲ್ಲಿ ಮನೆಯಿಂದ ಬಹುದೂರ ಕಳುಹಿಸಿಬಿಡುತ್ತೇವೆ. ಹಾಸ್ಟೆಲ್ಲುಗಳಲ್ಲೊ, ಪೆಯಿಂಗ್ ಗೆಸ್ಟ್ ರೂಪದಲ್ಲೂ ನಮ್ಮ ಮಕ್ಕಳು ನಮ್ಮಿಂದ ಬಹುದೂರ ಹೋಗಿ ವಿದ್ಯಾರ್ಜನೆಯಲ್ಲಿ ತೊಡಗುತ್ತಾರೆ. ಅಲ್ಲಿ ಅವರೇನು ಮಾಡುತ್ತಾರೆ? ಎಂತಹ ತೊಂದರೆಯಲ್ಲಿ ಸಿಕ್ಕುಹಾಕಿಕೊಂಡಿದ್ದಾರೆ? ಅವರು ಸೇಫಾಗಿದ್ದಾರಾ? ಎನ್ನುವ ತಲೆ ಹಿಂಡುವ ಪ್ರಶ್ನೆಗಳ ನಡುವೆಯೂ ನಾವು ಅನಿವಾರ್ಯವಾಗಿ ನಮ್ಮ ಮಕ್ಕಳನ್ನು  ನಮ್ಮಿಂದ ದೂರ ಕಳುಹಿಸುತ್ತೇವೆ. ಆದರೆ ಅವರ ಮನಸ್ಸು ಮಾತ್ರ ತಮ್ಮ ಮಕ್ಕಳ ಕುರಿತಾಗಿಯೆ ಚಿಂತಿಸುತ್ತಿರುತ್ತದೆ. ಇದು ಗಂಡು ಮತ್ತು ಹೆಣ್ಣುಮಕ್ಕಳಿಬ್ಬರಿಗೂ ಅನ್ವಯಿಸುವಂತಹದ್ದು. ಹೆಣ್ಣುಮಗಳಾದರೆ ಅವಳ ಬಗ್ಗೆ ಹೆಚ್ಚು ಕಾಳಜಿ. ಗಂಡು ಮಗನ ಕುರಿತಂತೆ ಹೆಚ್ಚೇನು ತಲೆಕೆಡಿಸಿಕೊಳ್ಳಲು ಹೋಗಲಾರರು. ಆದರೂ ಕೆಲವು ಪಾಲಕರು ತಮ್ಮ ಮಕ್ಕಳ ಭವಿಷ್ಯ ಕುರಿತಂತೆ ಬಹಳಷ್ಟು ಚಿಂತಿತರಾಗಿರುವುದಂತೂ ಅಷ್ಟೆ ಸತ್ಯ. ನಾವು ಯಾಕೆ ನಮ್ಮ ಮಕ್ಕಳ ಕುರಿತು ಚಿಂತಿಸಬಾರದು? ಕೆಲವರು ಇದನ್ನು ಅತಿಯಾಯಿತೆಂದು ಹೇಳಬಹುದು. ಮಕ್ಕಳ ಕುರಿತಂತೆ ಅಷ್ಟೊಂದು ಕಟ್ಟುನಿ...

