ಪೋಸ್ಟ್‌ಗಳು

2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಇಮೇಜ್
ಭಟ್ಕಳ:೯ , ತಾಲೂಕಿನ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ತೆಂಗಿನಗುಂಡಿ ಬಂದರಿಗೆ ಗುರುವಾರ ಸಂಜೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ ನೀಡಿದ್ದು ಅಲ್ಲಿ ಶಿಥಿಲಗೊಂಡು ಕುಸಿಯು ಹಂತಕ್ಕೆ ತಲುಪಿರುವ ಮೀನು ಹರಾಜು ಕೇಂದ್ರ ಹಾಗೂ ಕುಸಿದಿರುವ ಜಟ್ಟಿಯನ್ನು ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ಇದನ್ನು ಮಳೆಗಾಲ ಆರಂಭವಾಗುವ ಪೂರ್ವದಲ್ಲಿ ದುರಸ್ತಿ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೀನುಗಾರರ ಮುಖಂಡರು ಕಳೆದ ಹಲವು ವರ್ಷಗಳಿಂದ ತೆಂಗಿನಗುಂಡಿ ಬಂದರಿನಲ್ಲಿ ಬ್ರೇಕ್ ವಾಟರ್ ನಿರ್ಮಾಣ , ಹಾಳಾಗಿರುವ ಜಟ್ಟಿ ಹಾಗೂ ಶಿಥಿಲಗೊಂಡಿರುವ ಮೀನು ಹರಾಜು ಕೇಂದ್ರ ರಿಪೇರಿಯ ಕುರಿತು ಒತ್ತಾಯಿಸುತ್ತಲೇ ಬಂದಿದ್ದೇವೆ. ಕಳೆದ ವರ್ಷ ಮೀನು ಹರಾಜು ಕೇಂದ್ರಕ್ಕೆ ಮೇಲ್ಚಾವಣಿ ರಿಪೇರಿ ಮಾತ್ರ ಕೈಗೊಳ್ಳಲಾಗಿದ್ದು , ತಗಡು ಶೀಟ್‌ಗಳು ಗಾಳಿಗೆ ಹಾರಿ ಹೋಗಿದೆ. ಅಳಿವೆ ಪ್ರದೇಶದಲ್ಲಿ ವ್ಯಾಪಕವಾಗಿ ಹೂಳು ತುಂಬಿದ್ದರಿಂದ ಪ್ರತಿವರ್ಷ ಬೋಟುಗಳು ಮುಳುಗಿ ಹಾನಿಯಾಗುತ್ತಲೇ ಇದೆ. ಇದರಿಂದ ಜೀವಹಾನಿಯೂ ಉಂಟಾದ ಉದಾಹರಣೆ ಇದೆ. ಹೂಳು ತುಂಬಿದ್ದರಿಂದ ಬಂದರಿಗೆ ಬರುವ ಬೋಟುಗಳ ಸಂಖ್ಯೆ ಕಡಿಮೆಯಾಗಿದ್ದು , ಬ್ರೇಕ್ ವಾಟರ್ ನಿರ್ಮಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಯಾವ ಬೋಟುಗಳು ತೆಂಗಿನಗುಂಡಿಗೆ ಬರದ ಪರಿಸ್ಥಿತಿ ಉಂಟಾಗುತ್ತದೆ ಎಂದರು. ಮೀನುಗಾರರ ಸಮಸ್ಯೆಗಳನ್ನು ಕೇಳಿದ ಸಚಿವ ಆನಂದ ಆಸ್ನೋಟಿಕರ್ ಬಂದರಿನಲ್ಲ...

ಶ್ರೀ ನಾಗಯಕ್ಷೆ ಮಹಾಸತಿ ಧರ್ಮದೇವಿ ಸಂಸ್ಥಾನದ ಆರನೇ ವರ್ಧಂತಿ ಉತ್ಸವ

ಇಮೇಜ್
ಭಟ್ಕಳ:೯ ಇಲ್ಲಿನ ಶ್ರೀ ನಾಗಯಕ್ಷೆ ಮಹಾಸತಿ ಧರ್ಮದೇವಿ ಸಂಸ್ಥಾನದ ಆರನೇ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಜ್ರಂಭಣೆಯಿಂದ ನೆರವೇರಿತು. ದೇವಸ್ಥಾನದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ವಾಹಿನಿ ಅಧ್ಯಕ್ಷ ಸುರೇಂದ್ರ ಶ್ಯಾನುಭಾಗ್ ಮಕ್ಕಳಿಗೆ ಸಣ್ಣವರಿರುವಾಗಲೇ ಧಾರ್ಮಿಕ ಜಾಗ್ರತೆಯನ್ನು ಮೂಡಿಸಲು ಪಾಲಕರು ಮುಂದಾಗಬೇಕು. ನಮ್ಮ ಆಚಾರ ವಿಚಾರ , ಸಂಸ್ಕೃತಿಯ ಬಗ್ಗೆ ಮಕ್ಕಳು ತಿಳಿದುಕೊಂಡರೆ ದೊಡ್ಡವರಾದ ಮೇಲೆ ಅದೇ ಉತ್ತಮ ಸಂಸ್ಕೃತಿಯನ್ನು ಹೊಂದಲು ಸಾಧ್ಯ. ಯುವ ಜನಾಂಗಕ್ಕೆ ಭಕ್ತಿಯ ಪ್ರೇರಣೆಯಾಗಬೇಕು. ದೇವಸ್ಥಾನದ ವತಿಯಿಂದ ಅನೇಕ ಸಾಮಾಜಿಕ , ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು , ಇನ್ನೂ ಹೆಚ್ಚು ಕಾರ್ಯಗಳಾಗುವಂತಾಗಲಿ ಎಂದರು. ದೇವಸ್ಥಾನದಲ್ಲಿ ನೂತನವಾಗಿ ಅಳವಡಿಸಲಾದ ಎಲ್.ಸಿ.ಡಿ.ಟಿ.ವಿ. ಹಾಗೂ ಶ್ರೀ ದೇವರ ಪೂಜಾ ಕಾರ್ಯಕ್ರಮದ ನೇರ ಪ್ರಸಾರವನ್ನು ಮಂಗಳೂರಿನ ಉಷಾ ಸುರೇಶ ರಾವ್ ಉದ್ಘಾಟಿಸಿದರು. ಉಪಾಧ್ಯಕ್ಷ ವೆಂಕಟೇಶ ಪ್ರಭು ಅವರು ಮಾತನಾಡಿ ಕಳೆದ ಆರು ವರ್ಷಗಳಿಂದ ಆಡಳಿತ ಮಂಡಳಿ ನಡೆಸಿದ ಕಾರ್ಯಗಳನ್ನು ವಿವರಿಸಿ ಇನ್ನೂ ಹೆಚ್ಚಿನ ಕಾರ್ಯಗಳಾಗಬೇಕು ಎಂದು ಆಶಿಸಿದರು. ವೇದಿಕೆಯಲ್ಲಿ ನಾರಾಯಣ ಗವಾಳಿ , ನ್ಯಾಯವಾದಿ ಆರ್.ಆರ್. ಶ್ರೇಷ್ಟಿ ಹಾಗೂ ಮುಂಬೈಯ ಮಾಧವಿ ಕಾಮತ್ ಮಾತನಾಡಿದರು. ದೇವಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಪ್ರಾಸ್ತಾವಿಕವಾಗಿ ಮಾತನ...