ಇತಿಹಾಸ ನಿರ್ಮಿಸಲಿರುವ ೨೦೧೧ ರ ಜನಗಣತಿ- ಒಂದಿಷ್ಟು ಮಾಹಿತಿ

ಇತಿಹಾಸ ನಿರ್ಮಿಸಲಿರುವ ೨೦೧೧ ರ ಜನಗಣತಿ- ಒಂದಿಷ್ಟು ಮಾಹಿತಿ ಮಾನವೇತಿಹಾಸದಲ್ಲಿ ಕಂಡು ಕೇಳರಿಯದ ಬಹು ಕೋಟಿ ವೆಚ್ಚದ ೧೫ನೇ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಪೆ.೯-೨೦೧೧ರಿಂದ ಎರಡನೇ ಹಂತದ ಜನಗಣತಿ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಇದೊಂದು ರಾಷ್ಟ್ರೀಯ ಯೋಜನೆಯಾದ್ದರಿಂದ ಪ್ರತಿಯೊಬ್ಬರು ಈ ಕಾರ್ಯಕ್ರಮದ ಭಾಗವಾಗಬೇಕು. ಇದರ ಯಶಸ್ವಿಗೆ ನಾವೆಲ್ಲರೂ ಪಣತೊಡಬೇಕು ಅಂದಾಗ ಮಾತ್ರ ಇದರ ಉದ್ದೇಶ ಸುಲಭವಾಗಿ ಈಡೇರಬಹುದು . ಇಲ್ಲವಾದರೆ ಹತ್ತರಲ್ಲಿ ಇದು ಒಂದು ಎಂಬಂತೆ ಕಾಟಾಚಾರದ ಗಣತಿಯಾಗಿ ಬಿಡಬಹುದು. ನಮ್ಮ ದೇಶವು ಈತನಕ ೧೫ ಜನಗಣತಿಗಳನ್ನು ಕಂಡಿದೆ. ಪ್ರತಿ ಬಾರಿ ಹಲವಾರು ಲೋಪದೋಷಗಳನ್ನು ಹೊತ್ತುಕೊಂಡು ನಡೆದ ಜನಗಣತಿ ಕಾರ್ಯ ಕಾಟಾಚಾರವೆಂಬಂತೆ ನಡೆಯುತ್ತಿತ್ತು. ಗಣತಿಗೆ ಬಂದ ಗಣತಿದಾರರು ಗಡಿಬಿಡಿಯಲ್ಲಿ ಅದೆಷ್ಟೋ ಜನರನ್ನು ಗಣತಿಯ ವ್ಯಾಪ್ತಿಗೆ ತರದೆ ಸರ್ಕಾರಕ್ಕೆ ವರದಿಯನ್ನು ನೀಡುತ್ತಿದ್ದ ಅದೆಷ್ಟು ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಜಣಗಣತಿ ಕಾರ್ಯವು ಒಂದು ರಾಷ್ಟ್ರ ಕಟ್ಟುವ ಕಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ನಮ್ಮ ಪಾಲೆಷ್ಟು? ಎನ್ನುವುದನ್ನು ನಾವು ಅವಲೋಕಿಸಿಕೊಳ್ಳಬೇಕಾಗಿದೆ. ನಾನು ಭಾರತಿಯ ಪ್ರಜೆಯಾಗಿ ಈ ರಷ್ಟ್ರೀಯ ಯೋಜನೆಯಲ್ಲಿ ಎಷ್ಟರ ಮಟ್ಟಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ ಎನ್ನುವುದರ ಕುರಿತು ಅವಲೋಕನೆ ಮಾಡಿಕೊಳ್ಳುವುದು ಒಳಿತು. ವಿಶ್ವವೇ ನಿಬ್ಬೆರಗಾಗಿ ನೋಡುವ ಭಾರ...

ಕಾವ್ಯಾಲಯ

ನಿಮ್ಮ ನೆನಪು ನಿಮ್ಮ ನೆನಪಿನಿಂದ ನನ್ನ ಕಣ್ಣು ತುಂಬಿ ಬಂದಿತು ನಿಮ್ಮ ನೆನಪಿನಿಂದ ನಮಗೆ ನವ ಚೈತನ್ಯ ತುಂಬಿತು ನಿಮ್ಮವಾಣಿಯನ್ನು ಕೇಳಿ ಕಲ್ಲು ಹೃದಯ ಕರಗಿತು ನಿಮ್ಮ ಅನುಸರಣೆಯು ಜೀವನ ಪಾವನಗೊಳಿಸಿತು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ನೀವು ತಂದ ದೇವ ಗ್ರಂಥ ನನ್ನ ಬದುಕೆ ರೂಪಿಸಿತು ನೀವು ಬಿಟ್ಟು ಹೋದ ಧರ್ಮ ನನಗೆ ಮುಕ್ತಿ ನೀಡಿತು ನಿಮ್ಮ ನಾಮಸ್ಮರಣೆಯಲ್ಲಿ ಹಗಲಿರುಳು ಕಳೆಯಲಿ ನಿಮ್ಮ ಗುಣಗಾನ ಮಾಡುತಲೆ ಪ್ರಾಣ ಪಕ್ಷಿಯ ಹಾರಲಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ನಿಮ್ಮ ನಡೆ ನುಡಿ ಎಷ್ಟೊಂದು ಸರಳ ಸುಂದರ ನಿಮ್ಮ ಜೀವನದ ಪುಟಗಳಲ್ಲಿ ಎಲ್ಲವೋ ಗೋಚರ ನಿಮ್ಮ ಅನುಸರಣೆ ಮಾಡುವೆ ನಾ ಅನುಚರ ದೊರಕುವುದು ನನಗಾಗ ನನ್ನಯ ಇಹಪರ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ನೀವು ತಂದ ಸತ್ಯ ಸಂದೇಶ ಲೋಕಕೆ ಬೆಳಕನು ತೋರುವುದು ಸೃಷ್ಟಿಕರ್ತನ ಮಹಾಮಹಿಮೆಯ ಸತ್ಯ ದರ್ಶನ ಮಾಡುವುದು ಇದನರಿಯದ ಮನುಜಕುಲವು ದಾರಿ ತಪ್ಪಿ ನಡೆಯುವುದು ತಪ್ಪಿ ನಡೆದ ದಾರಿ ನಮಗೆ ‘ನರಕ’ದಡೆಗೆ ನೂಕುವುದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್
ಭ್ರಷ್ಟಚಾರದಿಂದ ನಮ್ಮ ಮನೆ ಮತ್ತು ಮನ ಮುಕ್ತವಾಗಲಿ ೨೦೧೦ ನೇ ವರ್ಷದಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟಿದ್ದು ‘ಭ್ರಷ್ಟಚಾರ’ ವಿಷಯವಾಗಿ. ಏಕೆಂದರೆ ಈ ವರ್ಷ ನಮ್ಮ ರಾಜಕೀಯ ಭ್ರಷ್ಟಚಾರ ಸ್ಪೋಟಗೊಂಡು ಇಲ್ಲಿನ ರಾಜಕೀಯ ಲೆಕ್ಕಚಾರಗಳನ್ನೆ ಬುಡಮೇಲನ್ನಾಗಿಸಿತು. ಅದಕ್ಕಾಗಿಯೆ ಈ ವರ್ಷವನ್ನು ಭ್ರಷ್ಟ ರಾಜಕಾರಣಿಗಳ ವರ್ಷ ಎಂದರೆ ತಪ್ಪಾಗಲಾರದು. ಡಿ.