ಶ್ರೀರಾಮಚಂದ್ರಾಪುರ ಮಠದ ಶ್ರೀಗಳಿಂದ ಹವ್ಯಕ ಸಭಾಭವನದ ಉದ್ಘಾಟನೆ

ಇಮೇಜ್
ಭಟ್ಕಳ: ೯ , ನಾನು ಎನ್ನುವುದು ಸರಿಯಲ್ಲ ನಾವು ಎಂಬ ಭಾವನೆಯೊಂದಿಗೆ ಜೀವಿಸಬೇಕು ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳು ಅಭಿಪ್ರಯಾ ಪಟ್ಟರು. ಅವರು ಮುರ್ಡೇಶ್ವರದ ಬಸ್ತಿಮಕ್ಕಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾ ಭವನವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು. ತನ್ನ ತನದ ಭಾವನೆಗೆ ಯಾವುದೇ ಬೆಲೆಕಟ್ಟಲಾಗದು. ಭಟ್ಕಳ ಸೀಮಾ ಪರಿಷತ್‌ನವರು ಐಕ್ಯತೆಯಿಂದ ಸಭಾಭವನವನ್ನು ನಿರ್ಮಿಸಿದ್ದಾರೆ. ಇಲ್ಲಿ ಸದಾ ಕಾರ್ಯಕ್ರಮಗಳು ನಡೆದು ಜನರಿಗೆ ಉಪಯೋಗವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಶಾಸಕ ಜೆ.ಡಿ. ನಾಯ್ಕ ಪ್ರತಿಯೊಂದು ಸಮಾಜದ ಕುರಿತು ತಮಗೆ ಉತ್ತಮ ಅಭಿಪ್ರಾಯವಿದೆ. ಹವ್ಯಕ ಸಮಾಜದ ಕುರಿತು ವಿಶೇಷ ಅಭಿಮಾನವಿದೆ. ಶಾಸಕನಾದ ಮೇಲೆ ಸಮಾಜದ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುವುದು ಅಸಾಧ್ಯ. ಆದರೂ ತಾನು ಸಮಾಜದ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಜಿಪಂ ಸದಸ್ಯ ಮಂಕಾಳ ವೈದ್ಯ ಕೇಂದ್ರ ಪರಿಷತ್ತಿನ ಆರ್.ಎಸ್.ಹೆಗಡೆ ಹರಿಗೆ , ಮಾಜಿ ಸಚಿವ ಡಾ. ಎಂ.ಪಿ.ಕರ್ಕಿ ಹವ್ಯಕ ಮಂಡಲದ ಅಧ್ಯಕ್ಷ ಜಿ.ಜಿ. ಭಟ್ಟ ಉಪಸ್ಥಿತರಿದ್ದರು. ಆರಂಭದಲ್ಲಿ ಶಂಖನಾದ , ವೇ.ಮೂ. ರವಿ ಭಟ್ಟ ಬಲ್ಸೆ ಹಾಗೂ ವೇ.ಮೂ. ವಿಶ್ವನಾಥ ಭಟ್ಟ ಇವರಿಂದ ವೇದಘೋಷ , ಜಿತೇಂದ್ರ ಸಂಗಡಿಗರಿಂದ ಪ್ರಾರ್ಥನೆ , ಹವ್ಯಕ ವಲಯದ ಅಧ್ಯಕ...

ಎಸ್.ಎಮ್. ಜಾವಿದ್ ಬಾತಿನ್ ಸಂತಾಪ ಸೂಚಕ ಸಭೆ. ಗಣ್ಯರಿಂದ ಗುಣಗಾನ

ಇಮೇಜ್
ಎಸ್.ಎಮ್. ಜಾವಿದ್ ಬಾತಿನ್ ಸಂತಾಪ ಸೂಚಕ ಸಭೆ. ಗಣ್ಯರಿಂದ ಗುಣಗಾನ ಭಟ್ಕಳ:೫, ಇಲ್ಲಿನ ಸಾಮಾಜಿಕ ಕಾರ್ಯಕರ್ತ ಅಂಜುಮನ್ ಹಾಗೂ ತಂಝೀಮ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಎಸ್.ಎಮ್. ಸೈಯ್ಯದ್ ಆಹ್ಮದ್ ಜಾವಿದ್ ಬಾತಿನ್ ಇತ್ತಿಚೆಗೆ ನಡೆದ ಅಪಘಾತವೊಂದರಲ್ಲಿ ಸಾವಪ್ಪಿದ್ದು ಇಲ್ಲಿನ ಎಲ್ಲರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ ಎಂದು ಶಾಸಕ ಜೆ.ಡಿ. ನಾಯ್ಕ ಅಭಪ್ರಯಾಪಟ್ಟರು. ಅವರು ರವಿವಾರ ರಾತ್ರಿ ೯-೦೦ ಗಂಟೆಗೆ ಫಾರೂಖಿ ಸ್ಟ್ರೀಟ್ ನ ಬರ್ನಿ ಮೈದಾನದಲ್ಲಿ ಅಸದುಲ್ಲಾ ಸ್ಪೋರ್ಟ್ಸ್ ಅಸೋಸೊಯೇಶನ್ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಿದ್ದರು. ಜಾವೀದ್ ಓರ್ವ ನ್ಯಾಯವಾದಿ ಸಮಾಜದ ಎಲ್ಲರೊಂದಿಗೆ ಹೊಂದಾಣಿಕೆಯಿಂದ ಇದ್ದರು ಯಾವುದೇ ಕೆಲಸವಾಗಲಿ ಹಿಂಜರಿಯದೆ ದೈರ್ಯದಿಂದ ಸಾಧಿಸುವಂತಹ ಛಲಗಾರಿಕೆಯನ್ನು ಹೊಂದಿದ್ದರು ಅವರ ಅಗಲಿಕೆಯಿಂದಾಗಿ ಭಟ್ಕಳದ ಮುಸ್ಲಿಮ್ ಸಮುದಾಯಕ್ಕಷ್ಟೆಯಲ್ಲದೆ ಇಡಿ ಭಟ್ಕಳಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಕಾಂಗೈ ಮುಖಂಡ ರಾಮ ಮೊಗೆರ್ ಮಾತನಾಡಿ ಸದಾ ಭಟ್ಕಳದ ಅಭಿವೃದ್ಧಿಯ ಕನಸ್ಸು ಕಾಣುವ ಯುವ ನ್ಯಾಯವಾದಿ ಇಲ್ಲಿನ ಹಿಂದು-ಮುಸ್ಲಿಮ್ ಸೌಹಾರ್ಧತೆಯ ಕುರಿತು ಸದಾ ಚಿಂತಿಸುತ್ತದ್ದರು ನೇರ ನುಡಿಯ ಪ್ರಾಮಾಣಿಕ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಇದು ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದರು. ನ್ಯಾಯವಾದಿ ನಾಗರಾಜ್ ಇ.ಎಚ್. ಜಾವಿದ್ ಬಾತಿನ್ ತಮ್ಮೊಂದಿಗೆ ಎರಡು ವರ್ಷಗಳ ಕಾಲ ಒಂದೇ ಕೋಣೆಯಲ್ಲಿ ಸಹ...