೯ನ್ನು ಪ್ರತಿವರ್ಷ ಅಂತರಾಷ್ಟ್ರೀಯ ಭ್ರಷ್ಟಚಾರ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ ದಿನದಂದು ಮೈಕಿನ ಮುಂದೆ ನಿಂತು ಭ್ರಷ್ಟಚಾರದ ಬಗ್ಗೆ ಫುಂಖಾನುಪುಂಖವಾಗಿ ಭಾಷಣ ಬಿಗಿಯುವ ವ್ಯಕ್ತಿಯ ಚರಿತ್ರೆಯೂ ಸಹ ‘ಭ್ರಷ್ಟಚಾರ’ ರಹಿತವಾಗಿರುತ್ತದೆ ಎನ್ನುವುದರ ಯಾವ ಗ್ಯಾರಂಟಿಯನ್ನು ನಾವು ನೀಡಕಾಗಲ್ಲ. ಏಕೆಂದರೆ ಇಂದು ಭ್ರಷ್ಟಚಾರ ಎನ್ನುವುದು ರಕ್ತದಂತೆ ನಮ್ಮ ದೇಹದ ತುಂಬೆಲ್ಲ ಹರಿದಾಡುತ್ತಿದೆ. ವ್ಯವಸ್ಥೆಯ ಹಾಗೆ ಆಗಲು ಕಾರಣ ಯಾರು? ಎನ್ನುವ ಪ್ರಶ್ನೆ ಹುಡುಕಲು ಹೋದರೆ ಬಹಳ ಗಜಲಿನಲ್ಲಿ ಸಿಲುಕೊಳ್ಳಬೇಕಾದೀತು. ಆದ್ದರಿಂದ ಈ ವ್ಯವಸ್ಥೆ ಹೇಗಾದರೂ ಇರಲಿ. ಮೊದಲು ನಾವು ನಮ್ಮ ‘ಮನೆ’ ಮತ್ತು ‘ಮನ’ವನ್ನು ಇಣುಕಿ ನೋಡುವ. ಎಷ್ಟರ ಮಟ್ಟಿಗೆ ನಾವು ಈ ಭ್ರಷ್ಟಚಾರ’ ಎನ್ನುವ ಪೆಡಂಭೂತ ಹುಟ್ಟಲು, ಬೆಳೆಯಲು ಮತ್ತು ತನ್ನ ಕಬಂಧಬಾಹುಗಳನ್ನು ಚಾಚಲು ಕಾರಣೀಕರ್ತರಾಗಿದ್ದೇವೆ ಎನ್ನವುದು ಸ್ಪಷ್ಟವಾಗುತ್ತದೆ. ಭ್ರಷ್ಟಚಾರ’ ಪದಕ್ಕೆ ನಿಘಂಟಿನಲ್ಲಿ ದುರಾಚಾರ, ದುರ್ನೀತಿ, ಅನ್ಯಾಯ ಎಂಬೆಲ್ಲ ಅರ್ಥಗಳು ಇವೆ. ‘ಲಂಚ...

ಹಜ್: ವಿಶ್ವ ಬ್ರಾತೃತ್ವ ಸಂಗಮ

ಹಜ್: ವಿಶ್ವ ಬ್ರಾತೃತ್ವ ಸಂಗಮ ನಾನಾ ದೇಶ, ನಾನಾ ಭಾಷೆ ಇವರ ವೇಷವೂ ಒಂದೇ ಇವರ ಮಂತ್ರವೋ ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಇಲ್ಲಿ ಕರಿಯನು ಒಂದೇ ಬಿಳಿಯನು ಒಂದೇ ಹಿಂದಿ- ಚೀನಿ- ಪಾಕಿ- ಅಫ್ಘಾನಿ ಅಮೇರಿಕನ್, ರಷ್ಯನ್, ಸೌದಿ, ಇರಾನಿ ಇರಲಿ ಯಾವುದೆ ಭಾಷೆ ಇವರ ಘೋಷವು ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಇವರ ಗುರಿಯು ಒಂದೇ ಛಲವೂ ಒಂದೇ ದೇಶದ ಗಡಿ ಗಡಿಯನ್ನು ದಾಟಿ ಒಂದು ಗೂಡಿಹರು ತ್ಯಾಗಬಲಿದಾನದಿ ಸ್ಮರಣೆಯ ಮಾಡಲು ಇಲ್ಲಿಗೆ ಬಂದಿಹರು ಒಂದಾದರಿಲ್ಲಿ ಕರಿಯ, ಬಿಳಿಯರು ಬೆರತರು ಇಲ್ಲಿ ಬಡವ ಶ್ರೀಮಂತರು ಮುರಿದು ಹಾಕಿ ಉಚ್ಛ-ನೀಚತೆಯ ಸಂಕೋಲೆಗಳನು ಕೊಂಡಾಡಿದರು ಅಲ್ಲಾಹನ ನಾಮಸ್ಮರಣೆಯನು ಎಲ್ಲರ ಸ್ತುತಿಯು ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಜಗತ್ತಿನ ಕೇಂದ್ರ ಸ್ಥಾನವಿದು ಜಗತ್ಪಾಲಕನ ಭವ್ಯ ಮಂದಿರವಿದು ಇದು ವಿಶ್ವ ಬ್ರಾತೃತ್ವದ ನೆಲೆವೀಡು ಜೀವನದಿ ಒಮ್ಮೆ ನೀ ಬಂದು ನೋಡು ಇದು ವಿಶ್ವಮಾನವರ ಕೂಡಲ ಸಂಗಮ ಇಲ್ಲಿನ ವೇದಘೋಷವು ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್