ಉತ್ತರ ಕರ್ನಾಟದ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಿದ ಭಟ್ಕಳದ ಮಜ್ಸಿಸ್-ಎ-ಇಸ್ಲಾಹ್-ವ-ತಂಝೀಮ್

ಇಮೇಜ್
ಉತ್ತರ ಕರ್ನಾಟದ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಿದ ಭಟ್ಕಳದ ಮಜ್ಸಿಸ್-ಎ-ಇಸ್ಲಾಹ್-ವ-ತಂಝೀಮ್ ೧೯೧೨ ರಲ್ಲಿ ನಡೆದ ಬಲ್ಖಾನ್ ಯುದ್ದದಲ್ಲಿ ಉಂಟಾದ ಸಾವು ನೋವುಗಳ ಹಿನ್ನಲೆಯಲ್ಲಿ ಬಲ್ಖಾನ್ ರಿಲೀಫ್ ಕಮಿಟಿಯ ಹೆಸರಿನಲ್ಲಿ ಜನ್ಮತಾಳಿದ ಭಟ್ಕಳದ ಮಜ್ಲಿಸೆ-ಎ-ಇಸ್ಲಾಹ್-ವ-ತಂಝೀಮ್ ಅಂದಿನಿಂದ ಇಂದಿನವರೆಗೂ ಪ್ರಕೃತಿ ವಿಕೋಪಗಳೇ ಆಗಲಿ, ನೆರೆ ಹಾವಳಿಯಾಗಲಿ, ಗಲಭೆಗಳಿಂದ ಜನರು ಸಂತೃಸ್ತರಾಗಲಿ ಅಲ್ಲಿ ತಂಝೀಮ್ ನೀಯೋಗ ಸಹಾಯಕ್ಕಾಗಿ ಧಾವಿಸಿ ಬರುತ್ತದೆ. ಇತ್ತಿಚೆಗೆ ಉತ್ತರ ಕರ್ನಾಟಕದ ಸುಮಾರು ಎಂಟು ಜಿಲ್ಲೆಗಳಲ್ಲಿ ಉಂಟಾದ ನೆರೆಹಾವಳಿಯಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿದ್ದನ್ನು ಯಾರು ಕೂಡ ಮರೆಯುವಂತಿಲ್ಲ. ಭಟ್ಕಳದಿಂದ ದೂರದ ಬಾಗಲಕೋಟೆ ಬಿಜಾಪೂರ ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ಕೈಗೊಂಡ ತಂಝೀಮ್ ಅಲ್ಲಿನ ಸಂತೃಸ್ತರಿಗೆ ತನ್ನ ನೆರವಿನ ಹಸ್ತವನ್ನು ಚಾಚಿದೆ. ಭಟ್ಕಳದಂತ ಚಿಕ್ಕ ಊರಿನಲ್ಲಿರುವ ಈ ಜನರ ಹೃದಯ ಮಾತ್ರ ದೊಡ್ಡದು ಸಂತೃಸ್ತರ ದುರ್ಬಲರ, ಸಮಾಜದಲ್ಲಿ ನಿಕೃಷ್ಟರಾದವರ ಪರವಾಗಿ ಸದಾ ಮಿಡಿಯುವ ಇವರ ಹೃದಯವು ದೇಶದ ಯಾವುದೇ ಭಾಗದಲ್ಲಿ ಏನಾದರೂ ಆಗಲಿ ಅಲ್ಲಿ ಜಾತಿ,ಮತ ಬೇಧವೆನ್ನದೆ ಪರಿಹಾರ ಕಾರ್ಯವನ್ನು ಕೈಗೊಂಡು ಮಾನವೀಯತೆಯನ್ನು ಮೆರೆಯುವ ಈ ಜನ ನಿಜಕ್ಕೂ ನಮ್ಮ ರಾಜ್ಯಕ್ಕೆ ಮಾದರಿಯಾಗಬಲ್ಲರು. ಒಂದು ರೀತಿಯಲ್ಲಿ ಹೇಳಬೇಕಾದರೆ ತಂಝೀಮ್ ಹುಟ್ಟಿಕೊಂಡಿದ್ದೆ ಸಂತೃಸ್ತರಿಗೆ ಪರಿಹಾರವನ್ನು ನೀಡಲು, ಅವರ ದುಃಖದಲ್ಲಿ ಶಾಮೀಲಾಗಲು ಎಂದರೆ ತಪ್ಪ...

yammarmanvi: ಭಟ್ಕಳ ಯುವ ನ್ಯಾಯವಾದಿ ಜಾವೀದ್ ಬಾತಿನ್ ಇನ್ನಿಲ್ಲ.

yammarmanvi: ಭಟ್ಕಳ ಯುವ ನ್ಯಾಯವಾದಿ ಜಾವೀದ್ ಬಾತಿನ್ ಇನ್ನಿಲ್ಲ.

ಭಟ್ಕಳ ಸಂಕ್ಷಿಪ್ತ ಸುದ್ದಿಗಳು

ಇಮೇಜ್
ವೈಭವದಿಂದ ಜರುಗಿದ ಶಿರಾಲಿ ರಥೋತ್ಸವ ಭಟ್ಕಳ: ೩೧,ಶಿರಾಲಿಯ ಚಿತ್ರಾಪುರ ಮಠದ ಶ್ರೀ ಭವಾನಿಶಂಕರ ದೇವರ ೧೪೯ನೇ ರಥೋತ್ಸವ ನಿನ್ನೆ ಸಂಜೆ ಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನೆರವೇರಿತು. ಶ್ರೀ ಮಠದಲ್ಲಿ ರಾಮನವಮಿಯ ದಿನದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ನಿನ್ನೆ ಸಂಜೆ ಐದು ಗಂಟೆಗೆ ಸರಿಯಾಗಿ ರಥವನ್ನು ಎಳೆಯಲಾಯಿತು. ರಥದಲ್ಲಿ ಅರ್ಚಕರೊಂದಿಗೆ ಸ್ವಾಮೀಜಿಯವರೂ ಸಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ರಥಕಾಣಿಕೆ, ದೇವರಿಗೆ ಪೂಜೆ ಪುನಸ್ಕಾರ ಸಲ್ಲಿಸಿದರು. ರಥೋತ್ಸವದ ನಂತರದಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಧರ್ಮ ಸಭಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಠದ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ಎಣ್ಣೆಮಡಿ, ವ್ಯವಸ್ಥಾಪಕ ಭವಾನಿಶಂಖರ ಕೈಲಾಜೆ, ಟ್ರಸ್ಟಿಗಳಾದ ಪ್ರಕಾಶ ಗೋಕರ್ಣ ಮುಂತಾದವರು ಉಪಸ್ಥಿತರಿದ್ದರು. ಚಿತ್ರಾಪುರ ಲೋಕಲ್ ಸಭಾದ ಅಧ್ಯಕ್ಷ ಎಸ್ ಜಿ ಕೊಪ್ಪಿಕರ ಸ್ವಾಗತಿಸಿ, ವಂದಿಸಿದರು. ಇಂದು ಬೆಳಿಗ್ಗೆ ದೇವರ ಮೃಗಭೇಟೆ ಉತ್ಸವವೂ ಸಹ ಅದ್ದೂರಿಯಾಗಿ ನಡೆಯಿತು. ಎ.೧ ರಂದು ಅವಬೃತ ಸ್ನಾನ(ಒಕ್ಕುಳಿ), ಧ್ವಜಾರೋಹಣ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ನಿನ್ನೆ ಸಂಜೆ ನಡೆದ ರಥೋತ್ಸವದ ಸಂದರ್ಭದಲ್ಲಿ ಸಿಪಿ‌ಐ ಗುರು ಮಾಥೂರು ನೇತೃತ್ವ...

ಭಟ್ಕಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ೨೪೭೭ ವಿದ್ಯಾರ್ಥಿಗಳು

ಭಟ್ಕಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ೨೪೭೭ ವಿದ್ಯಾರ್ಥಿಗಳು ಭಟ್ಕಳ:೩೧ ಎಸ್ ಎಸ್ ಎಲ್ ಸಿ ಪರೀಕ್ಷೆ ನಾಳೆಯಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಭಟ್ಕಳದ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗಿದೆ. ಈ ಸಲ ತಾಲೂಕಿನ ೨೮ ಪ್ರೌಢಶಾಲೆಗಳಿಂದ ಒಟ್ಟೂ ೨೪೭೭ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನಗರದ ನ್ಯೂ ಇಂಗ್ಲೀಷ್ ಸ್ಕೂಲ, ಅಂಜುಮಾನ ಆಂಗ್ಲೋ ಉರ್ದು ಹೈಸ್ಕೂಲ್, ಅಂಜುಮಾನ ಹೆಣ್ಣುಮಕ್ಕಳ ಹೈಸ್ಕೂಲ್,ಸೋನಾರಕೇರಿ ಸರಕಾರಿ ಪ್ರೌಢಶಾಲೆ, ಬೆಳಕೆ ಸರಕಾರಿ ಪ್ರೌಢಶಾಲೆ, ಶಿರಾಲಿ ಜನತಾ ವಿದ್ಯಾಲಯ, ಮುರ್ಡೇಶ್ವರ ಜನತಾ ವಿದ್ಯಾಲಯ, ಮುರ್ಡೇಶ್ವರದ ನ್ಯಾಶನಲ್ ಹೈಸ್ಕೂಲ್‌ನಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಈ ಸಲ ಬೆಳಕೆ ಹೈಸ್ಕೂಲಿನಲ್ಲಿ ಹೊಸಾಗಿ ಪರೀಕ್ಷಾ ಕೇಂದ್ರವನ್ನು ತೆರೆದಿರುವುದು ಅಲ್ಲಿನ ವಿದ್ಯಾರ್ಥಿಗಳಿಗೆ ನಗರಕ್ಕೆ ಬರುವುದು ತಪ್ಪಿದಂತಾಗಿದೆ. ತಾಲೂಕಿನಲ್ಲಿ ಎಂಟು ಸರಕಾರಿ, ೯ ಅನುದಾನಿತ ಹಾಗೂ ೧೧ ಅನುದಾನ ರಹಿತ ಸೇರಿದಂತೆ ಒಟ್ಟೂ ೨೮ ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳಿಂದ ೧೧೯೯ ಹೆಣ್ಣುಮಕ್ಕಳು ಹಾಗೂ ೧೨೭೮ ಗಂಡು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಎಂಟು ಪರೀಕ್ಷಾ ಕೇಂದ್ರಗಳಿಗೆ ಅನುದಾನಿತ ಹಾಗೂ ಅನುದಾನಿತ ಪ್ರೌಢಶಾಲೆಗಳ ಹಾಗೂ ಪ್ರಾಥಮಿಕ ಶಾಲೆಗಳ ಸುಮಾರು ೧೨೩ ಶಿಕ್ಷಕರನ್ನು ಕೊಟಡಿ ಮೇಲ್ವಿಚಾರಕರನ್ನಾಗಿ ನೇಮಕಗೊಳಿಸಲಾಗಿದೆ. ಕ್ಷೇತ್ರ ಸಂಪನ್ಮೂಲ ಅಧ...

ಅವಧಿ ಮುಗಿಸಿದ ಪಂಚಾಯತ್ ಅಧಿಕಾರ. ಒಂದು ಹಿನ್ನೋಟ

ಅವಧಿ ಮುಗಿಸಿದ ಪಂಚಾಯತ್ ಅಧಿಕಾರ. ಒಂದು ಹಿನ್ನೋಟ ಭಟ್ಕಳ:೩೧, ಅಂತೋ ಭಟ್ಕಳ ತಾಲೂಕಿನ ಹದಿನಾರು ಗ್ರಾಮ ಪಂಚಾಯತ್‌ಗಳು ತಮ್ಮ ಐದು ವರ್ಷದ ಆಡಳಿತ ಅವಧಿಯನ್ನು ಮುಗಿಸಿ ನಿಟ್ಟುಸಿರು ಬಿಟ್ಟಿವೆ. ಇದೀಗ ಅದರ ಅಧಿಕಾರ ಆಡಳಿತಾಧಿಕಾರಿಗಳ ಕೈಗೆ ಬಂದಿದೆ. ಅಂತೋ ಹಳ್ಳಿಯ ಪಂಚಾಯತ್ ರಾಜಕೀಯಕ್ಕೆ ಒಂದಷ್ಟು ಬ್ರೇಕ್. ಅದು ಸ್ವಲ್ಪ ದಿನ ಎನ್ನಬಹುದು. ಮತ್ತೆ ಎಪ್ರಿಲ್ ತಿಂಗಳಲ್ಲಿ ಪಂಚಯಾತ್ ಚುನಾವಣೆ ನಡೆಸುವುದಾಗಿ ನಮ್ಮ ಸಿ.ಎಮ್. ಘೋಷಿಸಿದ್ದಾರೆ. ಹೋಗಲಿ ಬಿಡಿ. ವಿಷಯ ಅದಲ್ಲ. ವಿಷಯ ಇರುವುದು ಅವಧಿ ಮುಗಿಸಿದ ಪಂಚಾಯತ್ ಅಧಿಕಾರ, ಅದರ ಹಿನ್ನೋಟವನ್ನು ವಿಮರ್ಶಿಸುವುದೆ ಈ ಬರಹದ ಉದ್ದೇಶ. ಕಳೆದ ಐದು ವರ್ಷಗಳಲ್ಲಿ ತಾಲೂಕಿನ ಒಂದೊಂದು ಗ್ರಾಮ ಪಂಚಾಯತ್‌ಗಳು ಒಂದೊಂದು ರೀತಿಯಲ್ಲಿ ಸುದ್ದಿ ಮಾಡಿ ಜನರ ಗಮನ ಸೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಭಟ್ಕಳದ ಕೆಲವು ಪಂಚಾಯತ್‌ಗಳು ವಿವಿಧ ಕಾರಣಕ್ಕೆ ಜಿಲ್ಲೆಯಲ್ಲೇ ಪ್ರಸಿದ್ದಿ ಪಡೆದಿದೆ. ಇಲ್ಲಿನ ಬಹುತೇಕ ಪಂಚಾಯತ್‌ಗಳು ಸದಾ ಗೊಂದಲ, ರಾಜಕೀಯ ಒತ್ತಡ, ಜನಪ್ರತಿನಿಧಿಗಳ ಕಿತ್ತಾಟದಿಂದಲೇ ತನ್ನ ಆಡಳಿತದ ಅವಧಿಯನ್ನು ಮುಗಿಸಿ ಬಿಟ್ಟಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಕೆಲವು ಕಡೆ ಅಧ್ಯಕ್ಷರು-ಕಾರ್ಯದರ್ಶಿ ನಡುವೆ ವೈಮನಸ್ಸು ಬಂದು ಬಡಿದಾಡಿಕೊಂಡು ಪೊಲೀಸ್ ಠಾಣಾ ಮೆಟ್ಟಿಲೂ ಏರಿದ ಪ್ರಸಂಗವೂ ಸಹ ನಡೆದಿತ್ತು. ಅದರಂತೆ ಕೆಲವು ಕಡೆ ಕಡೆ ಚುನಾಯಿತ ಪ್ರತಿನಿಧಿಗಳಲ್ಲಿ ಹೊಂದಾಣಿಕೆ ಇಲ್ಲದೇ ಗೊಂದಲ ಉಂಟಾದ ಘಟನೆಯೂ ...