ಪ್ರವಾದಿ ಮುಹಮ್ಮದ್(ಸ) ಇಂದಿಗೂ ಪ್ರಸ್ತುತ

ಪ್ರವಾದಿ ಮುಹಮ್ಮದ್(ಸ) ಇಂದಿಗೂ ಪ್ರಸ್ತುತ *ಎಮ್.ಆರ್.ಮಾನ್ವಿ. ಹೌದು. ಈ ಮಾತು ನೂರಕ್ಕೆ ನೂರು ಸತ್ಯ. ಪ್ರವಾದಿ ಮುಹಮ್ಮದ್(ಸ) ಎಂಬಚೈತನ್ಯದ ಚಿಲುಮೆ ಅರೇಬಿಯಾದ ಮರುಳುಗಾಡಿನಲ್ಲಿ ಹುಟ್ಟಿ ಈ ಇಹಲೋಕ ತ್ಯಜಿಸಿ ಇಂದಿಗೂ ೧೫೦೦ ವರ್ಷಗಳೇ ಸಂಧಿವೆ. ಆದರೂ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರ ನಡೆ-ನುಡಿ, ಎಲ್ಲವೂ ಇಂದಿಗೂ ಲಿಖಿತ ರೂಪದಲ್ಲಿ ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿ ಭದ್ರವಾಗಿದೆ. ಅದಕ್ಕಾಗಿಯೆ ಇಂದು ಲೋಕದ ಜನತೆಗೆ ಪ್ರವಾದಿ ಮುಹಮ್ಮದ್(ಸ) ಹಾಗೂ ಅವರು ತಂದ ಇಸ್ಲಾಮ್ ಧರ್ಮ ಕುತುಹಲವನ್ನು ಮೂಡಿಸಿದೆ. ಪ್ರವಾದಿ ಮುಹಮ್ಮದ್(ಸ)ರ ವಿರೋಧಿಗಳು ಅದೆಷ್ಟೂ ಅವರ ಕುರಿತಂತೆ ಗುಲ್ಲೆಬ್ಬಿಸಿದರೂ, ಪ್ರವಾದಿಯನ್ನು ಅರಿಯುವ ಜನರ ಕುತುಹಲ ತಣಿಯುತ್ತಿಲ್ಲ. ಕಳೆದ ನೂರು ವರ್ಷಗಳ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್(ಸ) ರ ಕುರಿತಂತೆ ಬರೆಯಲ್ಪಟ್ಟ ಪುಸ್ತಕಗಳು ಅತಿ ಹೆಚ್ಚು ಮರಾಟಗೊಂಡಿವೆ ಎಂಬುದರ ಕುರಿತು ಸರ್ವೆಯೊಂದು ತಿಳಿಸಿದೆ. ಆದ್ದರಿಂದಲೇ ನಾವು ಪ್ರವಾದಿ ಮುಹಮ್ಮದ್(ಸ) ರನ್ನು ಇಂದಿಗೂ ಪ್ರಸ್ತುತ ಅನ್ನಲೆಬೇಕು. ಅವರು ಬಿಟ್ಟು ಹೋದ ಅಸಂಖ್ಯಾತ ಅಗಣಿತ ನುಡಿ ಮುತ್ತುಗಳು ಹಾಗೂ ಅವರ ಅನುಯಾಯಿಗಳೆ ಇದಕ್ಕೆ ಸಾಕ್ಷಿ. ಅಂಧಕಾರ, ಅನಾಚಾರ,ಜೂಜು ವ್ಯಭಿಚಾರ, ಶರಾಬು, ಹೀಗೆ ಹತ್ತು ಹಲವು ಕೆಡುಕುಗಳು ತಾಂಡವವಾಡುತ್ತಿರುವ ಅರೆಬಿಯಾದ ಆ ಸಮಾಜದಲ್ಲಿ ಸ್ವಾರ್ಥಿಗಳ ಅಟ್ಟಹಾಸವು ಮೇರೆ ಮೀರಿತ್ತು. ಅಲ್ಲಿ ಮಾನವೀಯ ಮೌಲ್ಯಗಳು ಸತ್ತು ಹೋಗಿದ್ದವು. ...