ಭಟ್ಕಳ ಯುವ ನ್ಯಾಯವಾದಿ ಜಾವೀದ್ ಬಾತಿನ್ ಇನ್ನಿಲ್ಲ.

ಇಮೇಜ್
ಭಟ್ಕಳ ಯುವ ನ್ಯಾಯವಾದಿ ಜಾವೀದ್ ಬಾತಿನ್ ಇನ್ನಿಲ್ಲ . ಭಟ್ಕಳ:೩೧ ಭಟ್ಕಳದ ಯುವ ನ್ಯಾಯವಾದಿ ಜಾವೀದ್ ಆಹ್ಮದ್ ಬಾತಿನ್ ಎಸ್.ಎಮ್. ಇವರು ಬುಧವಾರ ರಾತ್ರಿ ಸುಮಾರು ೮ ಗಂಟೆಗೆ ಶಿರೂರಿನ ಸಮೀಪ ಬೈಕ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಅಪಾಘಾತವು ಹೇಗೆ ಸಂಭವಿಸಿದ್ದು ಎನ್ನುವುದುರ ಕುರಿತು ಯಾವುದೇ ಮಾಹಿತಿಯು ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ದನವೊಂದು ಅಡ್ಡ ಬಂದ ಪರಿಣಾವಾಗಿ ಅದರ ಕೋಡು ಎದೆಗೆ ತಾಗಿದ ಪರಿಣಾಮ ಈ ಸಾವು ಸಂಭವಿಸಿದೆ ಎನ್ಲಗಿದೆ. ಆದರೆ ಯಾವುದೆ ಸ್ಪಷ್ಟ ಮಾಹಿತಿಯು ದೊರೆತಿಲ್ಲ. ಜಾವಿದ್ ಬಾತಿನ್ ಭಟ್ಕಳದಿಂದ ಶಿರೂರು ಕಡೆಗೆ ಎಷ್ಟು ಗಂಟೆಗೆ ಹೋದರು ಮತ್ತು ಏತಕ್ಕಾಗಿ ಹೋದರು ಎನ್ನುವುದು ಸಹ ಯಾರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಇವರ ಅಪಘಾತ ಕುರಿತ ಯಾವುದೇ ಸ್ಪಷ್ಟವಾದ ಮಾಹಿತಿಯು ಮಾಧ್ಯಮಗಳಿಗೆ ಲಭಿಸುತ್ತಿಲ್ಲ. ಇವರು ಭಟ್ಕಳದ ತಂಝೀಮ್ ಹಾಗೂ ಅಂಜುಮನ್ ಸಂಸ್ಥೆಯು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಅತ್ಯಂತ ಸಕ್ರಿಯಾವಾಗಿ ಭಾಗವಹಿಸುತ್ತಿದ್ದರು. ಅಂಜುಮನ್ ಹಾಗೂ ತಂಝೀಮ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದ ಇವರ ಅಗಲಿಕೆಯಿಂದ ಭಟ್ಕಳದ ಸಮಸ್ತ ನಾಗರೀಕರು ತುಂಬಲಾರದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಯುವ ನ್ಯಾಯವಾದಿಯಾಗಿದ್ದರು. ಇವರು ಇಲ್ಲಿನ ಬಾತಿನ್ ಮಾಸ್ಟರ್ ಅವರು ಪುತ್ರರಾಗಿದ್ದಾರೆ.
ಹೇಳಿರಿ ಅಲ್ಲಾಹನು ಏಕೈಕನು ಅವನಿಗೆ ಸರಿಸಮಾರು ಯಾರು ಇಲ್ಲ. ಅವನಿಗೆ ನಿದ್ದೆಯಾಗಲಿ ತೂಕಡಿಕೆಯಾಗಲಿ ಬಾಧಿಸುವುದಿಲ್ಲ.

ಭಟ್ಕಳ:ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ.

ಇಮೇಜ್
ಭಟ್ಕಳ:ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ . ಭಟ್ಕಳ:೨೯, ಭಟ್ಕಳದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆಗೆ ಬೇಸತ್ತ ವಿದ್ಯಾರ್ಥಿ ಸಂಘಟನೆಗೆ ಎಸ್.ಐ.ಓ ಭಟ್ಕಳ ತಾಲೂಕಿನಾದ್ಯಂತ ಪರೀಕ್ಷೆಗಳು ಮುಗಿಯುವವರೆಗೂ ವಿದ್ಯುತ್ ಕಡಿತಗೊಳಿಸದಿರುವಂತೆ ಇಲ್ಲಿನ ಸಹಾಯಕ ಕಮಿಷನರ್ ಹಾಗೂ ಹೆಸ್ಕಾಮ್ ಆಧಿಕಾರಿಗಳಿಗೆ ಮನವಿ ಅರ್ಪಿಸಿದ ಬೆನ್ನ ಹಿಂದೆಯೆ ಹೆಸ್ಕಾಂ ಕಂಪನಿಯು ವಿದ್ಯುತ್ ಕಡಿತವನ್ನು ದ್ವಿಗುಣಗೊಳಿಸಿದ್ದು ಪರೀಕ್ಷೆಯ ಸಮಯದಲ್ಲಿ ಈ ವಿದ್ಯುತ್ ಕಡಿತವು ವಿದ್ಯಾರ್ಥಿಗಳಿಗೆ ಭಾರಿ ಬೆಲೆಯನ್ನು ತೆರುವಂತೆ ಮಾಡಿದೆ. ಸಂಜೆ ಹಾಗೂ ಬೆಳಗಿನ ಸಮಯ ಅರ್ದಗಂಟೆ ವಿದ್ಯುತ್ ಕಡಿತಗೊಳಿಸುತ್ತಿರುವ ಇಲಾಖೆಯು ಈಗ ಅದನ್ನು ದ್ವಿಗುಣಗೊಳಿಸಿ ತನ್ನ ವ್ಯಾಪ್ತಿಗೆ ಬರುವ ಎಲ್ಲಾ ತಾಲೂಕುಗಳಿಗೆ ಫರ್ಮಾನು ಜಾರಿಗೊಳಿಸಿದ್ದು ಅದರಂತೆ ಮುರುಡೇಶ್ವರದಲ್ಲಿ ಬೆಳಿಗ್ಗೆ ೬ ಗಂಟೆಯಿಂದ ೮ ಗಂಟೆವರೆಗೆ, ಸಂಜೆ ೧ರಿಂದ ೨ ಹಾಗೂ ರಾತ್ರಿ ೭ರಿಂದ ೮ ಗಂಟೆಯವರೆಗೆ, ಶಿರಾಲಿ ವ್ಯಾಪ್ತಿಯಲ್ಲಿ ಬೆಳಿಗ್ಗೆ ೬ರಿಂದ ೮, ಸಂಜೆ ೧೨ ರಿಂದ ೧, ಹಾಗೂ ರಾತ್ರಿ ೬ ರಿಂದ ೭ ಗಂಟೆಯವರೆಗೆ, ಅಳ್ವೆಕೋಡಿ ಭಾಗದಲ್ಲಿ ಬೆಳಿಗ್ಗೆ ೮ರಿಂದ ೧೦, ಸಂಜೆ೨ರಿಂದ೩ ಹಾಗೂ ರಾತ್ರಿ ೮ ರಿಂದ ೯ ಗಂಟೆಯವರೆಗೆ, ಕೊಪ್ಪ ವ್ಯಾಪ್ತಿಯಲ್ಲಿ ಬೆಳಿಗ್ಗೆ ೬ರಿಂದ ೧೨, ಸಾಯಂಕಾಲ ೩ರಿಂದ ೬, ರಾತ್ರಿ ೧೧ ರಿಂದ ೩ ಗಂಟೆಯವರೆಗೆ, ಭಟ್ಕಳ ನಗರವನ್ನು ಎರಡು ವಿಭಾಗವನ್ನಾಗಿ ಮಾಡಿದ್ದು...

ಪ್ರವಾದಿ ಅನುಸರಣೆಯಿಂದ ಸಕಲ ಸಮಸ್ಯೆಗಳ ಪರಿಹಾರ

ಇಮೇಜ್
ಪ್ರವಾದಿ ಅನುಸರಣೆಯಿಂದ ಸಕಲ ಸಮಸ್ಯೆಗಳ ಪರಿಹಾರ ಅಬ್ದುಲ್ಲಾ ಜಾವಿದ್ ಭಟ್ಕಳ:೨೯ ,   ಅಸಮಾನತೆ , ಮೇಲು-ಕೀಳು ಉಚ್ಚ-ನೀಚ ಎಂಬ ಬೇಧ ಭಾವವು ನಮ್ಮ ದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು ಈ ಸಮಸ್ಯೆಗೆ ಪರಿಹಾರ ಪ್ರವಾದಿ ಮುಹಮ್ಮದ್(ಸ) ರ ಜೀವನ ಚರ್ಯೆಯಲ್ಲಿ ನಾವು ಕಾಣುತ್ತೇವೆ ಪ್ರವಾದಿಯನ್ನು ಅನುಸರಿಸಿ ಜೀವಿಸುವುದೇ ಪ್ರಸಕ್ತಕಾಲದ ಎಲ್ಲ ಸಮಸ್ಯೆಗಳಿಗೆ ಪರಿಹಾ ಎಂದು ಜಮಾ‌ಆತೆ ಇಸ್ಲಾಮಿ ಹಿಂದ್ ಕರ್ನಾಟಕ ಮತ್ತು ಗೋವಾ ಘಟಕದ ಅಧ್ಯಕ್ಷ ಅಬ್ದುಲ್ಲಾ ಜಾವಿದ್ ಹೇಳಿದರು. ಅವರು ಮುರುಡೇಶ್ವರದ ಶಾದಿ ಮಹಾಲ್ ನಲ್ಲಿ ಜಮಾ‌ಆತೆ ಇಸ್ಲಾಮಿ ಹಿಂದ್ ಮುರುಡೇಶ್ವರ ಶಾಖೆ ‘’ ಸಮಸ್ಯೆಗಳಿಗೆ ಪರಿಹಾರ ಪ್ರವಾದಿ ಮುಹಮ್ಮದ್(ಸ) ರ ಅನುಸರಣೆಯಲ್ಲಿ ಎಂಬ ವಿಷಯದ ಕುರಿತು ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಮ್ಮಲ್ಲಿನ ಹಲವಾರು ಸಮಸ್ಯೆಗಳಿಗೆ ೧೪೦೦ ವರ್ಷಗಳ ಹಿಂದೆಯೆ ಪ್ರವಾದಿ ಮುಹಮ್ಮದ್(ಸ) ಅವರು ಪರಿಹಾರವನ್ನು ಸೂಚಿದ್ದಾರೆ ಎಂದ ಅವರು ಪ್ರವಾದಿ ಮುಹಮ್ಮದ್ ರ ಸಂಪೂರ್ಣ ಜೀವನ ಎಲ್ಲಾ ಮಾನವರಿಗೆ ಮಾದರಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಿವಮೊಗ್ಗ ವಿಭಾಗ ಸಂಚಾಲಕ ಮೌಲಾನ ಸೈಯ್ಯದ್ ಅಬ್ದುಲ್ ಹಸೀಬ್ ಮಾತನಾಡಿ ಮನುಷ್ಯ ಸಮಾಜದಲ್ಲಿ ಪ್ರಾಣಿಯ ಜೀವನ ಸಾಗಿಸುತ್ತಿದ್ದು ಬಂಡವಾಳ ಶಾಹಿಗಳು ಅತಿಶ್ರೀಮಂತರು ಶ್ರೀಮಂತರಾಗುತ್ತಿದ್ದ ಮಕ್ಕಾದಲ್ಲಿ ಎಲ್ಲಿ ಕಂಡರೂ ಅಂಧಕಾರ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಅರಬಿನ ಮ...
ಇಮೇಜ್
ಜನರಿಲ್ಲದ ಜನಸ್ಪಂಧನ ಸಭೆ, ಶಾಸಕ ಅಸಮಾಧಾನ ಭಟ್ಕಳ:೨೮ ಶನಿವಾರದಂದು ಬೆಳಿಗ್ಗೆ ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯ ಸಭಾಂಗಣದಲ್ಲಿ ಸೂಸಗಡಿ ಮಟ್ಟದ ಜನಸ್ಪಂದನಾ ಸಭೆಯು ಜರುಗಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಡಿ.ನಾಯ್ಕ ಜನಸ್ಪಂಧನಾ ಸಭೆಯಲ್ಲಿ ಜನರೇ ಇಲ್ಲದ್ದನ್ನು ಕಂಡು ತೀವ್ರ ಅಸಮಧಾನವನ್ನು ವ್ಯಕ್ತ ಪಡಿಸಿದರು. ಸರಕಾರದ ಯೋಜನೆ ಹಾಗೂ ಜನರ ಸಮಸ್ಯೆಗಳ ಬಗ್ಗೆ ತಿಳಿಯುವಂತಾಗಲು ಜನಸ್ಪಂದನಾ ಸಭೆಯು ಅತಿ ಉಪಯುಕ್ತವಾಗಿದ್ದು ಇಂತಹ ಸಭೆಗಳಲ್ಲಿ ಜನಸಾಮನ್ಯರು ಹಚ್ಚಾಗಿ ಪಾಲ್ಗೊಳ್ಳುವಂತಾಗಬೇಕು ಎಂದರು. ಜಸನ್ಪಂದನಾ ಸಭೆಯಲ್ಲಿ ಜನರಿಗೆ ಸರಕಾರದ ವಿವಿಧ ಇಲಾಖೆಗಳ ಬಗ್ಗೆ ಮಾಹಿತಿ,ಯೋಜನೆಯ ಕುರಿತು ಅರಿವು ಹಾಗೂ ಊರಿನ ಸಮಸ್ಯೆಗಳ ಪರಿಹಾರದ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಇಂತಹ ಸಭೆಗಳಿಗೆ ಸಮರ್ಪಕ ಪ್ರಚಾರ ನೀಡಿದರೆ ಜನರ ಪಾಲ್ಗೊಳ್ಳುವಿಕೆಯು ಹೆಚ್ಚಾಗುತ್ತದೆ ಆದ್ದರಿಂದ ಇಂತಹ ಸಭೆಗಳ ಕುರಿತು ಹೆಚ್ಚಿನ ಪ್ರಚಾರವನ್ನು ನೀಡಬೇಕೆಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಭಟ್ಕಳ ತಾಲೂಕಿನಲ್ಲಿ ಪಡಿತರ ಚೀಟಿಯ ಸಮಸ್ಯೆ ಇದ್ದು ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ಕೂಡಲೇ ಸರಿಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕು. ನಿಜವಾದ ಫಲಾನುಭವಿಗಳಿಗೆ ಬಿ ಪಿ ಎಲ್ ಕಾರ್ಡ ಸಿಗುವಂತಾಗಬೇಕು ಎಂದ ಅವರು ತಾಲೂಕಿನಲ್ಲಿ ಶೇ.೩೦ ರಷ್ಟು ಅನರ್ಹರು ಬಿ ಪಿ ಎಲ್ ಕಾರ್ಡ ಯೋಜನೆಯ ಲಾ...

ಮೂರು ತಿಂಗಳ ನಂತರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ

ಇಮೇಜ್
ಮೂರು ತಿಂಗಳ ನಂತರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ ಭಟ್ಕಳ:೨೮ ಮೂರು ತಿಂಗಳ ಬಳಿಕ ನಡೆದ ಬಳಿಕ ಜರುಗಿದ ಭಟ್ಕಳ ಪುರಸಭೆಯ ಸಾಮಾನ್ಯ ಸಭೆಯು ಹಲವು ಬಿಸಿಬಿಸಿ ಚರ್ಚೆ, ಸದಸ್ಯರ ವಾಗ್ವಾದಗಳಿಂದ ಕೂಡಿ ಸ್ವಾರಸ್ಯಕರವಾಗಿತ್ತು. ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರು ಮತ್ತು ಸದಸ್ಯರ ಮಧ್ಯೆ ವಾಗ್ವಾದವೂ ಉಂಟಾಯಿತು. ಸಾಗರ ರಸ್ತೆಯ ಗೋಳಿ ಕಟ್ಟೆಯ ಬಳಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸದಸ್ಯರ ಗಮನಕ್ಕೆ ತರದೇ ಲಕ್ಷಾಂತರ ರೂಪಾಯಿ ಬಿಡುಗಡೆ ಮಾಡಲಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಇನಾಯತುಲ್ಲಾ ಶಾಬಂದ್ರಿ ಅಧ್ಯಕ್ಷರು ಸಭೆಯಲ್ಲಿ ಠರಾವು ಮಾಡದೇ ಈ ರೀತಿ ಹಣ ಬಿಡುಗಡೆ ಮಾಡುವುದು ಸರಿಯಲ್ಲ ಎಂದರು. ಇದಕ್ಕುತ್ತರಿಸಿದ ಅಧ್ಯಕ್ಷ ಪರ್ವೇಜ್ ಕಾಶೀಂ ಜಿ ಬಿಡುಗಡೆಗೊಳಿಸಲಾದ ಹಣ ಬಾಕಿ ಇದ್ದ ಕುಡ್ಸೆಂಪ ಹಣವಾಗಿದೆ. ಈ ಹಿಂದೆ ಈ ಹಣ ವಾಪಾಸ್ ಹೋಗಿದ್ದು, ಮತ್ತೆ ಬಂದಿದ್ದರಿಂದ ಕಾಮಗಾರಿ ನಡೆಯುವಂತಾಗಿದೆ. ಇದೆಲ್ಲಾ ವಿಷಯವೂ ಸದಸ್ಯರಿಗೆ ಗೊತ್ತಿದೆ ಎಂದು ಸಮಜಾಯಿಸಿದರು. ಅಧ್ಯಕ್ಷರ ಉತ್ತರಕ್ಕೆ ತೃಪ್ತರಾಗದ ಶಾಬಂದ್ರಿ ಈ ಬಗ್ಗೆ ಠರಾವಿನಲ್ಲಿ ಸೇರ್ಪಡೆ ಮಾಡಬೇಕಿತ್ತು ಎಂದು ಹೇಳಿದರು. ಪುರಸಭೆಯಲ್ಲಿ ಕಂಪ್ಯೂಟರ್ ನೀಡಿಕೆಯಲ್ಲಿ ಅವ್ಯವಹಾರ ಮಾಡಿದವರಿಗೆ ಪುನ: ಗುತ್ತಿಗೆ ನೀಡಲಾಗಿದೆ. ನಗರದಲ್ಲಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಕಂಪ್ಯೂಟರ್ ಸರಬರಾಜು ಮಾಡುವವರು ಇಲ್ಲವೇ ಎಂದು ಸದಸ್ಯ ಅಮ್ಜದ್ ಪ್ರಶ್ನಿಸಿದ್ದು ಇದಕ್ಕ...

ಪ್ರವಾದಿ ಮುಹಮ್ಮದ್ ಈ ಜಗತ್ತು ಕಂಡ ಅದ್ಬುತ ವ್ಯಕ್ತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಮತ.

ಇಮೇಜ್
ಪ್ರವಾದಿ ಮುಹಮ್ಮದ್ ಈ ಜಗತ್ತು ಕಂಡ ಅದ್ಬುತ ವ್ಯಕ್ತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಮತ. ಭಟ್ಕಳ: ಈ ಜಗತ್ತಿನ ಪ್ರತಿಯೊಂದು ರಂಗದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕೆಂದು ತೋರಿಸಿದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರರು ಈ ಜಗತ್ತು ಕಂಡ ಒಂದು ಅದ್ಬುತ ವ್ಯಕ್ತಿಯಾಗಿದ್ದಾರೆ ಎಂದು ರಾಮಕ್ಷೇತ್ರ ಧರ್ಮಸ್ಥಳದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಸಂಜೆ ಭಟ್ಕಳದ ಹೋಟೆಲ್ ಟಿ.ಎಫ್.ಸಿ. ಹತ್ತಿರ ಮೈದಾನದಲ್ಲಿ   ಎಸ್.ಐ.ಓ ಭಟ್ಕಳ ಶಾಖೆಯ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈಜಗತ್ತು ಯಾವ ರೀತಿ ಬಾಳಿ ಬದುಕಬೇಕು ಎಂಬುವುದನ್ನು ತಮ್ಮ ಸಂದೇಶ ಹಾಗೂ ಚಾರಿತ್ಯ್ರದ ಮೂಲಕ ತೋರಿಸಿಕೊಟ್ಟಂತಹ ಮಹಾನ್ ಚೈತನ್ಯ ಎಂದು ಬಿಂಬಿಸಿದ ಅವರು ಇಂದು ಅವರ ಅನುಯಾಯಿಗಳು ಪ್ರವಾದಿಯ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿಷಾಧಿಸಿದರು. ಮುಸ್ಲಿಮ ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆಯಬೇಕು, ಧರ್ಮಾಚರಣೆ ಬೇಕು ಧರ್ಮಾಂಧತೆ ಬೇಡ ಎಂಬ ಕಿವಿಮಾತನ್ನು ಹೇಳಿದ ಸ್ವಾಮಿಗಳು ಈ ದೇಶದ ಐಕ್ಯತೆಯು ರಾಜಕೀಯ ಕಾರಣಗಳಿಂದ ಹಾಳಾಗುತ್ತಿದೆ ಎಂದರು.ಯುವಕರು ತಮ್ಮ ಮನಸ್ಸು ಮತ್ತು ಬುದ್ದಿಯನ್ನು ಸ್ಥೀಮಿತದಲ್ಲಿಟ್ಟುಕೊಳ್ಳಬೇಕೆಂದು ಕಿವಿ ಮಾತು ಹೇಳಿದ್ದು ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿ ಇಂದು ಯುವ ಸಮುದಾಯ ಭಯೋತ್ಪಾದನೆಯ ದಾರಿಯನ್ನು ...

ಪರಿಕ್ಷಾ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಬೇಡ, ನಿರಂತರ ವಿದ್ಯುತ್ ನೀಡಿ. ಎಸ್.ಐ.ಓ ಆಗ್ರಹ

ಇಮೇಜ್
  ಪರಿಕ್ಷಾ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಬೇಡ, ನಿರಂತರ ವಿದ್ಯುತ್ ನೀಡಿ.  ಎಸ್.ಐ.ಓ ಆಗ್ರಹ ಭಟ್ಕಳ:ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಪದೇ ಪದೇ ವಿದ್ಯುತ್ ಲೋಡ್ ಶೆಡ್ಡಿಂಗ್ ಹೇರುವುದನ್ನು ಬಲವಾಗಿ ಖಂಡಿಸಿದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಎಸ್.ಐ.ಓ ಭಟ್ಕಳ ಘಟಕವು ಗುರುವಾರದಂದು ಇಲ್ಲಿನ ಸಹಾಯಕ ಕಮಿಷನರ್ ಕಛೇರಿಯಲ್ಲಿ ಪ್ರತಿಭಟನೆಯನ್ನು ವ್ಯಕ್ತ ಪಡಿಸಿ ಪರಿಕ್ಷೆ ಮುಗಿಯುವರೆಗೂ ದಿನದ ೨೪ ಗಂಟೆಯು ವಿದ್ಯುತ್ ನೀಡುವಂತೆ ಆಗ್ರಹಿಸಿತು.  ಪರಿಕ್ಷಾ ಸಮಯದಲ್ಲಿ ಪದೇ ಪದೇ ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಪ್ರತಿಕೂಲ ಪರಿಣಾಮ ಬೀರುತ್ತದೆ, ವಿದ್ಯಾಥಿಗಳು ಭವಿಷ್ಯದ ಸಂಪತ್ತಾಗಿದ್ದು ಅವರು ಆಗಾಗ ಕೈ ಕೊಡುವ ವಿದ್ಯುತ್ ಸಮಸ್ಯೆಯಿಂದ ತೀವ್ರವಾದ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದು ಅವರ ಮುಂಬರುವ ಭವಿಷ್ಯದ ಮೇಲೆ ಗಾಢ ಪರಿಣಾಮ ಬೀರಬಲ್ಲುದು. ಎಂದು ಅದು ಸಹಾಯಕ ಕಮಿಷನರ್ ಗೆ ನೀಡಿದ ಮನವಿಯಲ್ಲಿ ತಿಳಿಸಿದೆ. ಮನವಿಯಲ್ಲಿ ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದು ಮೇ ತಿಂಗಳ ಕೊನೆಯವರೆಗೂ ನಿರಂತರ ೨೪ ಗಂಟೆ ವಿದ್ಯುತ್ ನೀಡಬೇಕು, ಸಾಯಂಕಾಲ ಹಾಗೂ ಬೆಳಿಗ್ಗೆ ವಿದ್ಯಾರ್ಥಿಗಳ ಅಭ್ಯಾಸದ ಸಮಯವಾದ್ದರಿಂದ ಯಾವುದೇ ಕಾರಣಕ್ಕೂ ಆ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಬಾರದು ಎಂಬ ಬೇಡಿಕೆಯನ್ನು ಇಡಲಾಗಿದೆ. ಹಾಗೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಅದು ಅಧಿಕಾರಿಗಳಿ...

ಹಾಡುವಳ್ಳಿಯಲ್ಲಿ ಸಾಂಕ್ರಮಿಕ, ರೋಗ ಓರ್ವ ಮಹಿಳೆ ಸಾವು. ಜನರಲ್ಲಿ ಮನದಲ್ಲಿ ಭೂತದ ಭ್ರಮೆ

ಇಮೇಜ್
ಹಾಡುವಳ್ಳಿಯಲ್ಲಿ ಸಾಂಕ್ರಮಿಕ, ರೋಗ ಓರ್ವ ಮಹಿಳೆ ಸಾವು. ಜನರ ಮನದಲ್ಲಿ ಭೂತದ ಭ್ರಮೆ ಮುಹಮ್ಮದ್ ರಝಾ ಮಾನ್ವಿ. ಭಟ್ಕಳ:೨೬, ಭಟ್ಕಳ ನಗರದಿಂದ ೨೦ಕಿ.ಮಿ ದೂರದಲ್ಲಿರುವ ಹಿಂದುಳಿದ ಪ್ರದೇಶವೆಂದೇ ಗುರುತಿಸಲ್ಪಡುವ ಹಾಡುವಳ್ಳಿಯ ಕೆಲವು ಪ್ರದೇಶಗಳಲ್ಲಿ ಯಾವುದೋ ಸಾಂಕ್ರಾಮಿಕ ರೋಗವು ಮನೆಮಾಡಿಕೊಂಡಿದ್ದು ಅದೀಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಅಲ್ಲಿನ ಜನತೆಯಲ್ಲಿ ದಿಗ್ಭ್ರಮೆಯನ್ನು ಮೂಡಿಸಿದೆ. ಆತಂಕಿತ ಗ್ರಾಮೀಣ ಜನತೆ ಇದೊಂದು ಭೂತ (ಗಾಳಿ) ಎಂದು ಭಾವಿಸಿ ಮಾಟ ಮಂತ್ರ ಅಥವ ಮತ್ಯಾವುದೋ ಬಾಬಗಳಿಗೆ ಮೊರೆಹೋಗಿರುವ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳ ಹಿಂದೆ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಯಾಣಿ, ಮೂರ‍್ಕೋಡಿ,ತೋಟದಮಕ್ಕಿ ಮುಂತಾದ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದೆ ಎನ್ನಲಾಗಿದ್ದು ಅದೀಗ ಬಹಿರಂಗಗೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದಿಂದಲೋ ಅಥವಾ ಇನ್ನಿತರ ಯಾವುದೋ ಕಾರಣದಿಂದಲೋ ಓರ್ವ ಮಹಿಳೆ ಇಲ್ಲಿ ಸಾವನ್ನಪ್ಪಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮೃತ ಮಹಿಳೆ ಮಾಸ್ತಮ್ಮ ನಾರಾಯಣ ನಾಯ್ಕ (೩೫) ಕಳೆದ ಕೆಲವು ದಿನಗಳಿಂದ ತೀವ್ರತರವಾದ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನೂ ಕೂಡ ನೀಡಲಾಗಿತ್ತು. ಆಕೆಯನ್ನು ಬದುಕಿಸಲು ಕುಟುಂಬದವರು ಹಳ್ಳಿವೈದ್ಯರ ಮೊರೆ ಹೋಗಿದ್ದು ಅವ...

ಕುರ‌ಆನ್ ಸೂಕ್ತಿ

ಭೂಮಿಯಲ್ಲಿ ಅಶಾಂತಿಯನ್ನು ಹರಡದಿರಿ. ಅಶಾಂತಿ ಹರಡುವವನನ್ನು ದೇವರು ಮೆಚ್ಚುವುದಿಲ್ಲ.